ಇಂದು 26-01-2026 ರ. ಬೆಳಿಗ್ಗೆ 8 ಗಂಟೆಗೆ ಹಾವೇರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 77 ನೆಯ ಗಣರಾಜೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಹಾವೇರಿ ಜಿಲ್ಲಾ ಅಧ್ಯಕ್ಷರು ಸಂಜೀವ ಕುಮಾರ ನೀರಲಗಿ ರವರು ಧ್ವಜಾರೋಹಣ ಮಾಡಿ ಸಂವಿಧಾನದ ಪೀಠಿಕೆ ಹಾಗೂ ಅದನ್ನು ನಾವು ಅರ್ಪಿಸಿಕೊಂಡಿರುವ ಬಗ್ಗೆ ಸವಿಸ್ತಾರವಾಗಿ ವಿವರಣೆಯನ್ನು ಹೇಳಿದರು. ಮಾಜಿ ಶಾಸಕರು ನೆಹರೂ ಓಲೇಕಾರ್, ಹಾವೇರಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಎಸ್ ಎಸ್ ಎನ್ ಗಾಜಿಗೌಡ್ರ ,ಪ್ರಧಾನ ಕಾರ್ಯದರ್ಶಿ ಶಂಕರ ಮೆಹರವಾಡೆ,ಬ್ಲಾಕ್ ಅಧ್ಯಕ್ಷರು ಎಂ ಎಂ ಮೈದುರ್, ನಾಮ ನಿರ್ದೇಶತ ಸದಸ್ಯರು, ಮಾಜಿ ಸದಸ್ಯರು ನಗರಸಭೆ,ಹಾವೇರಿ ನಗರ ಪ್ರಾಧಿಕಾರದ ಸದಸ್ಯರು, ಶಾಂತಕ್ಕ ಶಿರೂರ್ ಹಾಗೂ ಮಹಿಳಾ ಮುಖಂಡರು, ಪ್ರಸನ್ನ ಹಿರೇಮಠ್,ನವಿದ್ ವರ್ದಿ ಹಾಗೂ ಯುವ ಮುಖಂಡರು ಉಪಸ್ಥಿತರಿದ್ದರು.
ವರದಿ ಬಸವರಾಜ ಎಸ್. ಎನ್




















