ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು : ದೇವದಾಸಿ ಮಹಿಳೆಯರಿಗೆ ಉಚಿತ ಸೀರೆ ವಿತರಣೆ

ಕಂಪ್ಲಿ: ಸಮಾಜ ಸೇವೆಯೊಂದಿಗೆ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಯುವ ನಾಯಕ ವಿ.ವಿವೇಕ್‌ಗೌಡ ಅವರ ಜನ್ಮದಿನದ ಅಂಗವಾಗಿ ಅವರ ಸಮ್ಮುಖದಲ್ಲಿ ಅಭಿಮಾನಿ ಬಳಗದಿಂದ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ಶನಿವಾರ ವಿತರಿಸಿದರು.
ನಂತರ ಯುವ ನಾಯಕ ವಾಸು ನಾಯಕ ಮಾತನಾಡಿ, ಚಿಕ್ಕ ವಯಸ್ಸಿನಿಂದಲೇ ಸಮಾಜ ಸೇವೆಯೊಂದಿಗೆ ಜನರ ಪ್ರೀತಿ, ವಿಶ್ವಾಸ ಗಳಿಸುವ ಜೊತೆಗೆ ಸಾಕಷ್ಟು ಮಹಿಳೆಯರಿಗೆ ಚಾರಿಟೇಬಲ್ ಟ್ರಸ್ಟ್ ಮೂಲಕ ತರಬೇತಿ ನೀಡುವುದರೊಂದಿಗೆ ಸ್ವಯಂ ಉದ್ಯೋಗಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಇಂತಹ ಇನ್ನಷ್ಟು ಸೇವೆಗಳ ಮೂಲಕ ದೊಡ್ಡ ಮಟ್ಟದಲ್ಲಿ ಬೆಳೆಯಲಿ. ಹಾಗೂ ಇವರಿಗೆ ಸದಾ ಆರೋಗ್ಯ, ಆಯಸ್ಸು, ಸಮೃದ್ಧಿ, ಸಂಪತ್ತು ದೊರಕಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಡಾ.ಹಾರಿಕಾ, ಯುವ ಮುಖಂಡರಾದ ಮುದ್ದಾಪುರ ಯಲ್ಲಪ್ಪ, ಮಂಜುನಾಥ್, ಜಡೇಶ, ಸುಂದರ, ಪ್ರವೀಣ, ದುರುಗೇಶ, ರಾಘವೇಂದ್ರ, ಮಂಜು, ತರುಣ್, ವಂಶಿ, ಉಮೇಶ್, ಹರ್ಷ, ಆಕಾಶ, ಮರಿಸ್ವಾಮಿ, ರಾಜ, ರಮೇಶ, ರಘು, ತಿಪ್ಪೇಸ್ವಾಮಿ, ರವಿ, ತಿಮಪ್ಪ, ನಾಗ ಸೇರಿದಂತೆ ಇತರರು ಇದ್ದರು.

ಸೀರೆ ವಿತರಣೆ : ಜನ್ಮದಿನದ ಪ್ರಯುಕ್ತ ಯುವ ಮುಖಂಡ ವಿ.ವಿವೇಕ್ ಗೌಡ ಇವರು ಇಲ್ಲಿನ 4ನೇ ವಾರ್ಡಿನಲ್ಲಿರುವ ಕೆಂಚಮ್ಮ ಗುಡಿ ಬಳಿಯಲ್ಲಿ 30-40 ಜನ ದೇವದಾಸಿ ಮಹಿಳೆಯರಿಗೆ ಉಚಿತವಾಗಿ ಸೀರೆಗಳನ್ನು ವಿತರಿಸಿದರು.

ಪವಿತ್ರಾ ಚಾರಿಟೇಬಲ್ : ಪಟ್ಟಣದ ಎಂ.ಡಿ.ಕ್ಯಾಂಪಿನ ಶಿರಡಿ ಸಾಯಿಬಾಬ ದೇವಸ್ಥಾನ ಬಳಿ ಇರುವ ಪವಿತ್ರ ಚಾರಿಟೇಬಲ್ ಟ್ರಸ್ಟ್ ಕೋಳೂರು ವತಿಯಿಂದ ಯುವ ನಾಯಕ ವಿ.ವಿವೇಕ್ ಗೌಡ ಅವರ ಜನ್ಮದಿನದ ಅಂಗವಾಗಿ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಜನ್ಮದಿನವನ್ನು ಶನಿಚಾರ ಆಚರಿಸಿದರು. ಜನ್ಮದಿನದ ನಿಮಿತ್ಯ ಮಹಿಳೆಯರಿಗೆ ಹತ್ತು ದಿನಗಳ ಕಾಲ ಉಚಿತವಾಗಿ ತರಬೇತಿ ನೀಡಿದರು. ಮತ್ತು ಉಚಿತವಾಗಿ ಸೀರೆ ಕುಚ್ ಅನ್ನು ನೀಡಿದರು.
ಈ ಸಂದರ್ಭದಲ್ಲಿ ಟ್ರಸ್ಡ್ ಅಧ್ಯಕ್ಷೆ ವಿ.ಪವಿತ್ರಗೌಡ, ಉಪಾಧ್ಯಕ್ಷ ವಿ.ಶಿವನಗೌಡ ಸೇರಿದಂತೆ ಮಹಿಳಾ ಮಣಿಗಳು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!