ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿಯಮಗಳನ್ನು ಗಾಳಿಗೆ ತೂರಿದ ಪವನ ಶಕ್ತಿ ಕಂಪೆನಿ

ರಾಯಚೂರು /ಮಸ್ಕಿ : ತಾಲೂಕಿನ ಹಲವೆಡೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ಇಲಾಖೆಯಡಿ ಕೆಲವು ಷರತ್ತುಗಳೊಂದಿಗೆ ಅನುಮತಿ ಪಡೆದಿರುವ ಪವನ ಶಕ್ತಿ (windmill) ಕಂಪನಿಗಳು ಕಾನೂನು ಮತ್ತು ರೈತರ ನಾಗರಿಕರ ಜನಹಿತಾಸಕ್ತಿ, ಜೀವವೈವಿದ್ಯತೆ ಗಮನಿಸದೆ ಕಾಮಗಾರಿಯನ್ನು ಆರಂಭಿಸಿದ್ದಾರೆ.


ಗುಂಡ ಗ್ರಾಮ ಪಂಚಾಯತಿಗೆ ಒಳಪಡುವ ಹಲವೆಡೆ ಗ್ರಾಮದ ಸಮೀಪ, ಶಾಲಾ ಆಸ್ಪತ್ರೆಗಳ ಸಮೀಪ ನಿರ್ಮಿಸಲು ಈಗಾಗಲೇ ಪಾಯಿಂಟ್ ಮಾಡಿ ಕಾಮಗಾರಿ ಪ್ರಾರಂಭವನ್ನು ಮಾಡಿದ್ದಾರೆ,
ಈ ಮುಂಚೆ ಗುಡ್ಡ- ಗಾಡು, ಊರಿನಿಂದ ಹಲವು ಕಿ.ಮೀ ದೂರ ಅಚ್ಚುಕಟ್ಟಾಗಿ, ಕ್ರಮಬದ್ದವಾಗಿ ನಿರ್ಮಿಸುತ್ತಿದ್ದ ಈ ಪವನ ಶಕ್ತಿ ಕಂಪನಿಗಳು, ಈಗ ಊರಿನ ನಿವೇಶನಗಳ, ಶಾಲಾ ಆಸ್ಪತ್ರೆಗಳ ಸಮೀಪ ಹೆಜ್ಜೆಯಿಟ್ಟಿರುವುದು ಭಯಭೀಕರತೆ ಮತ್ತು ಚಿಂತಾಗ್ರಸ್ತ ವಾತಾವರಣ ರೈತರಲ್ಲಿ, ಯುವಕರಲ್ಲಿ, ಮೂಡಲು ಕಾರಣವಾಗಿದೆ.
ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ನಿಯಮವಳಿಗಳನ್ನು ಗಾಳಿಗೆ ತೂರಿ ಯಾವುದೇ ಅನುಮತಿ, ದಾಖಲೆಗಳನ್ನು ಪಂಚಾಯತಿಯವರು, ಕಂಪನಿಯವರು ಕೊಡುತ್ತಿಲ್ಲ. ಮತ್ತು ಗ್ರಾಮದ ಹಲವೆಡೆ ಇನ್ನೂ ಖರೀದಿ ಹಂತದಲ್ಲಿ, ವಿಭಜನೆ ಹಂತದಲ್ಲಿ ಹಾಗೂ ಭೂಮಿ ಪರಿವರ್ತನೆಗೂ ಮುಂಚೆಯೇ ಭೂಮಿಯನ್ನು ಅಗೆದು,ಕಂಪನಿ ತನ್ನ ಕಾಮಗಾರಿಗಳನ್ನು ಹಲವೆಡೆ ಆರಂಭಿಸಿ, ವಿಂಡ್ ಮಿಲ್ ನ ಬುನಾದಿಗೆ ಕಾಂಕ್ರೀಟ್ ಹಾಕಿ ಕಬ್ಬಿಣವನ್ನು ಹೊಂದಿಸಿದ್ದಾರೆ.
ಈ ಬಗ್ಗೆ ಕ.ನ. ಇ. ಅ. ನಿ ಇಲಾಖೆ ಸ್ಪಷ್ಟವಾದ ಷರತ್ತನ್ನು ವಿಧಿಸಿದ್ದು ಕೃಷಿ ಭೂಮಿಯನ್ನು-ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿ, ಸಂಬಂಧಪಟ್ಟ ಇಲಾಖೆಗಳಿಂದ ನೊಕ್ ಪಡೆದು ಅಭಿವೃದ್ದಿದಾರರು ಕಾರ್ಯ ಆರಂಭಿಸಬೇಕು ಎನ್ನುವ ನಿಲುವಳಿಗಳು, ಕಾನೂನು ನಿಯಮಗಳನ್ನು ಯಾಕೆ ಇವರು ಪಾಲಿಸುತ್ತಿಲ್ಲ, ರೈತರು ಮತ್ತು ನಾಗರಿಕರ ಹಿತಾಸಕ್ತಿಗಳಿಗಿಂತ ಕಾರ್ಯದರ್ಶಿಗಳಿಗೆ, ಅಧಿಕಾರಿಗಳಿಗೆ ಕಂಪನಿಯವರ ಹಿತವೇ ನಿಮಗೆ ಮುಖ್ಯವಾ ?

ರೈತರು ಭೂಮಿಯನ್ನು ಹದ್ದುಬಸ್ತ್, ಮತ್ತು ಅಳತೆಗೆ ಸುತ್ತ-ಮುತ್ತಲಿನ ಎಲ್ಲಾ ಸರ್ವೇ. ನಂಬರ್ ರೈತರನ್ನು ಕರೆಯಿಸಿ ಎಲ್ಲರ ಸಮಕ್ಷಮದಲ್ಲಿ ಅಳತೆ ಮಾಡಿ ಕಲ್ಲನ್ನು ಹಾಕಲಾಗುತ್ತದೆ. ಈ ನಿಯಮ ಕಂಪನಿಯವರಿಗೆ ಅನ್ವಯಿಸುವುದಿಲ್ಲವೇ?

ಉದ್ಯೋಗ ಮತ್ತು ಹೊಟ್ಟೆಪಾಡಿಗಾಗಿ ಕೋಳಿ, ಹಂದಿ ಈ ರೀತಿ ಸಾಕಾಣಿಗಳಿಗೆ ಅವರು ಸ್ವಚ್ಛತಾ ಹಾಗೂ ವಾಸನೆಯಿಂದ ತೊಂದರೆಯಗಬಾರದು ಎಂದು ನಿವೇಶನಗಳಿಂದ ದೂರ ಹಾಕಬೇಕು ಎಂದು ಅವರಿಗೆ ಹಲವು ದೂರದಷ್ಟು ಜಾಗಕ್ಕೆ ಅನುಮತಿ ನೀಡಲಾಗುತ್ತದೆ, ಯಾಕೆ ಈ ಪವನ ಶಕ್ತಿ ದೊಡ್ಡ ಗಾತ್ರದ ಯಂತ್ರದಿಂದ ಶಬ್ಧ ಮತ್ತು ದುಷ್ಟಪರಿಣಾಮಗಳು ಬೀರುವುದಿಲ್ಲವೇ?
ಪವನ ಶಕ್ತಿ ಉದ್ದೇಶಗಳು ನಮಗಾಗಿ ಬೇಕಾಗಿರುವ ವಿದ್ಯುತ್ ಉತ್ಪಾದನೆಗಾಗಿ, ಜನರ ಹಿತಕ್ಕಾಗಿ,
ಬೇರೆ ತಂತ್ರಜ್ಞಾನದಲ್ಲಿ ಮುಂದಿರುವ ದೇಶಗಳಲ್ಲಿ, ಸಮುದ್ರದಲ್ಲಿ, ಗುಡ್ಡಗಾಡುಗಳಲ್ಲಿ, ಮತ್ತು ಕೃಷಿಗೆ ಯೋಗ್ಯವಲ್ಲದ ಜಾಗದಲ್ಲಿ ಅದು ವ್ಯವಸ್ಥಿತವಾಗಿ, ಯೋಜನೆ ರೂಪಿಸಿ ನಿರ್ಮಿಸುತ್ತಾರೆ.
ಯಾಕೆ ಕ್ಷೇತ್ರದಲ್ಲಿ ಊರಿಗೊಂದು, ಅಡವಿಗೊಂದು ನಿರ್ಮಾಣ ಮಾಡಲು ಅವಕಾಶ ನೀಡುತ್ತಿದ್ದಾರೆ, ಇದರಿಂದ ಕೇವಲ ಪವನ ಶಕ್ತಿ ಯಂತ್ರಕ್ಕೆ ಭೂಮಿ ಹಾಳಾಗುವುದಲ್ಲದೆ, ಇದಕ್ಕೆ ಸರಿಹೊಂದಿಸಿ ವಿದ್ಯುತ್ ಸರಬರಾಜಿಗಾಗಿ ಹಾಕುವ ಕಂಬಗಳು ಇಡೀ ಎಲ್ಲಾ ಪಾಯಿಂಟ್ ನಿಂದ ಬಂದು ದೊಡ್ಡ ಲೈನಿಗೆ ತಲುಪಲು ಅದೆಷ್ಟು ಜಮೀನು ಅಕ್ರಮಿಸಿ ಭೂಮಿಯನ್ನು ಕಬಳಿಸುತ್ತದೆ, ಮತ್ತು ಈಗಾಗಲೇ ರಸ್ತೆಗಳಿಲ್ಲದೆ ಹಲವು ಗ್ರಾಮದ ಜನರು ಪರದಾಡುತ್ತಿದ್ದಾರೆ, ಹಾಗೆಯೇ ಇರುವ ರಸ್ತೆಗಳು ಈ ಕಂಪನಿ ಕಾರ್ಯ ಆರಂಭದಿಂದ ದೈತ್ಯ ಯಂತ್ರಗಳು, ಮತ್ತು ಕಾಂಕ್ರೀಟ್ ವಾಹನಗಳಿಂದ ಹಾಳಾಗಿ, ಹಳ್ಳಗಳು ಬೀಳುತ್ತಿವೆ, ಎನ್ನುವುದೇ ಇಲ್ಲಿ ಜನರ ಆತಂಕ! ಮತ್ತು ಇಲ್ಲಿನ ಭೂಮಿ, ರಸ್ತೆ, ಉಪಯೋಗಿಸುವ ಇವರು ಇಲ್ಲಿನ ಯುವ ಯುವಕರಿಗೆ, ತರಬೇತಿ ನೀಡಿ ಉದ್ಯೋಗ ನೀಡುವ ಬದಲು ಬೇರೆ ರಾಜ್ಯದಿಂದ ಉದ್ಯೋಗಿಗಳನ್ನು ಕರೆತಂದು ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ನಮ್ಮ ಅಭಿವೃದ್ದಿ ಹೇಗೆ ಸಾಧ್ಯ ಅನ್ನುವ ಆತಂಕವು ಇದೆ.
*ಗ್ರಾಮಗಳ, ಆಸ್ಪತ್ರೆ ಶಾಲೆಗಳ ಸಮೀಪ ನಿರ್ಮಿಸುತ್ತಿರುವ ಈ ಪವನ ಶಕ್ತಿ ಯಂತ್ರದಿಂದ ಶಬ್ಧ ಮತ್ತು ದುಷ್ಪರಿಣಾಮಗಳಿಂದ, ಸ್ಥಳೀಯರಿಗೆ ತಲೆನೋವು, ನಿದ್ರಾಹೀನತೆ,ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
*ಪವನ ಶಕ್ತಿ ಯಂತ್ರದ ದೊಡ್ಡ ಗಾತ್ರದ ಬ್ಲೇಡುಗಳ ಹೊಡೆತಕ್ಕೆ ಊರಿನ, ಅಕ್ಕ-ಪಕ್ಕ ಸಾಕಿದ ಪಕ್ಷಿಗಳು, ಜೀವರಾಶಿಗಳಿಗೆ ತೊಂದರೆಯಾಗಿ ಜೀವವೈವಿದ್ಯತೆಗೆ
ಧಕ್ಕೆಯಾಗಬಹುದು
*ಶಾಲೆಗೆ ಸಮೀಪ, ವಸತಿ ಶಾಲೆಗಳ ಸಮೀಪ ಅನುಮತಿ ನೀಡಿದಲ್ಲಿ ವಿದ್ಯಾರ್ಥಿಗಳ ಪಾಠ, ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಹುದು.
ಈ ಎಲ್ಲಾ ವಿಷಯಗಳನ್ನು, ಜವಾಬ್ದಾರಿಗಳನ್ನು
ಅಧಿಕಾರಿಗಳು, ರಾಜಕಾರಿಣಿಗಳು ಗಮನಹರಿಸಿ
ಮುಂದೆ ಉಂಟಾಗಬಹುದಾದ ಸಮಸ್ಯೆಗಳಿಗೆ ಕಡಿವಾಣ ಹಾಕಿ ಜನರ, ಜೀವಿಗಳ, ಪರಿಸರದ ಉಳಿವಿಗಾಗಿ ನಿಮ್ಮ ಸ್ಪಂದನೆ ತೋರಿಸಿ ಕಂಪನಿಯವರಿಗೆ ಜವಾಬ್ದಾರಿ, ಮತ್ತು ಕಟ್ಟಲೆಗಳನ್ನು ಮೀರದಂತೆ ಕ್ಷೇತ್ರದ ಹಿತಾಸಕ್ತಿ ಕಾಪಾಡಿ ಅನ್ನುವುದು
ಜನರ ಬೇಡಿಕೆಗಳಾಗಿವೆ.

ವರದಿ ಗವಿಸಿದ್ದ ಎಸ್. ಬಯ್ಯಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!