ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಜಾತ್ರಾ ಮಹೋತ್ಸವಕ್ಕೆ ತೆರಳುವಾಗ ಮಾರ್ಗಮಧ್ಯದ ಕೊತ್ತನೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಪ್ರದೀಪ್ ತಳ್ಳನೂರು ಜೊತೆಯಲ್ಲಿ ಇದ್ದಿದ್ದು ವಿಶೇಷವಾಗಿತ್ತು.
ಅವರು ನಂತರ ಮಾತನಾಡಿ ಚಾಮರಾಜನಗರ ಜಿಲ್ಲೆ ಆರು ದಿನ ನಡೆಯುವ ವಿಶೇಷ ಜಾತ್ರೆ ಸಾವಿರಾರು ಭಕ್ತರು ಭಾಗವಹಿಸಿ ಸಿದ್ದಪ್ಪಾಜಿ ಕೃಪೆಗೆ ಪಾತ್ರರಾಗುತ್ತಾರೆ ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಯಾವುದೇ ತರಹದ ಸಮಸ್ಯೆಗಳು ಹಾಗೂ ಅಡಚಣೆಗಳಾಗಬಾರದು ಎಂದರು
ನಂತರ ಮಾತನಾಡಿದ ಅವರೂ ಜಾತ್ರಾ ಸಂದರ್ಭದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ವಿಚಾರಣೆ ಹಾಗೂ ಚಿಕ್ಕಲೂರು ಶ್ರೀ ಸಿದ್ದಪ್ಪಾಜಿ ಕ್ಷೇತ್ರ ಜಾತ್ರಾ ವಿಶೇಷ ಮಹೋತ್ಸವಕ್ಕೆ ಜಾತ್ರೆ ವೀಕ್ಷಿಸಲು ಬಂದಿರುವೆ ಎಂದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕ ಆರ್ .ನರೇಂದ್ರ ಯುವ ಮುಖಂಡ ಪ್ರದೀಪ್ ಕುಮಾರ್ ತೆಳ್ಳನೂರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಗೂ ಕೊತ್ತನೂರು ಗ್ರಾಮಸ್ಥರು, ಚಿಕ್ಕಲೂರು ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್.




















