ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದೈವ ಶಕ್ತಿಗಳ ಐತಿಹಾಸಿಕ ಜೋಗದ ಭೇಟಿ

ಮಂಗಳೂರು : ಚೇಳಾರು ಗ್ರಾಮದ ಕೊಲ್ಯ ಶ್ರೀ ಜಾರಂದಾಯ ಧೂಮಾವತಿ ಪರಿವಾರ ದೖವಗಳ ವಾರ್ಷಿಕ ನೇಮೋತ್ಸವ.

“ಕೊಲ್ಯದಾಯನ” ವು ಮೊನ್ನೆ ಜನವರಿ 14 ರಂದು ಸಂಪ್ರದಾಯದಂತೆ ಮಕರ ಸಂಕ್ರಾಂತಿಯಂದು ದ್ವಜಾರೋಹಣ ದೊಂದಿಗೆ ಆರಂಭಗೊಂಡಿದ್ದು, ಜನವರಿ 15ರಂದು ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವವು ಸಾವಿರಾರು ಭಕ್ತಾಭಿಮಾನಿಗಳ ಉಪಸ್ಥಿತಿಯಲ್ಲಿ ಶ್ರದ್ಧಾ ಭಕ್ತಿಯಿಂದ ಅತೀ ವಿಜ್ರಂಭಣೆಯಿಂದ ಜರುಗಿತು. ಮೊದಲು ಮೖಸಂದಾಯ ದೈವದ ಕೋಲ ಜರುಗಿತು. ನಂತರ ಜಾರಂದಾಯ ಮತ್ತು ಧೂಮಾವತಿ ದೈವಗಳ ಮಾಣಿಚ್ಚಿಡಿ, ನಂತರ ಬಂಟ ಸಮೇತ ಗಗ್ಗರದಿಚ್ಚಿಡಿ, ತದ ನಂತರ ಮಾಣಿಚ್ಚಿಡಿ ಮುಖೇನ, ಗಗ್ಗರ, ಅಣಿಕಟ್ಟಿ ನಿಂತ ಪಂಬದರಿಗೆ ದೖವದ ಆವೇಶ ಹಸ್ತಾಂತರಿಸಿ, ದೖವದ ಮುಗ ಏರಿಸಿ, ಬಂಡಿ ಏರಿ ಬಾಕ್ಯಾರು ಗದ್ದೆಗೆ ಪ್ರಯಾಣ ಮಾಡಿ ಭಕ್ತ ಸಮಸ್ತರಿಗೆ ಅಭಯ ನೀಡಿದರು.
ಈ ವರ್ಷದ ಆಕರ್ಷಣೆ ಏನೆಂದರೆ ಊರಿನ ಅನಾಧಿ ಕಾಲದಿಂದ ಆರಾಧಿಸಿಕೊಂಡು ಬಂದಿರುವ ಶ್ರೀ ಕೋಡ್ದಬ್ಬು ಧೂಮಾವತಿ ದೈವಗಳು ತಮ್ಮ ಸ್ವಾಮಿ ಜಾರಂದಾಯ ಧೂಮಾವತಿ ದೈವಗಳನ್ನು ಭೇಟಿ ಆಗಬೇಕೆಂದು ಅಪೇಕ್ಷೆ ವ್ಯಕ್ತ ಪಡಿಸಿದುದರಿಂದ ಎರಡೂ ದೖವಸ್ಥಾನಗಳ ಸಮಿತಿಗಳು ಸಮಾಲೋಚಿಸಿ ಜಾರಂದಾಯ, ಧೂಮಾತಿ ಮತ್ತು ಕೋಡ್ದಬ್ಬು ಧೂಮಾವತಿ ದೈವಗಳ “ಜೋಗದ ಭೇಟಿ ” ಏರ್ಪಡಿಸಿ ಕೂಲ್ಯದ ಪುಟಗಳಲ್ಲಿ ಇತಿಹಾಸ ಬರೆದರು.
ಇವತ್ತು ಸಂಜೆ ಬಾಕಿಮಾರು ಗದ್ದೆಯಲ್ಲಿ ಚೆಂಡಿನ ಆಟ, ತದನಂತರ ಜಾರಂದಾಯನ ತಂಗಿ ಮಾಯಂದಾಲೆಯ ನೇಮ, ಆ ಬಳಿಕ ಜಾರಂದಾಯ ಧೂಮಾವತಿಯ ಮಾಣಿಚ್ಚಿಡಿಯಲ್ಲಿ ದ್ವಜಾವರೋಹಣದೊಂದಿಗೆ ವಾರ್ಷಿಕ ನೇಮೋತ್ಸವ ಮುಕ್ತಾಯಗೊಳ್ಳುವುದು.
ಕಳೆದ ಮೂರು ದಿನಗಳಿಂದ ಕ್ಷೇತ್ರಕ್ಕೆ ಆಗಮಿಸಿದ ಭಕ್ತ ಸಮೂದಾಯಕ್ಕೆ ಎಲ್ಲಾ ಹೊತ್ತಿಗೆ ವಿವಿಧ ಖಾದ್ಯಗಳ ಉಪಹಾರ, ಮೃಷ್ಟಾನ್ನ ಭೋಜನ ವ್ಯವಸ್ಥೆ ಮಾಡಲಾಗಿದ್ದು ಕ್ಷೇತ್ರದ ಆಡಳಿತ ಸಮಿತಿ ಮತ್ತು ಜೀರ್ಣೋದ್ದಾರ ಸಮಿತಿಯ ಹಾಗೂ ಕೋಡ್ದಬ್ಬು ದೖವಸ್ಥಾನದ ಆಡಳಿತ ಸಮಿತಿಯ ಈ ಐತಿಹಾಸಿಕ ನಡೆ ಅತ್ಯಂತ ಶ್ಲಾಘನೀಯ.

ವರದಿ: ಕರುನಾಡ ಕಂದ ಪತ್ರಿಕೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!