ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೂಲಭೂತ ಸೌಕರ್ಯಗಳಿಲ್ಲದೆ ಜನಗಳ ಪರದಾಟ : ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ತೋವಿನಕೆರೆ ಗ್ರಾಮ ಪಂಚಾಯಿತಿಯಲ್ಲಿ ಮೂರನೇ ಬಾರಿ ರದ್ದಾದ ತೋವಿನಕೆರೆ ಗ್ರಾಮ ಪಂಚಾಯಿತಿ ಸಭೆ.

ಕೊರಟಗೆರೆ: ತಾಲೂಕಿನ ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ನಡೆಯಬೇಕಿದ್ದ ವಿಶೇಷ ಸಭೆ ಸದಸ್ಯರ ಹೊಂದಾಣಿಕೆ ಸಹಭಾಗಿತ್ವ ಇಲ್ಲದ ಕೊರತೆಯಿಂದ ರದ್ದಾಗಿದೆ.
ತೋವಿನಕೆರೆಯ ಗ್ರಾಮ ಪಂಚಾಯತಿಯಲ್ಲಿ ಒಟ್ಟು 24 ಸದಸ್ಯರು ಇದ್ದು ಈ ಸಭೆಯಲ್ಲಿ ಏಳು ಜನ ಸದಸ್ಯರು ಮಾತ್ರ ಹಾಜರಾಗಿರುತ್ತಾರೆ.

ತೋವಿನಕೆರೆ ಗ್ರಾಮ ಪಂಚಾಯಿತಿ ಸಭೆ ಸುಮಾರು ಬಾರಿ ರದ್ದಾಗಿದ್ದರೂ ಇತ್ತ ಯಾವ ಅಧಿಕಾರಿಯೂ ಗಮನಹರಿಸಿಲ್ಲ. ಸುಂಕದ ಕಡೆ ನೀಡುವ ಆದ್ಯತೆ ಗ್ರಾಮದ ಸ್ವಚ್ಛತೆಗೆ ನೀಡುತ್ತಿಲ್ಲ.
ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ನೈರ್ಮಲ್ಯ ಕೆಲಸ ಕಾರ್ಯಗಳು ಸ್ಥಗಿತಗೊಂಡಿದೆ, ಇದರಿಂದ ಬೇಸರಗೊಂಡ ಗ್ರಾಮಸ್ಥರುಗಳು, ಕೊರಟಗೆರೆ ತಾಲೂಕು ಸಿಎನ್ ದುರ್ಗಾ ಹೋಬಳಿಗೆ ಬಾಬು ಜಗಜೀವನ್ ರಾಮ್ ರವರ ಕಟ್ಟಡ ನಿರ್ಮಾಣ ಬೇರೆ ಕಡೆ ಸ್ಥಳಾಂತರ ದಲಿತರ ಬೇಸರ, ಬಾಬುಜಗಜೀವನ್ ರಾಮ್ ರವರ ಕಟ್ಟಡ ನಿರ್ಮಾಣ. 75 ಲಕ್ಷ ವೆಚ್ಚದಲ್ಲಿ ಆಗಬೇಕಾಗಿದ್ದ ಕಟ್ಟಡ ಬೇರೆ ಕಡೆ ಸ್ಥಳಾಂತರಗೊಂಡಿದೆ.
ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ನಾಡಕಛೇರಿ, ಕೃಷಿ ಇಲಾಖೆ, ಕೆಇಬಿ ಆಫೀಸ್ ಇನ್ನೂ ಅನೇಕ ಹಲವಾರು ಇಲಾಖೆಗಳು ಇದಾವೆ. ಆದ್ದರಿಂದ ಇಲ್ಲಿನ ದಲಿತ ಮುಖಂಡರುಗಳು ತುಂಬಾ ಬೇಸರ ವ್ಯಕ್ತಪಡಿಸಿದರು.
ಜಿಲ್ಲೆ ಮತ್ತು ತಾಲೂಕು ಮಧ್ಯ ಭಾಗದ ತೋವಿನಕೆರೆಯ ಬಸ್ ನಿಲ್ದಾಣ ಮುಂಭಾಗ ಹೆಚ್ಚು ನಾಯಿಗಳ ಸಂಖ್ಯೆ ಮತ್ತು ಹೆಚ್ಚಾದ ವಾಹನಗಳ ದಟ್ಟಣೆ ತುಂಬಾ ಹೆಚ್ಚಾಗಿರುವುದು. ಇಲ್ಲಿ ಪಾದಚಾರಿಗಳಿಗೆ ತುಂಬಾ ಅಡಚಣೆ ಉಂಟಾಗುತ್ತಿದೆ. ಹಾಗೂ ಶಾಲಾ ಮಕ್ಕಳಿಗೆ ಸಮಸ್ಯೆ ಆಗುತ್ತಿದೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಮುಂದಾಗುವ ಅನಾಹುತಗಳಿಗೆ ತಪ್ಪಿಸಬೇಕೆಂದು ಸಾರ್ವಜನಿಕರ ಆಗ್ರಹ.
ಇನ್ನು ಇದೇ ಗ್ರಾಮ ಪಂಚಾಯಿತಿಗೆ ಸೇರಿರುವ 25 ಬಾಡಿಗೆಯ ಅಂಗಡಿದಾರರಿಗೆ ಯಾವುದೇ. ಶೌಚಾಲಯ ಇಲ್ಲದೆ ತುಂಬಾ ಅವ್ಯವಸ್ಥೆ ಉಂಟುಮಾಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು,
ಈ ಒಂದು ಗ್ರಾಮದಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು ಸ್ವಚ್ಛತೆಯನ್ನೇ ಮರೆತಿದ್ದಾರೆ ಹಾಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಬೇಕಿದೆ ಎಂಬುದು ಪ್ರಯಾಣಿಕರು ಮತ್ತು ಸಾರ್ವಜನಿಕರ ಮಾತಾಗಿದೆ.

ವರದಿ : ಪ್ರಸನ್ನಕುಮಾರ್. ಎಸ್. ಕೊರಟಗೆರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!