ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೀದಿ ಬದಿ ವ್ಯಾಪಾರಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು : ಪ್ರಾಣೇಶ್

ಕಂಪ್ಲಿ: ನಗರ ಪಟ್ಟಣಗಳಲ್ಲಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಿರುವ ಬೀದಿ ಬದಿಯ ವ್ಯಾಪಾರಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೊಗ ಪಡಿಸಿಕೊಂಡು ಉತ್ತಮ ಜೀವನ ನಡೆಸಬೇಕೆಂದು ಅಭಿಯಾನ ನಿರ್ದೇಶಕರ ಕಚೇರಿ, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವ್ಯವಸ್ಥಾಪಕ ಪ್ರಾಣೇಶ್ ತಿಳಿಸಿದರು.
ಅವರು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬಳ್ಳಾರಿ ಮತ್ತು ಪುರಸಭೆ ಕಂಪ್ಲಿ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಲೋಕ ಕಲ್ಯಾಣ ಮೇಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪುರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹೊಸ ಅರ್ಜಿಗಳ ಕ್ರೋಢೀಕರಣ ಮತ್ತು ಸಾಲ ವಿತರಣೆ, ಪ್ರೊಪೈಲಿಂಗ್ ಮತ್ತು ಸ್ಕೀಮ್ ಮಂಜೂರಾತಿಗಳು, ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಹಾಗೂ ಡಿಜಿಟಲ್ ಆನ್ ಬೋರ್ಡಿಂಗ್ ಕುರಿತು ತರಬೇತಿಯನ್ನು ನೀಡಲಾಗುವುದು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಬಾಕಿ ಇರುವ ವಿವಿಧ ಸಾಲ ವಿತರಣೆಯನ್ನು ಮಾಡಲಾಗುವುದು ಎಂದು ವಿವರಿಸಿದರು.
ಪುರಸಭೆಯ ಕಂದಾಯ ನಿರೀಕ್ಷಕಿ ಹಾಗೂ ಸಮುದಾಯ ಸಂಘಟಕಿಯಾದ ಜಯಲಕ್ಷ್ಮೀಯವರು ಮಾತನಾಡಿ ಪುರಸಭೆ ವ್ಯಾಪ್ತಿಯಲ್ಲಿಸುಮಾರು 1600 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿದ್ದು, ಇದರಲ್ಲಿ ಈಗಾಗಲೇ 802 ಜನರಿಗೆ ತಲಾ 10 ಸಾವಿರ ರೂ. ಗಳ ಸಾಲ ವಿತರಿಸಲಾಗಿದೆ. ಮೊದಲ ಹಂತದಲ್ಲಿ ತಲಾಹತ್ತು ಸಾವಿರ, ಎರಡನೇ ಹಂತದಲ್ಲಿ ತಲಾ 20 ಸಾವಿರ ಹಾಗೂ ಮೂರನೇ ಹಂತದಲ್ಲಿ ತಲಾ 50 ಸಾವಿರ ರೂಗಳ ಸಾಲವನ್ನು ವಿತರಿಸಲಾಗುವುದು. ಈಗಾಗಲೇ ಎರಡನೇ ಹಂತದಲ್ಲಿ 417 ವ್ಯಾಪಾರಿಗಳಿಗೆ, ಮೂರನೇ ಹಂತದಲ್ಲಿ18 ವ್ಯಾಪಾರಿಗಳಿಗೆ ಸಾಲ ವಿತರಿಸಲಾಗಿದೆ. ಸಾಲವನ್ನು ಪಡೆದ ಬೀದಿ ಬದಿ ವ್ಯಾಪಾರಿಗಳು ಉತ್ತಮವಾಗಿ ವ್ಯಾಪಾರವನ್ನು ಮಾಡುತ್ತಿದ್ದು, ಆರ್ಥಿಕವಾಗಿ ಸದೃಢರಾಗುತ್ತಿದ್ದು, ಸಾಲ ಮುರುಪಾವತಿಯೂ ಸಹಿತ ಶೇ.90%ರಷ್ಟು ಇದೆ ಎಂದರು.
ಸಾಲವನ್ನು ಪಡೆದ ಬೀದಿ ಬದಿಯ ವ್ಯಾಪಾರಿಗಳು ಸಾಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಗಕವಾಗಿ ಸದೃಢರಾವು ಜೊತೆಗೆ ಸಾಲ ಮರುಪಾವತಿಯನ್ನು ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣದ 5 ಬ್ಯಾಂಕುಗಳಿಂದ 10 ಜನ ವ್ಯಾಪಾರಿಗಳಿಗೆ ಸಾಲ ಮಂಜೂರಾತಿ ಪತ್ರಗಳನ್ನುವಿತರಿಸಿದರು.ಈ ಸಂದರ್ಭದಲ್ಲಿ ಪುರಸಭೆ ಕಂದಾಯಾಧಿಕಾರಿ ಸಿ.ಪ್ರಶಾಂತ, ಬಿಡಿಸಿಸಿ ಬ್ಯಾಂಕಿನ ಸುನೀಲ್, ಕೆನರಾ ಬ್ಯಾಂಕಿನ ಮಂಜುನಾಥ್, ಕರ್ನಾಟಕ ಬ್ಯಾಂಕಿನ ಪವನ್, ಎಸ್.ಬಿ.ಐ.ಬ್ಯಾಂಕಿನ ವೀರಾಂಜಿನೇಯಲು, ಕರ್ನಾಟಕ ಬ್ಯಾಂಕಿನ ಸಚಿನ್, ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳಾದ ರಂಗಪ್ಪ, ವನಿತಾ, ಕೃಷ್ಣ, ಕಾಶೀಂ ಸೇರಿದಂತೆ ಇತರೆ ಪದಾಧಿಕಾರಿಗಳು, ಬೀದಿ ಬದಿಯ ವ್ಯಾಪಾರಿಗಳು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!