ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಜೊತೆಗೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ : ಶಾಸಕ ಜೆ.ಎನ್.ಗಣೇಶ

ಕಂಪ್ಲಿಯಲ್ಲಿ ಬಿಇಒ ಕಛೇರಿಯ ಅವಶ್ಯಕತೆ ಇರುವುದರಿಂದ ಈಗಾಗಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಕೂಲಂಕುಷವಾಗಿ ಚರ್ಚಿಸಿದ್ದು, ಸೂಕ್ತ ಕ್ರಮದೊಂದಿಗೆ ಕಛೇರಿ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ಪಟ್ಟಣದ ವೀರಶೈವ ಭವನದಲ್ಲಿ ಶಿಕ್ಷಣ ಇಲಾಖೆ, ಬಳ್ಳಾರಿ ಪಶ್ಚಿಮ ವಲಯ ಕುರುಗೋಡು ಬಿಇಒ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕ.ರಾ.ಪ್ರಾ.ಪ್ರೌ, ಪದವೀಧರ ಶಾಲಾ ಶಿಕ್ಷಕರ ಸಂಘ, ತಾಲೂಕು ಘಟಕದಿಂದ ಹಾಗೂ ಶಾಸಕ ಗಣೇಶ ಅವರ ಸಹಕಾರದೊಂದಿಗೆ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮೊದಲಿಗೆ ಕ್ಷೇತ್ರದ ಶಾಸಕರಾದಾಗ ಅನೇಕ ಶಿಕ್ಷಣದ ಸಮಸ್ಯೆಗಳನ್ನು ಎದುರಿಸಬೇಕಾಯಿತು. ನಂತರ ಸಾಕಷ್ಟು ಅನುದಾನಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಜೊತೆಗೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವೆ. ಶಿಕ್ಷಕರ ಹಾಗೂ ನೌಕರರ ಭವನದ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಲಾಗುವುದು, ಅಧಿಕಾರ ಶಾಶ್ವತವಲ್ಲ, ಜನರ ಪ್ರೀತಿ, ವಿಶ್ವಾಸವೇ ಕೊನೆತನಕ ಉಳಿಯುತ್ತದೆ ಎಂದರು.
ನಂತರ ನಿವೃತ್ತ ಶಿಕ್ಷಕರಾದ ವಿರೇಶ, ಎಲೆಗಾರ ಪಾರ್ವತಿ, ಶೀಲಾವತಿ, ಸರ್ವಮಂಗಳ, ರಾಘವೇಂದ್ರ, ಹುಲಿಕುಂಟಾಚಾರ್ ಹಾಗು ಇ. ಶಾಂತ ಗಡ್ಡಾದ್, ನಾಗವೇಣಿ, ಎನ್.ಲೋಕೇಶ, ಮರಿಸ್ವಾಮಿ, ಮುದುಕಪ್ಪ, ಬಸವನಗೌಡ, ವೆಂಕಟರಮಣ, ಗಾದಿಲಿಂಗಪ್ಪ, ಹೊಸಗೇರಪ್ಪ, ವೈ. ಎಂ. ಈರಮ್ಮ,
ಸಂಗನಗೌಡ ಗೌಡರ್, ವಿರೇಶ, ಈರಮ್ಮ, ನರಸಿಂಹಲು, ಎಸ್.ಚಂದ್ರಪ್ಪ, ಶೃತಿಕುಮಾರಿ, ರಂಗಪ್ಪ, ಮಡಿವಾಳಪ್ಪ, ಎನ್. ಶಿವಕುಮಾರ, ಕೆ. ಮೌನೇಶ, ಎಸ್. ಭವ್ಯಶ್ರೀ, ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಿಕಾಂತ ಬಣಕಾರ, ಸದ್ಯೋಜಾತಪ್ಪ, ಅನ್ನದಾನೇಶ್, ರೇಣುಕಾದೇವಿ, ಸುನೀತಾ ಕುಮಾರಿ, ಶ್ಯಾಮಲಾ ಪಿ. ಜೆ. ವಿರೇಶ ಕೆ., ಮೇಲಾರೆಡ್ಡಿ, ಜಬೀನಾ, ಬಿ. ಜಯಮ್ಮ, ಲಕ್ಕಪ್ಪ, ರಂಗಪ್ಪ ಕಟ್ಟಿಮನಿ, ಮಡಿವಾಳಪ್ಪ, ಶಾಬನ, ರೇಣುಕಾ ಆರ್. ಎಚ್, ಪರಶುರಾಮ, ಬಿ. ಸಾವಿತ್ರಿ, ಪಿ. ಎನ್. ರಾಜಾಭಕ್ಷಿ, ವಿರುಪಾಕ್ಷಪ್ಪ,
ಶ್ರೀ ವಿಜಯ ಇವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಬಿಇಒ ಸಿದ್ದಲಿಂಗಮೂರ್ತಿ, ಇಒ ಆರ್.ಕೆ.ಶ್ರೀಕುಮಾರ, ಎಡಿ ಮಲ್ಲನಗೌಡ ಕೆ.ಎಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ದೊಡ್ಡಬಸಪ್ಪ, ಪ್ರಮುಖರಾದ ಪಿ.ನಾಗೇಶ್ವರರಾವ್, ಸಿ.ಆರ್.ಹನುಮಂತ, ಲಿಂಗಪ್ಪ, ಟಿ.ಎಂ.ಬಸವರಾಜ, ರೇವಣ್ಣ, ಮಂಜುನಾಥ, ಯುಗಾದಿ ಶಿವರಾಜ, ಗಾದಿಲಿಂಗಪ್ಪ, ಜಡೆಪ್ಪ, ಸುಗ್ಗೇನಹಳ್ಳಿ ರಮೇಶ, ಬಸವರಾಜ ಪಾಟೀಲ್, ಸುಜಾತ ಸೇರಿದಂತೆ ಸಿಆರ್ಪಿಗಳು, ಖಾಸಗಿ ಆಡಳಿತ ಮಂಡಳಿಯ ಮುಖ್ಯಸ್ಥರು ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!