ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೂರು ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ.

ಗುರುಮಠಕಲ್: ಪಟ್ಟಣದ ಶ್ರೀ ಬಸವೇಶ್ವರ ಆಸ್ಪತ್ರೆ ದಿನಾಂಕ: 26-01-2026 ರಿಂದ ದಿನಾಂಕ 28-01-2026 ವರೆಗೆ ಮೂರು ದಿನಗಳ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಬೆಳಿಗ್ಗೆ 10 ರಿಂದ 3 ಗಂಟೆವರೆಗೆ ಹಮ್ಮಿಕೊಂಡಿರುವದಾಗಿ ಡಾ. ಬಸವರಾಜ ಬೇಲಿ ಸುದ್ದಿಗೋಷ್ಠಿ ನಡೆಸಿ ಶುಕ್ರವಾರ ತಿಳಿಸಿದರು.

ಆಸ್ಪತ್ರೆ ಪ್ರಾರಂಭವಾಗಿ 13 ವರ್ಷ ಆಗಿರುವ ಸುಸಂದರ್ಭದಲ್ಲಿ ಶಿಬಿರದಲ್ಲಿ ಬಂಜೆತನ, ಸ್ತ್ರೀ ರೋಗ, ಥೈರಾಯ್ಡ್, ಮುಟ್ಟಿನ ಅಸ್ವಸ್ಥತೆ, ಪಿಸಿಒಡಿ, ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ, ಸೋರಿಯಸ್, ಮೂಲವ್ಯಾಧಿ, ರಕ್ತ ಸ್ರಾವ, ಭಗಂದರ ಮುಂತಾದ ರೋಗಗಳ ತಪಾಸಣೆ ಜರುಗುವದು ಎಂದು ತಿಳಿಸಿದರು.

ಶಿಬಿರದಲ್ಲಿ ನುರಿತ ವೈದ್ಯರಾದ ಡಾ. ವರ್ಷರಾಣಿ ಸ್ತ್ರೀ ರೋಗ ತಜ್ಞರು, ಶಸ್ತ್ರಚಿಕಿತ್ಸಕರಾದ
ಡಾ. ವಿನೋದ್ ಭಾವಿ, ಚರ್ಮರೋಗ ತಜ್ಞರಾದ ಡಾ. ಸೌಮ್ಯ ವಿ. ಭಾವಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ನಾಗಭೂಷಣ ಅವಂಟಿ, ನರಸರೆಡ್ಡಿ ಪೊಲೀಸ್ ಪಾಟೀಲ ಗಡ್ಡೆಸುಗೂರು, ವೀರಣ್ಣ ಬೇಲಿ ಉಪಸ್ಥಿತರಿದ್ದರು.

ವರದಿ: ಕರುನಾಡ ಕಂದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!