
ಗುರುಮಠಕಲ್ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕೆಡಬ್ಲ್ಯೂಜೆವಿ) ಸಂಘದ ತಾಲೂಕು ಘಟಕಕ್ಕೆ ರವಿ ಬುರನೋಳ ಎಂ.ಟಿ.ಪಲ್ಲಿ ಅಧ್ಯಕ್ಷರಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶಕುಮಾರ ಭೂಮ ಅವರನ್ನು ಆಯ್ಕೆ ಮಾಡಲಾಯಿತು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜು ಬಂಗ್ಲೆ ಅವರು ಇಬ್ಬರಿಗೂ ಪ್ರಮಾಣಪತ್ರ ನೀಡಿ, ಸಂಘದ ಸಿದ್ಧಾಂತಗಳ ಪಾಲನೆ ಮಾಡುತ್ತಾ, ಪತ್ರಕರ್ತರ ಹಾಗೂ ಸಮಾಜದ ಶ್ರೇಯಸ್ಸಿಗೆ ನಿಯಮಾನುಸಾರ ಕಾರ್ಯ ನಿರ್ವಹಿಸುವಂತೆ ನಿರ್ದೇಶನ ನೀಡಿದ್ದಾರೆ.
ಶನಿವಾರ ನೂತನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದವರಿಗೆ ಪತ್ರಕರ್ತರ ಬಳಗ ಮತ್ತು ಸ್ನೇಹಿತರಿಂದ ಸನ್ಮಾನಿಸಲಾಯಿತು.
ಪಟ್ಟಣದ ಮಹಾತ್ಮ ಬಸವೇಶ್ವರ ಫಲಕ, ನಿಜ ಶರಣ ಅಂಬಿಗರ ಚೌಡಯ್ಯ ಫಲಕ, ಕನಕದಾಸ ಫಲಕ, ಸಂವಿಧಾನ ಶಿಲ್ಪಿ ಡಾ. ಬಿ. ಅರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ ಪುತ್ತಳಿಗಳಿಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಎಂ.ಬಿ. ನಾಯ್ಕಿನ್, ಬಸಪ್ಪ ಸಂಜನೋಳ, ಬಸವರಾಜ ಅಲೇಮನಿ, ಲಕ್ಷ್ಮಣ, ಸಾಬಪ್ಪ ಕೆ. ಚಪೆಟ್ಲಾ, ಹೈಮದ್, ಜಾವೇದ್ ,ಹಿರಿಯ ರಾಜಕೀಯ ಮುಖಂಡರಾದ
ಕೆ. ದೇವದಾಸ, ಆಶನ್ನ ಬುದ್ಧ, ರಾಜರಮೇಶಗೌಡ, ಲಿಂಗಪ್ಪ ತಾಂಡೂರಕರ್, ಲಾಲಪ್ಪ ತಲಾರಿ, ಅಶೋಕ್ ಶನಿವಾರಂ, ಶ್ರೀಕಾಂತ್ ತಲಾರಿ ಹಾಜರಿದ್ದರು.
ವರದಿ: ಜೆ. ಎಸ್. ಭೂಮಾ




















