ಬಾಗಲಕೋಟೆ/ ಬನಹಟ್ಟಿ: ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸದಾಶಿವ ನಗರ ಬನಹಟ್ಟಿ ಶಾಲೆಯ ಸಹಶಿಕ್ಷಕ, ಸಾಹಿತಿಗಳಾದ ಚಿರಂಜೀವಿ ರೋಡಕರ್ ಅವರನ್ನು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು (ರಿ) ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀ ಸಂಗಮೇಶ ಖನ್ನಿನಾಯ್ಕರ್ ಮತ್ತು ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಆರ್ ಎಸ್ ಹಿರೇಗೌಡರ್ ಆದೇಶ ಮಾಡಿರುತ್ತಾರೆ. ಈ ಪರಿಷತ್ತು ಸರಕಾರಿ, ಅನುದಾನಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಶಿಕ್ಷಕರನ್ನು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಒಳಗೊಂಡಿದೆ ಎಂದು ಆದೇಶದಲ್ಲಿ ತಿಳಿಸಿರುತ್ತಾರೆ.
- ಕರುನಾಡ ಕಂದ ಪತ್ರಿಕೆ




















