ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಕರ ಸಂಕ್ರಾಂತಿ ಸಡಗರ- ಕಂಪ್ಲಿ ಕೋಟೆ ತುಂಗಭದ್ರಾ ನದಿಯಲ್ಲಿ ಸಾರ್ವಜನಿಕರಿಂದ ಪುಣ್ಯ ಸ್ನಾನ : ದೇವಸ್ಥಾನಗಳಲ್ಲಿ ವಿಶೇಷ ಪೂಜೆ.

ಕಂಪ್ಲಿ: ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ, ಹಿಂದೂ ಹಬ್ಬಗಳಿಗೆ ಆರಂಭವಾದ ಪ್ರಥಮ ಹಬ್ಬವಾದ ಮತ್ತು ಉತ್ತರಾಯಣ ಪುಣ್ಯ ಕಾಲದ ಆರಂಭದ ದಿನವಾದ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿಕರು ಗುರುವಾರ ಬೆಳಗಿನ ಜಾವದಿಂದಲೇ ಕಂಪ್ಲಿ ಕೋಟೆ ಪ್ರದೇಶದಲ್ಲಿ ಹರಿದಿರುವ ಪವಿತ್ರ ಅಂದರೆ ಸಾರ್ವಜನಿಕರ ಬಾಯಲ್ಲಿ ನಾಣ್ನುಡಿಯಾಗಿರುವ ‘ ತುಂಗಾ ಪಾನ ಗಂಗಾ ಸ್ನಾನ, ಎನ್ನುವಂತೆ ನಮ್ಮ ಭಾಗದಲ್ಲಿ ಗಂಗಾ ನದಿ ಇಲ್ಲದಿದ್ದರೂ ಸಹಿತ ಕುಡಿಯಲು ಯೋಗ್ಯವಾಗಿರುವ ತುಂಗಭದ್ರಾ ನದಿಯಲ್ಲಿ ನೂರಾರು ಸಾರ್ವಜನಿಕರು ಮಿಂದು ಪವಿತ್ರ ಸ್ನಾನ ಮಾಡಿ ನದಿ ತೀರದಲ್ಲಿರುವ ಗಂಗಾದೇವಿ, ಪಂಪಾಪತಿ, ಶ್ರೀ ಆಂಜಿನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು.
ಮಕರ ಸಂಕ್ರಾಂತಿ ಹಬ್ಬವು ಅತ್ಯಂತ ಶ್ರೇಷ್ಠ ಹಬ್ಬವಾಗಿದ್ದು, ಇಂದು ಸೂರ್ಯದೇವ ತನ್ನ ಸಂಚಾರ ಪಥವನ್ನು ಬದಲಿಸುವ ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ಸಂಚರಿಸುವ ಅತ್ಯಂತ ಸಂಭ್ರಮದ ದಿನವಾಗಿದ್ದು, ದಕ್ಷಿಣಾಯನ ಕಾಲ ಮುಗಿದು, ಉತ್ತರಾಯಣ ಪುಣ್ಯಕಾಲ ಆರಂಭವಾಗುವ ಈ ಪುಣ್ಯ ಸಮಯದಲ್ಲಿ ನದಿಯಲ್ಲಿ ಎಳ್ಲೆಣ್ಣೆ ಹಚ್ಚಿಕೊಂಡು ಹಾಗೂ ಕರಿಎಳ್ಳನ್ನು ಹಾಕಿಕೊಂಡು ಪುಣ್ಯ ಸ್ನಾನ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರೆ ಪಾಪಕರ್ಮಗಳು ದೂರಾಗಿ ಪುಣ್ಯ ಲಭಿಸುತ್ತದೆ ಎನ್ನುವ ನಂಬಿಕೆಯಿಂದ ಸಾರ್ವಜನಿಕರು ನದಿಯಲ್ಲಿ ಪುಣ್ಯ ಸ್ನಾನ ಮಾಡುವ ಮೂಲಕ ತಮ್ಮ ಸಂಕಷ್ಟಗಳು ಬಗೆ ಹರಿಯಲಿ ಎಂದು ದೇವರಿಗೆ ಹರಕೆಯನ್ನು ತೀರಿಸುತ್ತಾರೆ. ಕಂಪ್ಲಿ ಕೊಟೆಯ ಪಂಪಾಪತಿ ದೇವಸ್ಥಾನ, ಹೊಳೆ ಆಂಜಿನೇಯ,ಪಟ್ಟನದ ಪೇಟೆ ಬಸವೇಶ್ವರ, ಸೊಂಮೇಶ್ವರ ಸೇರಿದಂತೆ ಇನ್ನಿತರ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ, ಪುಷ್ಪಾ ಅಲಂಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಸಂಜೆ ಹೊತ್ತಿಗೆ ಮಕ್ಕಳು , ಯುವತಿಯರು, ಮಹಿಳೆಯರು ಹೊಸ ಬಟ್ಟೆಗಳನ್ನು ಧರಿಸಿ ಸಂಬಂಧಿರ ಮನೆ ಮನೆಗೆ ತೆರಳಿ ಎಳ್ಳು-ಬೆಲ್ಲ ಕೊಟ್ಟು ಒಳ್ಳೊಳ್ಳೆ ಮಾತುಗಳನ್ನಾಡಿ, ಸುಖ-ದುಂಖ, ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಿ ಎಂದು ಪರಸ್ಪರ ಶುಭಾಷಯಗಳನ್ನು ಹಂಚಿಕೊಂಡರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!