ಬೀದರ್ ಜಿಲ್ಲೆ ಬಸವಕಲ್ಯಾಣ ನಗರದ ಪಶು ಆಸ್ಪತ್ರೆಯಲ್ಲಿ ಕೇಂದ್ರ ಸರಕಾರದ ಆದೇಶದಂತೆ ಕರ್ನಾಟಕ ಪಶು ವೈದ್ಯಕೀಯ ಸಂಘ ಬೆಂಗಳೂರು ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘ ಬೀದರ್ ರವರ ವತಿಯಿಂದ ಇಂದು ” ಪ್ರಾಣಿ ಪಕ್ಷಿಗಳ ಮೇಲೆ ದಯೇ ಇರಲಿ ” ಎನ್ನುವ ಸ್ಟಿಕ್ಕರ್ ಬಿಡುಗಡೆಗೊಳಿಸಲಾಯಿತು.
ಇತ್ತೀಚೆಗೆ ಸುಮಾರು ಪ್ರಾಣಿ ಪಕ್ಷಿಗಳು ರಸ್ತೆ ದಾಟುತ್ತಿರುವಾಗ ಅಥವಾ ರಸ್ತೆ ಮೇಲೆ ನಿಂತಾಗ ಅಥವಾ ರಸ್ತೆಯ ಪಕ್ಕದಲ್ಲಿ ಚಲಿಸುವಾಗ ವೇಗವಾಗಿ ಬರುವ ವಾಹನ ಸವಾರರ ವಾಹನಗಳ ಮಧ್ಯೆ ಸಿಲುಕಿ ಸಾವನ್ನಪ್ಪುತ್ತಿವೆ. ಹೀಗಾಗಿ ಪ್ರಾಣಿ, ಪಕ್ಷಿಗಳಿಗೂ ಸಹ ಬದುಕುವ ಹಕ್ಕಿದೆ ಆದ್ದರಿಂದ ಅವುಗಳಿಗೂ ಕೂಡ ರಕ್ಷಣೆ ಮಾಡುವುದು ಕರ್ತವ್ಯ ನಮ್ಮದಾಗಿದೆ ಎನ್ನುವುದರ ಮೂಲಕ ಕೇಂದ್ರ ಸರಕಾರ ಈ ಆದೇಶ ಜಾರಿಗೆ ತಂದಿದೆ. ಆದ್ದರಿಂದ ಇನ್ನು ಮುಂದೆ ಎಲ್ಲಾ ಸರಕಾರಿ ಅಧಿಕಾರಿಗಳ ವಾಹನಗಳಿಗೆ, ಸರಕಾರಿ ಬಸ್ಸುಗಳಿಗೆ, ಇನ್ನಿತರ ಸರಕಾರಿ ವಾಹನಗಳಿಗೆ ಈ ಸ್ಟಿಕ್ಕರ್ ಅಂಟಿಸಿ ಜಾಗೃತಿ ಮೂಡಿಸಲಾಗುವುದು ಮತ್ತು ಮುಂಬರುವ ದಿನಗಳಲ್ಲಿ ಎಲ್ಲಾ ಖಾಸಗಿ ವಾಹನಗಳಿಗೂ ಕೂಡ ಈ ಸ್ಟೀಕರ್ ಅಂಟಿಸಲಾಗುವುದು ಎಂದು ಬಸವಕಲ್ಯಾಣದ ತಹಶೀಲ್ದಾರರಾದ ದತ್ತಾತ್ರೆ ಗಾಧಾ ರವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಸಹಾಯಕ ಪಶುವೈದ್ಯಾಧಿಕಾರಿಗಳು ಬಸವಕಲ್ಯಾಣ ಹಾಗೂ ಇತರೆ ಹಿರಿಯ ಪಶು ವೈದ್ಯಾಧಿಕಾರಿಗಳು ಭಾಗಿಯಾಗಿದ್ದರು.
ವರದಿ : ಶ್ರೀನಿವಾಸ ಬಿರಾದಾರ




















