ಬಾಗಲಕೋಟೆ / ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಮತ್ತು ಸುತ್ತ ಮುತ್ತಲಿನ ಗ್ರಾಮದ ರೈತರು ಸೇರಿ ಹಿಪ್ಪರಗಿ ಜಲಾಶಯಕ್ಕೆ ಭೇಟಿ ಕೊಟ್ಟು ನೀರಿನ ಪೋಲು ಮತ್ತು ಬೇಸಿಗೆಯಲ್ಲಿ ಮುಂದಿನ ದಿನಮಾನಗಳಲ್ಲಿ ಇದೆ ರೀತಿ ನೀರು ವ್ಯರ್ಥ ಆದರೆ ರೈತರಿಗೆ ಸಮಸ್ಯೆ ಹೆಚ್ಚಾಗುತ್ತದೆ ಎಂದು ರೈತರು ಚರ್ಚೆ ಮಾಡಿ (ಚೀಫ್ಎಕ್ಸಿ ಕ್ಯುಟಿವ್ ಎಂಜಿನಿಯರ್) ಅವರಿಗೆ ಮನವರಿಕೆ ಮಾಡಿಸಿ ಆದಷ್ಟು ಬೇಗ ಜಲಾಶಯದ ದುರಸ್ತಿಗೆ ಬಂದ್ ಬಾಗಿಲನ್ನು ಸರಿಯಾದ ರೀತಿಯಲ್ಲಿ ಸರಿ ಮಾಡಬೇಕು ಎಂದು ಹೇಳಲಾಯಿತು. ಜಲಾಶಯದಲ್ಲಿ ಮೊದಲು 6 ಟಿಎಂಸಿ ನೀರಿನ ಮಟ್ಟ ಇತ್ತು ಇವಾಗ ನೀರು ಪೋಲಾಗಿ 2 ಟಿಎಂಸಿ ನೀರು ವ್ಯರ್ಥ ಆಗಿದೆ ಉಳಿದ ನೀರನ್ನು ಮುಂದಿನ ಬೇಸಿಗೆಯಲ್ಲಿ ರೈತರಿಗೆ ಅನುಕೂಲಕ್ಕೆ ತಕ್ಕಂತೆ ಮತ್ತು ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಮತ್ತು ಹಿಪ್ಪರಗಿ ಜಲಾಶಯದ ಬಾಗಿಲುಗಳು (ಗೇಟ್)ಸುಮಾರು ವರ್ಷಗಳಿಂದ ದುರಸ್ಥಿ ಹಂತದಲ್ಲಿದ್ದು ಇದರ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಇದಕ್ಕೆ ಸರಿಯಾದ ರೀತಿಯಲ್ಲಿ ಜಲಾಶಯದ ಎಲ್ಲಾ ಗೇಟ್ ಗಳನ್ನು ಹೊಸದಾಗಿ ಅಳವಡಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಪ್ರವಾಹದ ಒತ್ತಡಕ್ಕೆ ಅಥವಾ ನೀರಿನ ಒತ್ತಡಕ್ಕೆ ಸಿಕ್ಕು ಯಾವದೇ ಹಾನಿ ಅಥವಾ ಅಹಿತಕರ ಘಟನೆ ಆಗದಂತೆ ಎಚ್ಚರಿಕೆ ವಹಿಸಿ ಉತ್ತರ ಕರ್ನಾಟಕದ ಜೀವ ನಾಡಿ ಕೃಷ್ಣೆ ಬತ್ತದಂತೆ ನೋಡಿಕೊಳ್ಳಿ ಎಂದು ಈ ಮೂಲಕ ಮನವಿ ಪತ್ರ ಕೊಡಲಾಯಿತು.
ಈ ಸಂದರ್ಭದಲ್ಲಿ ಹಣಮಂತ ಮಗದುಮ್, ಕಲ್ಲಪ್ಪ ಮಹೇಶವಾಡಗಿ, ಬಸವರಾಜ್ ನ್ಯಾಮಗೌಡ, ಸಿದ್ದಪ್ಪ ಬಣಜಣ್ಣವರ, ಕಲ್ಲಪ್ಪ ಬಿರಾದಾರ, ಪ್ರಕಾಶ ತೇಲಿ,ರಮೇಶ ಸವದಿ, ಪವನ ತೇಲಿ, ಈಶ್ವರ ಕಳ್ಳಿ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















