
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಹುಲುವಂಗಲ ಸರ್ಕಾರಿ ಶಾಲೆಯಲ್ಲಿ ಗಣಿತ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಮಕ್ಕಳಲ್ಲಿ ಲೆಕ್ಕಾಚಾರ ಗಣಿತ ವ್ಯವಹಾರ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಮಕ್ಕಳಿಗೆ ಸಂತೆಯ ವ್ಯವಹಾರ ಯಾವ ರೀತಿ ಮಾಡುವುದು ಎಂದು ತೋರಿಸಲು ಮಾರುಕಟ್ಟೆ ಮಾದರಿಯಲ್ಲಿ ಎಲ್ಲಾ ತರಹದ ತರಕಾರಿ ಸೊಪ್ಪು ಎಳೆನೀರು ಮಜ್ಜಿಗೆ ಕಳ್ಳೆಪುರಿ ಟೀ ಕಾಫಿ ಕಬ್ಬು ಇನ್ನು ಇದ್ದರೆ ಸಾಮಗ್ರಿಗಳನ್ನು ತಂದು ವ್ಯಾಪಾರಸ್ಥರ ಪ್ರೀತಿಯಲ್ಲಿ ಮಕ್ಕಳು ವ್ಯವಹಾರವನ್ನು ಮಾಡಿದರು. ಈ ಮೇಳವನ್ನು ಹಮ್ಮಿಕೊಳ್ಳಲು ಶಾಲೆಯ ಗಣಿತ ಟೀಚರ್ ತುಂಬಾ ಉತ್ಸಾಹದಿಂದ, ಸಹ ಶಿಕ್ಷಕರು ಎಲ್ಲರೂ ಸೇರಿ ಮುಖ್ಯೋಪಾಧ್ಯಾಯರ ಅನುಮತಿ ಮೇರೆಗೆ ಹಮ್ಮಿಕೊಂಡಿದ್ದರು. ಮುಖ್ಯೋಪಾಧ್ಯಾಯರಾದ ನಾಗರತ್ನಮ್ಮ್ ನವರು ನಮ್ಮ ಶಾಲೆ ನಮ್ಮ ಜವಾಬ್ದಾರಿ ನಮ್ಮ ಶಾಲೆಯ ಮಕ್ಕಳೆಲ್ಲರೂ ಸಂತೆಯಲ್ಲಿ ಬಹಳ ಉತ್ಸಾಹದಿಂದ ವ್ಯಾಪಾರ ಮಾಡಿ ವ್ಯವಹಾರ ಅಧ್ಯಯನವನ್ನು ಬೆಳೆಸಿಕೊಳ್ಳಲು ಮುಂದೆ ಅವರು ದುಡಿಯುವ ಮಾರ್ಗವನ್ನು ಚಿಕ್ಕವಯಸ್ಸಿನಲ್ಲಿ ತಿಳಿದುಕೊಳ್ಳಲಿ ಎಂದು ನಾವು ಗಣಿತ ಮೇಳವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಶಾಲೆಯ ಸಹ ಶಿಕ್ಷಕರಾದ ಮುದ್ದಯ್ಯ ಎಚ್ಜಿ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಅದೇ ರೀತಿ ಮಕ್ಕಳ ಜ್ಞಾನ ಚಿಕ್ಕ ವಯಸ್ಸಿನಲ್ಲಿ ಕ್ರಿಯಾಶೀಲತೆಯಿಂದ ಕೂಡಿದ್ದರೆ ಮುಂದೆ ಜೀವನದಲ್ಲಿ ಸುಗಮವಾಗಿ ಬದುಕಲು ಸಾಧ್ಯವಾಗುತ್ತದೆ ಅದಕ್ಕಾಗಿ ಸಂತೆಯಲ್ಲಿ ಪಾಲ್ಗೊಂಡು ಮಕ್ಕಳ ವ್ಯವಹಾರ ಜ್ಞಾನವನ್ನು ಯಾವ ರೀತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು ಇದರಿಂದ ಶಾಲೆಯಲ್ಲಿ ಹಬ್ಬದ ವಾತಾವರಣ ಮಕ್ಕಳ ಮುಖದಲ್ಲಿ ವ್ಯಾಪಾರಸ್ಥ ಗುಣಗಳನ್ನು ಕಂಡು ಖುಷಿ ಪಟ್ಟರು. ಗಣಿತ ಮೇಳವನ್ನು ಹಮ್ಮಿಕೊಳ್ಳಲು ಗಣಿತ ವಿಷಯವನ್ನು ತೆಗೆದುಕೊಳ್ಳುವ ಶಿಕ್ಷಕರಾದ ಮಂಜುಳಾ ಎಚ್ ಎಲ್ ರವರು ಮಾತನಾಡಿ ಮಕ್ಕಳಿಗೆ ಬರೀ ಪುಸ್ತಕದ ವಿಷಯ ಬಿಟ್ಟು ಲೋಕಜ್ಞಾನ ಬೆಳೆಸಲು ಅವರು ನಿಜ ಜೀವನದಲ್ಲಿ ಯಾವ ರೀತಿ ಲೆಕ್ಕಾಚಾರ ಹಣಕಾಸು ವಸ್ತುಗಳ ಪೂರ್ಣ ಮಾಹಿತಿ ತಿಳಿದುಕೊಂಡು ಬದುಕಬೇಕು ಅದನ್ನು ಮಕ್ಕಳು ಸ್ವತಃ ಶಾಲೆಯಲ್ಲಿ ಮಾರುಕಟ್ಟೆಯನ್ನು ಸೃಷ್ಟಿ ಮಾಡಿ ಅವರಿಗೆ ಗಣಿತ ಪಾಠವನ್ನು ಮಕ್ಕಳ ತಲೆಗೆ ತುಂಬಲು ಒಳ್ಳೆಯ ಪ್ರಯತ್ನವಾಗಿದೆ. ಶಾಲೆಯ ಎಲ್ಲಾ ಮಕ್ಕಳು ತುಂಬಾ ಖುಷಿಯಿಂದ ಭಾಗವಹಿಸಿ ವ್ಯವಹಾರ ಜ್ಞಾನ ಬೆಳಸಿಕೊಳ್ಳಲು ಅನುಕೂಲವಾಯಿತು ಎಂದು ತಿಳಿಸಿದರು.
ವರದಿ : ಪ್ರಸನ್ನಕುಮಾರ್. ಎಸ್. ಕೊರಟಗೆರೆ




















