ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿಜಶರಣ ಅಂಬಿಗರ ಚೌಡಯ್ಯನವರು ತಂದೆ ತಾಯಿ ಗುರು ಹಿರಿಯರ ಸೇವೆಯಲ್ಲಿ ಲಿಂಗ ಪೂಜೆ ಕಂಡವರು : ಸಂಗಮೇಶ ನವಲಿ

ವಿಜಯಪುರ/ಮುದ್ದೇಬಿಹಾಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಹಾಳ ಶಾಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಾಂತಗೌಡ ಮಾಡಗಿ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಶಿವನಗೌಡ ಸಿದ್ದಪ್ಪಗೌಡ ಪಾಟೀಲ ನಾಗಪ್ಪ ಜಟ್ಟೆಪ್ಪ ಹಿರೇಕುರುಬರ ಯಲಗೂರದಪ್ಪ ಜಂಗಾಣಿ ಶಾಂತಪ್ಪ ಹಡ್ಲಗೇರಿ ಆನಂದ ಚಲವಾದಿ ನಿಜಶರಣ ಅಂಬಿಗರ ಚೌಡಯ್ಯ ಗೆಳೆಯರ ಬಳಗ ಗುಡಿಹಾಳದ ಸದಸ್ಯರಾದ ಶಿವಪ್ಪ ನಿಂಗಪ್ಪ ಅಂಬಿಗೇರ ಬಸಪ್ಪ ಕೋಲಕಾರ ಪರಶುರಾಮ ಅಂಬಿಗೇರ ಮಲ್ಲಣ್ಣ ಕೋಲಕಾರ ಪ್ರದೀಪ ಅಂಬಿಗೇರ ಕಲ್ಲಪ್ಪ ತಿಪ್ಪಣ್ಣ ಅಂಬಿಗೇರ ಬಸಪ್ಪ ಮಲ್ಲಪ್ಪ ಕೋಲಕಾರ ಸಹದೇವಪ್ಪ ಕೋಲಕಾರ ಮಹಾದೇವಪ್ಪ ನಿಂಗಣ್ಣ ಅಂಬಿಗೇರ ಸೋಮಪ್ಪ ಬಸಪ್ಪ ಕೋಲಕಾರ ಮಲ್ಲಿಕಾರ್ಜುನ ಅಂಬಿಗೇರ ಮಡಿವಾಳಪ್ಪ ಸಿದ್ದಪ್ಪ ಅಂಬಿಗೇರ ಮತ್ತು ಶಾಲಾ ಮುಖ್ಯ ಗುರುಗಳಾದ ಶ್ರೀ ಸಂಗಮೇಶ ನವಲಿ ಸಹ ಶಿಕ್ಷಕಿಯರಾದ ಲಕ್ಷ್ಮೀ ದೇವೇಂದ್ರಪ್ಪ ಮನಿಕಟ್ಟಿ ಹಾಗೂ ಅತಿಥಿ ಶಿಕ್ಷಕರಾದ ಶ್ರೀಮತಿ ಕಾಶಿಬಾಯಿ ಹಾದಿಮನಿ ಶಾಲಾ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ಮಕ್ಕಳಿಗೆಲ್ಲ ಸಿಹಿಯನ್ನು ಹಾಗೂ ಸ್ಕೆಚ್ ಪೆನ್ ಕಿಟ್ ನ್ನು ನಿಜಶರಣ ಅಂಬಿಗರ ಚೌಡಯ್ಯ ಗೆಳೆಯರ ಬಳಗ ಗುಡಿಹಾಳದವರು ವಿತರಿಸಿದರು.
ಮುಖ್ಯ ಗುರುಗಳಾದ ಶ್ರೀ ಸಂಗಮೇಶ ಶಾಂತಪ್ಪ ನವಲಿ ಮಾತನಾಡಿ “ಕಲ್ಲದೇವರ ಪೂಜೆಯ ಮಾಡಿ, ಕಲಿಯುಗದ ಕತ್ತೆಗಳಾಗಿ ಹುಟ್ಟಿದರು. ಮಣ್ಣದೇವರ ಪೂಜಿಸಿ ಮಾನಹೀನರಾದರು. ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು. ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು! ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದ ಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ” ಎನ್ನುವಂತೆ ದೇವರು ನಮ್ಮೊಳಗೆ ಇದ್ದಾನೆ ನಮ್ಮ ತಂದೆ ತಾಯಿ ಗುರುಹಿರಿಯರ ರೂಪದಲ್ಲಿ ಇದ್ದಾನೆ ಅವರನ್ನು ಗೌರವಿಸುವುದನ್ನು ಅಂಬಿಗರ ಚೌಡಯ್ಯನವರು ಹೇಳಿದ್ದಾರೆ ಎಂದು ಹೇಳಿದರು. ಶ್ರೀಮತಿ ಕಾಶಿಬಾಯಿ ಹಾದಿಮನಿ ನಿರೂಪಿಸಿದರು ಕುಮಾರಿ ಲಕ್ಷ್ಮೀ ದೇವೇಂದ್ರಪ್ಪ ಮನಿಕಟ್ಟಿ ಸ್ವಾಗತಿಸಿದರು ಕುಮಾರಿ ಶಾರದಾ ಮಾದರ ಹಾಗೂ ಸಂಗಡಿಗರು ಪ್ರಾರ್ಥಿಸಿದರು ಶ್ರೀ ಸಂಗಮೇಶ ಶಾಂತಪ್ಪ ನವಲಿ ವಂದಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!