ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗಣರಾಜ್ಯೋತ್ಸವ ದಿನಾಚರಣೆ

ಹಾವೇರಿ : ಸರ್ಕಾರಿ ಪ್ರೌಢಶಾಲೆ ಹೊಸೂರು ಇಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ 7:30ಕ್ಕೆ ಧ್ವಜ ವಂದನೆ,ಧ್ವಜಾರೋಹಣ ಕಾರ್ಯಕ್ರಮವನ್ನು sdmc ಅಧ್ಯಕ್ಷರಾದ ಪ್ರಶಾಂತ್ ಕ್ಯಾಲಕೊಂಡ ನೆರವೇರಿಸಿದರು. ತದ ನಂತರ ಊರಿನ ಪ್ರಮುಖ ಬೀದಿಗಳಲ್ಲಿ ರಾಷ್ಟ್ರ ಅಭಿಮಾನದ ಹಾಡುಗಳನ್ನು ಮತ್ತು ಘೋಷಣೆಗಳನ್ನು ಹೇಳುತ್ತಾ ಪಥ ಸಂಚಲನ ಕೈಗೊಳ್ಳಲಾಯಿತು. ಪ್ರೌಢಶಾಲೆಯಲ್ಲಿ ನವೀಕರಣಗೊಳಿಸಲಾದ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೇಶ್ವರಿ ಲಮಾಣಿ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಂಥ ಪಾಲಕರಾದ ಶ್ರೀ ನಡುವಿನಮನೆ ಸರ್ ಹಾಜರಿದ್ದರು. ತದ ನಂತರ ಸಭಾ ಕಾರ್ಯಕ್ರಮದಲ್ಲಿ ಶಾಲೆಯ ಪ್ರತಿಭಾವಂತ ಹಳೆಯ ವಿದ್ಯಾರ್ಥಿನಿ ಡಾ, ಕಮಲಾಕ್ಷಿ ಪಾಟೀಲ್, ಶಾಲೆಗೆ ವಸ್ತುಗಳನ್ನು ನೀಡಿದ ಶ್ರೀ ಪ್ರಕಾಶ್, ಡವಗಿ, ಶ್ರೀ ಲಕ್ಕನ್ನವರ್,ಶ್ರೀ ಬಡಿಗೇರ್, ಪಿಡಿಓ ಶ್ರೀರಾಜು ಸರ್, ಹಾಗೂ ಗ್ರಂಥ ಪಾಲಕರಾದ ಶ್ರೀ ನಡುವಿನಮನಿ ಸರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರೆಲ್ಲರೂ ಮಕ್ಕಳಿಗೆ ಅಭಿಪ್ರೇರಣೆ ನುಡಿಗಳನಾಡಿದರು. ಇದೇ ಸಂದರ್ಭದಲ್ಲಿ “ಶಾಲಾ ದರ್ಪಣ” ಕೈಪಿಡಿ ಬಿಡುಗಡೆಗೊಳಿಸಲಾಯಿತು.
2024 -25 ನೇ ಸಾಲಿನಲ್ಲಿ ಉತ್ತಮ ಅಂಕ ಪಡೆದ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ನಂದ ಪಾಟೀಲ್ ಮತ್ತು ನಾಗರತ್ನ ಇಂದೂರ ಈ ವಿದ್ಯಾರ್ಥಿನಿಯರಿಗೆ ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ನೀಡಿದ ವಿಶೇಷ ಬಹುಮಾನ ಮೊತ್ತ ತಲಾ 50,000 -00 ಪಡೆದಿದ್ದಕ್ಕಾಗಿ ಅಭಿನಂದಿಸಲಾಯಿತು.
ಗ್ರಾಮ ಪಂಚಾಯಿತಿನ ಸರ್ವ ಸದಸ್ಯರು” ಎಸ್. ಡಿ. ಎಮ್. ಸಿ. ಸರ್ವ ಸದಸ್ಯರು” ಊರಿನ ಗಣ್ಯರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಕ್ಕಳಿಂದ ದೇಶಭಕ್ತಿ ಬಿಂಬಿಸುವ ಲೆಜಿಮ್, ಡಂಬಲ್ಸ್,ಕೋಲಾಟ, ಸೀರೆ ನೃತ್ಯಗಳು ಅತ್ಯಂತ ಸುಂದರವಾಗಿ ಮೂಡಿ ಬಂದವು ಮಕ್ಕಳಿಂದ ಭಾಷಣ ದೇಶಭಕ್ತಿ ಗೀತೆಗಳು ಹಾಡಿಸಲಾಯಿತು. ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು. ಮುಖ್ಯ ಶಿಕ್ಷಕರು, ಎಲ್ಲ ಶಿಕ್ಷಕರು ಉತ್ತಮ ಕಾರ್ಯಕ್ರಮ ನಿರ್ವಹಿಸಿದರು. ಸರ್ವ ಸಿಬ್ಬಂದಿ, ಎಸ್ ಡಿ ಎಂ ಸಿ ಸರ್ವ ಸದಸ್ಯರು ಹಾಗೂ ಎಲ್ಲ ಮಕ್ಕಳಿಂದ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂದಿತು.

ವರದಿ ಬಸವರಾಜ ಎಸ್.ಎನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!