ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಮನೀಯ ಕ್ಷೇತ್ರದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಸುಪ್ರಸಿದ್ಧ ಐತಿಹಾಸಿಕ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು.


ಈ ಜಾತ್ರಾ ಮಹೋತ್ಸವ ಸಂಕ್ರಾಂತಿಯ ನಂತರದ ದಿನಗಳಲ್ಲಿ ಸೂರ್ಯನ ಹುಟ್ಟು ಹಬ್ಬದ ದಿನವಾದ ರಥಸಪ್ತಮಿಯoದು ನಡೆಯುತ್ತದೆ. ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯವು ಸುಮಾರು 5000 ವರ್ಷಗಳಷ್ಟು ಹಳೆಯದಾಗಿದ್ದು ಇಲ್ಲಿನ ಆಂಜನೇಯ ಸ್ವಾಮಿ ವಿಗ್ರಹವನ್ನು ಜನಮೇಜಯ ಎಂಬ ಮಹಾರಾಜರು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ ಇದು ತ್ರಿಮುಖ (ಹನುಮ ಭೀಮ ಮಧ್ವ) ರೂಪವಾಗಿ ಎದುರು ಮುಖ ಆಂಜನೇಯ ಸ್ವಾಮಿ ಮೂರ್ತಿಯಾಗಿದೆ. ರಥೋತ್ಸವದ ಚಾಲನೆಯನ್ನು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಮತ್ತು ದೇವಾಲಯದ ಆಡಳಿತ ಮಂಡಳಿಯಿಂದ ನೆರವೇರಿತು.
ರಥೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ರಥದ ಮೇಲೆ ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೇಯ ಸ್ವಾಮಿ ವಿಗ್ರಹಗಳನ್ನು ಕೂರಿಸುತ್ತಾರೆ.
ಈ ಸಂದರ್ಭದಲ್ಲಿ ಆಕಾಶದಲ್ಲಿ ಗರುಡ ಪಕ್ಷಿಯು ಮೂರು ಬಾರಿ ಪ್ರದಕ್ಷಿಣೆ ಹಾಕಿದ ನಂತರ ಭಕ್ತರು ಹನುಮನ ಭಕ್ತಿ ಶ್ರೀ ರಾಮನ ಪರಿಪಟನೆ ಮಾಡುತ್ತಾ ರಥವನ್ನು ಎಳೆದರು. ದೇವಾಲಯದ ಮತ್ತು ರಥಕ್ಕೆ ಪುಷ್ವಲಂಕಾರವನ್ನು ದೇವಾಲಯದ ಆಂಜನೇಯ, ರಾಮ ಲಕ್ಷ್ಮಣರ, ವೆಂಕಟರಮಣ ಸ್ವಾಮಿಯ ವಿಗ್ರಹಗಳಿಗೆ ಪುಷ್ಪಲಂಕಾರವನ್ನು ಸಮಾಜ ಸೇವಕರಾದ ಪಿಎನ್ ಕೃಷ್ಣಮೂರ್ತಿ ಅವರು ನೆರವೇರಿಸಿದರು . ಬ್ರಹ್ಮರಥೋತ್ಸವದಲ್ಲಿ ಬಂದಿದ್ದ ಸಾವಿರಾರು ಭಕ್ತರಿಗೆ ಮಜ್ಜಿಗೆ ಪಾನಕ, ಹೆಸರುಬೇಳೆ ಮತ್ತು ಅನ್ನ ಸಂತರ್ಪಣೆಯನ್ನು ಮಾಡಿದರು.
ಇದೇ ಸಂದರ್ಭದಲ್ಲಿ ಪಿಎನ್ ಕೃಷ್ಣಮೂರ್ತಿ ಅವರು ಮಾತನಾಡಿ ಪ್ರತಿ ವರ್ಷವೂ ನಾವು ನಮ್ಮ ಕುಟುಂಬದವರು ಸ್ವಾಮಿಯ ಪೂರ್ಣ ದೇವಾಲಯಕ್ಕೆ ಬೇಕಾಗುವ ಹೂವಿನ ಅಲಂಕಾರ ಮತ್ತು ಅನ್ನ ಸಂತರ್ಪಣೆ ಮಾಡುತ್ತಾ ಬಂದಿದ್ದೇವೆ. ಇಲ್ಲಿ ಆಡಳಿತ ಮಂಡಳಿಯು ದೇವಾಲಯದ ಆವರಣದಲ್ಲಿ ಜಾಗ ನೀಡಿದರೆ ಒಂದು ಸಮುದಾಯ ಭವನವನ್ನು ನಿರ್ಮಿಸಿ ದೇವಾಲಯದ ಆಡಳಿತಕ್ಕೆ ನೀಡುವುದಾಗಿ ಹೇಳಿದರು. ದೇವರು ಸಮಾಜ ಸೇವಕರಾಗಿರುವ ನಮಗೆ ಮುಂದೆ ಜನಸೇವೆ ಮಾಡುವ ಅವಕಾಶವನ್ನು ನೀಡಲಿ ಎಂದು ಪ್ರಾರ್ಥಿಸುತ್ತಾ ಜೈ ಆಂಜನೇಯ ಸ್ವಾಮಿಯನ್ನು ಕೇಳಿಕೊಂಡರು. ರಥೋತ್ಸವದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಮತ್ತು ಪಿಎನ್ ಕೆ ಅಭಿಮಾನಿಗಳು ಮುಂದಿನ ದಿನಗಳಲ್ಲಿ ನೀವು ನಮ್ಮ ಶಾಸಕರಾಗಬೇಕು ಎಂದು ರಥೋತ್ಸವಕ್ಕೆ ಬಾಳೆ ಹಣ್ಣನ್ನು ಎಸೆಯು ದೂರ ಮುಖಾಂತರ ಪಿ ಎನ್ ಕೆ ಅವರಿಗೆ ಮುಂದಿನ ಚುನಾವಣೆಗೆ ಸ್ವಾಗತ ತಿಳಿಸಿದರು.
ಇದೆ ಸಂದರ್ಭದಲ್ಲಿ ಗೃಹ ಸಚಿವರು ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಇವರ ಜೊತೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ, ಎಸ್ ಪಿ ಅಶೋಕ್,ಪಿ ಎನ್ ಕೃಷ್ಣಮೂರ್ತಿ, ತಹಶೀಲ್ದಾರ್ ಮಂಜುನಾಥ್, ಇ ಓ ಅಪೂರ್ವ ರವರು , ಕ್ಯಾಮೇನಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ದೇವಾಲಯದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಸಾವಿರಾರು ಹನುಮ ಭಕ್ತರು ಭಾಗವಹಿಸಿದ್ದರು.

ವರದಿ ಪ್ರಸನ್ನಕುಮಾರ್ ಎಸ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!