ಶಿವಮೊಗ್ಗ: ತಾಲೂಕಿನ ಸೂಗುರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಕೆ.ಬಿ., ಉಪಾಧ್ಯಕ್ಷರಾಗಿ ಪ್ರದೀಪ್ ಬಿ.ಜಿ. ಆಯ್ಕೆಯಾಗಿದ್ದು, ಅವರಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರುಗಳು ಹಾಗೂ ಕ್ಯಾತಿನಕೊಪ್ಪ, ಸೂಗೂರು, ಬುಳ್ಳಾಪುರ, ಗೊರವಿನಕಟ್ಟೆ, ಲಿಂಗಾಪುರ, ಗ್ರಾಮಸ್ಥರು, ಕಾರ್ಯದರ್ಶಿ ಪಂಚಾಕ್ಷರಿ ಹಾಗೂ ಚುನಾವಣಾಧಿಕಾರಿ ಲತಾ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.




















