
ಹೊನ್ನಾವರ : ಹಲವಾರು ವರ್ಷಗಳಿಂದ ಬಸ್ ಸೌಲಭ್ಯ ಕಾಣದೆ ಇರುವ ಇಡಗುಂಜಿಯ ಮುಳ್ಕೋಡ ಅಡ್ಕರಿ ಕ್ರಾಸ್ ಗ್ರಾಮಸ್ಥರು ಕರುನಾಡ ವಿಜಯ ಸೇನೆಯ ಕಚೇರಿಗೆ ಬಂದು ಬಸ್ ವಿಸ್ತರಣೆ ಬಗ್ಗೆ ಸಂಘಟನೆ ಸಹಕಾರ ಬೇಕೆಂದು ಕೇಳಿದಾಗ ಕೂಡಲೇ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ವಿನಾಯಕ ಆಚಾರಿ ರವರು ಸಂಬಂಧಪಟ್ಟಂತಹ ಕುಮಟಾ ಡಿಪೋ ಮ್ಯಾನೇಜರ್ ಹಾಗೂ ಹೊನ್ನಾವರ ತಾಲೂಕ ದಂಡಾಧಿಕಾರಿಗಳಾದ ಪ್ರವೀಣ್ ಕರಾಂಡೆ ಅವರನ್ನು ಭೇಟಿಯಾಗಿ 14/11/2025 ರಂದು ಮನವಿ ನೀಡಿ ಸಮಸ್ಯೆ ಕುರಿತು ಸಂಘಟನೆಯ ವತಿಯಿಂದ ಚರ್ಚೆ ಮಾಡಿ ಮನವಿ ಸಲ್ಲಿಸಿದರ ಇದರ ಫಲವೇ ಇಂದು ಪೂಜೆ ಮಾಡುವ ಮುಖಾಂತರ ಬಸ್ ಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷರಾದ ವಿನಾಯಕ ಆಚಾರಿ, ಪಿಡಿಓ ಗಿರೀಶ್ ನಾಯಕ್, ಮುಳ್ಕೊಡು ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಿ ಅಂಕುಶ್ ಗೌಡ, ನಾರಾಯಣ ಅಂಬಿಗ, ಹಾಗೂ ಊರ ನಾಗರಿಕರು ಬಸ್ಸಿಗೆ ಪೂಜೆ ಮಾಡುವ ಮುಖಾಂತರ ಇಂದಿನಿಂದ ಆರಂಭವಾದ ಬಸ್ ಸಂಚಾರಕ್ಕೆ ಸಾಕ್ಷಿಯಾದರು.




















