ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕುಳಲಿಯಲ್ಲಿ ದಿ.10 ಕ್ಕೆ ಹಿರಿಯರ ಪೂರ್ವಭಾವಿ ಸಭೆ : ಶಂಕರಾನಂದ ಶ್ರೀಗಳು

ಬಾಗಲಕೋಟೆ / ಮುಧೋಳ : ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ಇದೆ ದಿ. 15 ರಿಂದ 24ರ ವರೆಗೆ ಒಟ್ಟು 10 ದಿನಗಳ ಕಾಲ 20 ನೇ ಅಖಿಲ ಭಾರತ ವೇದಾಂತ ಪರಿಷತ್ ಹಾಗೂ ರಾಜ್ಯ ಮಟ್ಟದ ಜನಪದ‌ ಸಂಗೀತೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಗುರುನಾಥಾರೂಢರ ಮಠದ ಪೂಜ್ಯರಾದ ಶಂಕರಾನಂದ ಶ್ರೀಗಳು ಹೇಳಿದರು.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಅದ್ವೈತಸಾರ್ವಭೌಮ ಜಗದ್ಗುರು ಶ್ರೀ ಸಿದ್ಧಾರೂಢರ ಪುರಾಣ, ಸಾಧು ಚಕ್ರವರ್ತಿ ಜಗದ್ಗುರು ಶ್ರೀ ಶಿವಾನಂದ ಭಾರತಿ ಶ್ರೀಗಳ ಬೆಳ್ಳಿ ರಥದಲ್ಲಿ ಉತ್ಸವ, 86 ನೇ ಜಯಂತ್ಯೋತ್ಸವ.ತುಲಾಭಾರ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದ ಅವರು 10 ದಿನಗಳ ಕಾಲ ನಡೆಯುವ ಈ ವೇದಿಕೆಯಲ್ಲಿ ಸಾಧಕರಿಗೆ ಗೌರವ. ನಾಡಿನ ಹೆಸರಾಂತ ಸಂಗೀತ ಕಲಾವಿದರಿಂದ ಸಂಗೀತ ರಸದೌತಣ ಹಾಗೂ ಬಂದ ಭಕ್ತಸ್ತೋಮಕ್ಕೆ ನಿರಂತರ ಪ್ರಸಾದ‌, ವಿಶಿಷ್ಟ ರೀತಿಯಲ್ಲಿ ರಥೋತ್ಸವ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ತನ್ನಿಮಿತ್ಯ ಸ್ಥಳೀಯ ಹಿರಿಯರ, ಕಲಾವಿದರ, ಕಾಯ೯ಕತ೯ರ ಸಭೆಯನ್ನು ಶನಿವಾರ ದಿ.10 ರಂದು ಮುಂಜಾನೆ 10 ಗಂಟೆಗೆ ಕರೆಯಲಾಗಿದೆ ಎಲ್ಲರೂ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸಹಕಾರ ಮಾಗ೯ದಶ೯ನ ನೀಡಲು ಶಂಕರಾನಂದ ಶ್ರೀಗಳು ಕೋರಿದ್ದಾರೆ.
ಈ ಸಂದರ್ಭದಲ್ಲಿ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು.ಹಿರಿಯರಾದ ಸಂಗಪ್ಪ ಗಣಿ.ಶಿವಪ್ಪ ಪವಾಡ ಶೆಟ್ಟಿ.ರಮೇಶ ತಳಪಟ್ಟಿ.ಗಂಗಪ್ಪ ಲಕ್ಕಪ್ಪ ಗೋಳು. ಕಾಯ೯ಕತ೯ರಾದ ರಮೇಶ ಸೋಲೋಣಿ.ಮುತ್ತಪ್ಪ ಪೋಳ ಉಪಸ್ಥಿತರಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!