ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಚಿಕೇನಕೊಪ್ಪ ಶ್ರೀ ಚನ್ನವೀರ ಶರಣರ ತತ್ವ ಮತ್ತು ಆದರ್ಶಗಳು ಸಮಾಜದ ಅಭಿವೃದ್ಧಿಗೆ ಸದಾ ಪೂರಕ : ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ

ಕಂಪ್ಲಿ: ಚಿಕೇನಕೊಪ್ಪ ಶ್ರೀ ಚನ್ನವೀರ ಶರಣರ ತತ್ವ ಮತ್ತು ಆದರ್ಶಗಳು ಸಮಾಜದ ಏಳ್ಗೆಗೆ, ಸಮಾಜವನ್ನು ತಿದ್ದಲಿಕ್ಕೆ ಹಾಗೂ ಸಮಾಜದ ಅಭಿವೃದ್ಧಿಗೆ ಸದಾ ಪೂರಕವಾಗಿವೆ ಎಂದು ಹೆಬ್ಬಾಳ್ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ತಾಲೂಕಿನ ಸಣಾಪುರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿಕ್ಕೇನಕೊಪ್ಪ ಚನ್ನವೀರಶರಣರ 31ನೇ ವರ್ಷದ ಪುಣ್ಯಸ್ಮರಣೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ, ಶರಣ, ಸಂತರ ಮತ್ತು ಮಹಾತ್ಮರ ಸಂದೇಶಗಳು ಮನುಷ್ಯನ ಬದುಕಿಗೆ ಬೆಳಕಾಗಿವೆ. ಪ್ರತಿಯೊಬ್ಬರೂ ದಾಂಪತ್ಯ ಧರ್ಮವನ್ನು ಅಳವಡಿಸಿಕೊಂಡರೆ ಜೀವನ ಉತ್ತಮವಾಗಿರುತ್ತದೆ. ತನ್ನ ಮನಸ್ಸು ಮತ್ತು ಹದಯ ಶ್ರೀಮಂತಿಕೆಯನ್ನು ಬೆಳೆಸಿಕೊಂಡು ಶರಣರು ತೋರಿದ ಸನ್ಮಾರ್ಗದಲ್ಲಿ ನಡೆದು ಪರೋಪಕಾರ ಧರ್ಮ ಸಹಿಷ್ಣುತೆ ಭಾತತ್ವ, ಮಾತ ಭಕ್ತಿ ಮೆಗೂಡಿಸಿಕೊಂಡು ಜೀವನದಲ್ಲಿ ಯಶಸ್ಸು ಕಾಣಬೇಕು. ಶರಣರ ತತ್ವಗಳನ್ನು ಪಾಲನೆ ಮಾಡುವ ಮೂಲಕ ಅವರ ಪುಣ್ಯಸ್ಮರಣೆಯನ್ನು ಪ್ರತಿಯೊಬ್ಬರೂ ಆಚರಿಸುತ್ತಿರುವುದು ಕಂಡು ಬರುತ್ತಿದೆ ಎಂದರು.
ನಂತರ ಉದ್ಭವ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷದಂತೆ ಕಳೆದ ಹಲವು ವರ್ಷಗಳಿಂದ ಚಿಕ್ಕೇನಕೊಪ್ಪ ಚನ್ನವೀರಶರಣರ ಪುಣ್ಯಸ್ಮರಣೆ ಆಚರಿಸಿಕೊಂಡು ಬರಲಾಲಾಗಿತ್ತಿದ್ದು, ಇದರ ಜೊತೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸಹ ಮಾಡಲಾಗಿದೆ. ಚಿಕ್ಕೇನಕೊಪ್ಪ ಶರಣರ ಹಾಗೂ ಇಲ್ಲಿನ ಉದ್ಭವ ವೀರಭದ್ರೇಶ್ವರ ದೇವರ ಪವಾಡದಿಂದ ಪ್ರತಿಯೊಬ್ಬರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದರು. ನವ ವಸಂತಕ್ಕೆ 6 ಜೋಡಿಗಳು ಕಾಲಿಟ್ಟರು.
ಶರಣರ ಪುಣ್ಯಸ್ಮರಣೆ ನಿಮಿತ್ಯ ಗ್ರಾಮದಲ್ಲಿ ಶರಣರ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ಸಕಲ ಮಂಗಳವಾಧ್ಯದೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ಮುಸ್ಟೂರು ಹಿರೇಮಠದ ಈಶ್ವರಯ್ಯ ತಾತ, ಮುಖಂಡರಾದ ಡಾ.ಜಂಬುನಾಥಗೌಡ, ಈಶಣ್ಣ, ಮರಿಶಾಂತ, ವೀರನಗೌಡ, ಮುಸ್ಟೂರು ಚನ್ನಪ್ಪ, ಕನಕಗಿರಿ ಬಸವರಾಜ, ಜಿ.ಕುಮಾರಸ್ವಾಮಿ, ಯು.ಅರುಣ್ ಕುಮಾರ, ಎ.ನಾಗರಾಜ, ವೈ.ಮಹಾಂತೇಶ, ಕೆ.ಬಸವರಾಜ, ಬಿ.ಪಂಪನಗೌಡ, ಕೆ.ಚನ್ನಪ್ಪ, ಭೀಮಣ್ಸ, ವೆಂಕಟರಾಮರಾಜು, ಕನಕಗಿರಿ ರೇಣುಕಾಗೌಡ, ಶರಣಗೌಡ ಸೇರಿದಂತೆ ಅನೇಕ ಭಕ್ತಾಧಿಗಳು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!