ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಫಾತೀಮಾ ಶೇಖ್ ಜನ್ಮ ದಿನಾಚರಣೆ ಆಚರಣೆ

ಹರಪನಹಳ್ಳಿ: ಸಮಾಜದಲ್ಲಿ ಅಜ್ಞಾನ, ಅಂಧಕಾರ, ಮೂಡನಂಬಿಕೆಗಳು ಆವರಿಸಿದ್ದ ಕಾಲದಲ್ಲಿ ಕುರುಡು ಸಂಪ್ರದಾಯಗಳನ್ನು ಮೆಟ್ಟಿ ನಿಂತ ದಿಟ್ಟ ಮಹಿಳೆ ಫಾತೀಮಾ ಶೇಖ್ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಂ. ಷರೀಫ್ ತಿಳಿಸಿದರು.

ಹರಪನಹಳ್ಳಿ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಫಾತೀಮಾ ಶೇಖ್ ಜನ್ಮ ದಿನಾಚರಣೆ ನಿಮಿತ್ತ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ ಮಹಿಳಾ ರತ್ನದ್ವಯರಾದ ಸಾವಿತ್ರಿ ಬಾಯಿ ಫುಲೆ ಮತ್ತು ಫಾತೀಮಾ ಶೇಖ್ ೧೭೫ ವರ್ಷಗಳ ಹಿಂದೆ ಸಮಾಜದಲ್ಲಿ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದು ಸಮಾಜದಲ್ಲಿ ಹಲವಾರು ವಿರೋಧಗಳನ್ನು ಎದುರಿಸಿದರು.

ಸಮಾಜದ ಪರಿವರ್ತನೆಗೆ ತೆರೆ ಮರೆಯಲ್ಲಿ ಸಾಕಷ್ಟು ಶ್ರಮಿಸಿದ ಫಾತೀಮಾ ಶೇಖ್‌ರವರ ಬಗ್ಗೆ ಇಂದಿನ ಯುವ ಜನತೆಗೆ ತಿಳಿಸುವ ಅಗತ್ಯವಿದೆ ಎಂದರು.

ಮುಖ್ಯ ಶಿಕ್ಷಕ ಹುಸೇನ್ ಪೀರ್ ಮಾತನಾಡಿ ದೇಶದಲ್ಲಿ ದಲಿತ, ದಮನಿತ ಹಾಗೂ ಶೂದ್ರ ಮಹಿಳೆಯರಿಗೆ ಶಿಕ್ಷಣ ನೀಡುವುದು ನಿಷಿದ್ದವಾಗಿತ್ತು, ಅಕ್ಷರ ವಂಚಿತ ಸಮುದಾಯಗಳಿಗೆ ಸಾಕಷ್ಟು ವಿರೋದದ ಮದ್ಯೆಯು ಅಕ್ಷರ ಕಲಿಸಿದ ಕೀರ್ತಿ ಸಾವಿತ್ರಿ ಬಾಯಿ ಫುಲೆ ದಂಪತಿಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಈ ವೇಳೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್ ಜಿ ಮನೋಹರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ ಗುರುಮೂರ್ತಿ, ಸಾವಿತ್ರಿ ಬಾಯಿ ಫುಲೆ ಸಂಘದ ಜಿಲ್ಲಾಧ್ಯಕ್ಷೆ ಟಿ ಎಚ್ ಎಂ ಲತಾ ಹಾಗೂ ಸರ್ಕಾರಿ ನೌಕರರ ಸಂಘದ ಪದಾದಿಕಾರಿಗಳಾದ ಮಕ್ಬುಲ್ ಭಾಷಾ, ಕೆ ಅಂಜಿನಪ್ಪ, ಎಂ ಮರಿಯಪ್ಪ, ಪಿ ಸುಬ್ಬಣ್ಣ, ಸಿ ನಾಗರಾಜ್, ವೀರಪ್ಪ, ಎಂ ಆಂಜನೇಯ, ಶೋಭಾ ಕುಮಾರಿ, ಜಮಾಲುದ್ದೀನ್, ಹುಸೇನ್ ಭಾಷಾ, ಎಂ ಯಾಹ್ಯಾ, ಎನ್ ಇಸ್ಮಾಯಿಲ್, ಪೀರ್ ಸಹೇಬ್, ಕೆ ರಿಜ್ವಾನ್, ಕರಿಬಸಪ್ಪ, ರಾಹತ್, ಮುಮ್ತಾಜ್ ಬೇಗಂ, ಅಸ್ಮಾ, ಸಿರಿನ್, ಉಮಾ ಟಿಎಚ್ ಎಂ ಹಾಗೂ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!