ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಸರಕಾರಿ ಶತಮಾನ ಶಾಲೆಯ ಗೌರವ ಶಿಕ್ಷಕ ನಿರೂಪಕ ಸಂಪನ್ಮೂಲ ವ್ಯಕ್ತಿ ಎಸ್ ರಾಮಪ್ಪ ಅವರು ವಿದ್ಯಾ ವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಬೆಳಗಾವಿಯ ನಾಗರ ಮುನ್ನೋಳಿಯ ಕವಿತ ಕರ್ಮಣಿ ಫೌಂಡೇಶನ್ ವತಿಯಿಂದ ಜ. 25ರಂದು ಭಾನುವಾರ ನಡೆಯುವ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಯುವಕರ ದಿನಾಚರಣೆ ಹಾಗೂ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯಮಟ್ಟದ ವಿದ್ಯಾ ವಿಭೂಷಣ ಪ್ರಶಸ್ತಿಗೆ ಎಸ್ ರಾಮಪ್ಪ ಅವರ ನೆಲ ಜಲ ಭಾಷೆಯ ಸಂಸ್ಕೃತಿ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಗೌರವಪೂರ್ಣವಾಗಿ ನೀಡಲಾಗುವುದು ಎಂದು ಫೌಂಡೇಶನ್ ಅಧ್ಯಕ್ಷ ಲಾಲಾಸಾಬ್ ಎಚ್ ಪೆಂಡಾರಿ ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















