
ಹೊರಬಂದ ಶ್ರೀ ಸ್ವಾಮಿಯ ತೇರು ಗಡ್ಡೆ
ಕೊಟ್ಟೂರು : ಪಟ್ಟಣದ ನಾಡಿನ ಸಂಖ್ಯಾತ ಭಕ್ತ ಗಣ ಹೊಂದಿರುವ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವವು ಫೆಬ್ರವರಿ 12 ರಂದು ಜರುಗಲಿದೆ ಶುಕ್ರವಾರಂದು ಶ್ರೀ ಸ್ವಾಮಿಯ ತೇರು ಗಾಲಿಯನ್ನು ಹೊರ ಹಾಕುವ ಧಾರ್ಮಿಕ ಕಾರ್ಯವು
ಸರಳವಾಗಿ ಜರುಗಿತು.
ಪಟ್ಟಣದ ಮೂರ್ಕಲ್ ಮಠದ ಹತ್ತಿರ ಇರುವ ರಥಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾದ ರಥದ ಮೇಲೆ ಕ್ರಿಯಾ ಮೂರ್ತಿ ಕೊಟ್ಟೂರು ದೇವರು ಶಿವಪ್ರಕಾಶ್ ಸ್ವಾಮಿಯನ್ನು ಕೂರಿಸಿ ಚಾಮರ ಬಿಸುತ್ತ ತೇರು ಬಯಲಿಗೆ ಬಂದು ಸೇರಿತು ರಥವು ನಿರ್ದಿಷ್ಟ ಸ್ಥಾನಕ್ಕೆ ಹೋಗುವುದಕ್ಕೆ ಆಯಗಾರ ಬಳಗ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಕ್ರಿಯಾ ಮೂರ್ತಿ ಕೊಟ್ಟೂರು ದೇವರು ಶಿವಪ್ರಕಾಶ್ ಸ್ವಾಮೀಜಿ . ದೇವಸ್ಥಾನದ . ಪ್ರಧಾನ ಧರ್ಮ ಕರ್ತರಾದ ಎಂ ಕೆ. ಶೇಖರಯ್ಯ. ಅರ್ಚಕರ ಬಳಗವು ಕಟ್ಟಿಮನಿ ದೈವಸ್ಥರು . ಪಿಎಸ್ಐ ಗೀತಾಂಜಲಿ ಶಿಂಧೆ. ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದರು ಸೂಕ್ತ ಬಂದೋಬಸ್ತ್
ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















