ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘ ನಿಯಮಿತ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಸ್ಥಳೀಯ ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘ ನಿಯಮಿತ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಪ್ರತಿಷ್ಠಿತ ಎಪಿಎಂಸಿ ಸಭಾಭವನದಲ್ಲಿ ನೆರವೇರಿತು. ತಾಲೂಕಿನ ಮೀಣಗಿ ಗ್ರಾಮದ ಶರಣ ತತ್ವ ಅನುಯಾಯಿಗಳು, ಈ ಸಂಘದ ಸಂಸ್ಥಾಪಕರಾದ ದಿವಂಗತ ಶ್ರೀಮಾನ್ಯ ಜಿಎಸ್ ಶೆಟ್ಟಿ ಸಾಹುಕಾರ್ ಅವರು ತಮ್ಮ ಜೀವಿತ ಅವಧಿವರೆಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ , ಸದೃಢವಾಗಿ ಬೆಳೆಸುತ್ತಾ ಬಂದವರು ಸದ್ಯ ಹಾಲಿ ಶ್ರೀಮಾನ್ಯ ಕಾಶೀನಾಥ್ ಎಸ್. ಮುರಾಳ ಅವರು ಈ ಸಂಘವನ್ನು ಸದೃಢವಾಗಿ ಬೆಳೆಸಿ ಈಗ ಬೃಹತ್ ಪ್ರಮಾಣದಲ್ಲಿ ಸ್ವಂತ ಕಟ್ಟಡವನ್ನು ಹೊಂದಿ ಮುನ್ನಡೆಸುತ್ತಾ ಸಾಗಿದ್ದಾರೆ.

ಈ ಸಭೆಯ ದಿವ್ಯ ಸಾನಿಧ್ಯವನ್ನು ಇಂಗಳೇಶ್ವರ ವಿರಕ್ತ ಮಠದ ಮ.ನಿ.ಪ್ರ.ಜಗದ್ಗುರು ಡಾ.ಸಿದ್ದಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಸಿದ್ದಲಿಂಗ ದೇವರು ತಾಳಿಕೋಟೆ ಖಾಸ್ಗತೇಶ್ವರ ಮಠ ವಹಿಸಿಕೊಂಡಿದ್ದರು.
ಅಧ್ಯಕ್ಷತೆಯನ್ನು ಶ್ರೀ ಕಾಶೀನಾಥ ಎಸ್.ಮುರಾಳ ಅಧ್ಯಕ್ಷರು ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘ ತಾಳಿಕೋಟೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀಮಾನ್ಯ ಭೀಮನಗೌಡ ( ರಾಜು ಗೌಡ ) ಶಾಸಕರು ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ, ಶ್ರೀ ಎ.ಎಸ್.ಪಾಟೀಲ (ನಡಹಳ್ಳಿ) ಮಾಜಿ ಶಾಸಕರು ಹಾಗೂ ರಾಜ್ಯಾಧ್ಯಕ್ಷರು ರೈತ ಮೋರ್ಚಾ ಬಾ.ಜ.ಪಾ ಬೆಂಗಳೂರು, ಶ್ರೀ ಸೋಮನಗೌಡ ಬಿ.ಪಾಟೀಲ (ಸಾಸನೂರ) ಮಾಜಿ ಶಾಸಕರು ದೇವರ ಹಿಪ್ಪರಗಿ ಮತಕ್ಷೇತ್ರ
ಮತ್ತು ಈ ಬ್ಯಾಂಕಿನ ಸರ್ವ ಆಡಳಿತ ಮಂಡಳಿಯವರು ವೇದಿಕೆಯನ್ನು ಹಂಚಿಕೊಂಡಿದ್ದರು.
ಶ್ರೀ ಸಿ ಎಸ್ ನಾಡಗೌಡ (ಅಪ್ಪಾಜಿ) ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರು ಹಾಗೂ ಅಧ್ಯಕ್ಷರು
ಸಾಬೂನು, ಮಾರ್ಜಕ ನಿಗಮ ಬೆಂಗಳೂರು ಇವರು ಸೇಫ್ ಲಾಕರ್ ಉದ್ಘಾಟನೆ ಮಾಡಿ ಈ ಸಂಘದ ಸಂಸ್ಥಾಪಕರಾದ ದಿವಂಗತ ಜಿ.ಎಸ್. ಕಶೆಟ್ಟಿ ಅವರ ಆತ್ಮೀಯ ಸ್ನೇಹಿತರು ಅವರು ತಮ್ಮ ಮುಖ್ಯ ಅತಿಥಿ ಭಾಷಣದಲ್ಲಿ ಈ ಸಂಘವು ಇಷ್ಟು ಬಲಿಷ್ಠವಾಗಿ ಬೆಳೆದಿರುವುದು ಅವರ ಕನಸಿನ ಕೂಸು ಎಂದು ಹೇಳಿದರು ಮತ್ತು ಅವರೊಂದಿಗಿನ ಒಡನಾಟದ ಹತ್ತಾರು ವಿಷಯಗಳನ್ನು ಮಾತಾಡಿ ಸದ್ಯ ಅವರು ಇಲ್ಲದಿದ್ದರೂ ಅವರು ಇದ್ದಾರೆ ಅಂತ ಭಾವಿಸುತ್ತಾ ಅವರು ಮಾರ್ಗದರ್ಶನದಂತೆ ಈಗಿನ ಆಡಳಿತ ಮಂಡಳಿ ನಡೆಸಿಕೊಂಡು ಹೋಗುತ್ತಾರೆಂದು ಭರವಸೆ ಇಟ್ಟು ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಿಬ್ಬಂದಿ ವರ್ಗದವರು ಮತ್ತು ಷೇರುದಾರರು, ಸ್ಥಳೀಯ ಸಹಕಾರ ಸಂಸ್ಥೆಗಳ ಅಧ್ಯಕ್ಷರು, ಸಿಬ್ಬಂದಿಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ನೆರವು ತಂದುಕೊಟ್ಟವರಿಗೆ ಆಡಳಿತ ಮಂಡಳಿಯಿಂದ ಸರ್ವರಿಗೂ ಸ್ವಾಗತ ಮತ್ತು ಅಭಿನಂದನೆಗಳನ್ನು ಸಲ್ಲಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ವರದಿ ಸಂಗಮೇಶ ಸಿ. ಚೌದ್ರಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!