ಕಾಳಗಿ ಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ರೈತರ ಪೂರ್ವಭಾವಿ ಸಭೆ.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಸುತ್ತ ಮುತ್ತಲಿನ ಗ್ರಾಮದ ರೈತರಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದಿನಾಂಕ 27-01-2026ರಂದು ಕಾಳಗಿ ತಹಶೀಲ್ದಾರ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ರೈತ ಸಂಘ ಅಧ್ಯಕ್ಷರು ವೀರಣ್ಣ ಗಂಗಾಣಿ ತಿಳಿಸಿದರು.
1) ಗೊಡ್ಡು ರೋಗಕ್ಕೆ ಒಳಗಾದ ತೊಗರಿ ಬೆಳೆಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.
2) ಸುಮಾರು ತಾಲೂಕಿನ 1800 ರೈತರಿಗೆ ಬೆಳೆ ಪರಿಹಾರ ಜಮಾ ಆಗಿಲ್ಲ ಕೂಡಲೇ ಜಮಾ ಮಾಡಬೇಕು.
3)ಕಲಬುರಗಿ ಜಿಲ್ಲೆ ರೈತರು ತೊಗರಿ ಬೆಳೆಗಳಿಗೆ ವಿಮೆ ಮಾಡಿಸಿದ ಹಣವನ್ನು ಪ್ರತಿ ಶತ 100%ರಷ್ಟು ಮಂಜೂರು ಮಾಡಬೇಕು.
4)ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿಯಲ್ಲಿ ಉತ್ತಮವಾದ ಉಪಕರಣಗಳ್ಳನ್ನು ಒದಗಿಸಬೇಕು.
5)ರಾಷ್ಟ್ರೀಕೃತ ಬ್ಯಾಂಕ್ ಗಳು ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಬೇಕು.
6)ಸರ್ಕಾರದ ವತಿಯಿಂದ ರೈತರ ಖಾತೆಗೆ ಬಂದ ಎಲ್ಲಾ ಪರಿಹಾರ ಮತ್ತು ಬೇರೆ ಪರಿಹಾರ ಹಣ ಅವರ ಸಾಲದ ಖಾತೆಯಿಂದ ಕಡಿತಗೊಳಿಸಬಾರದು.
7)ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ ಕಾಲುವೆ ಮತ್ತು ರೈತರ ಹೊಲಗಳಲ್ಲಿ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ಮಾಡಿಸಬೇಕು.
8)ಪಿ. ಎಂ. ಕಿಸಾನ್ ಎಲ್ಲಾ ರೈತರಿಗೆ ಅನುಮೋದನೆ ನೀಡಬೇಕು ಒಳಗೊಂಡಂತೆ ಹಲವಾರು ಬೇಡಿಕೆಗಳನ್ನು ಒಳಗೊಂಡು ಹೋರಾಟ ಹಮ್ಮಿಕೊಂಡಿದ್ದು ಈ ಪೂರ್ವಭಾವಿ ಸಭೆಯಲ್ಲಿ ಸೋಮಶೇಖರಸವು ಹಲ್ಟರ, ಚಂದ್ರಶೆಟ್ಟಿ ಮಾನಶೆಟ್ಟಿ, ನಾಗರಾಜ ಪಾಟೀಲ್, ಭೀಮರಾವ ಮಲಗಾಣ, ಲೋಕೇಶ್ ಹುಡೇದ, ಮಲ್ಲಿಕಾರ್ಜುನ ಪಾಟೀಲ್, ಸಾಗರ ಹುಡುಗಿ, ಶಿವಾನಂದ ಅಲಬಾ, ರಮೇಶ ಸಿದ್ಧನಾಕ್, ಸುಂದರ ಡಿ ಸಾಗರ, ಕರಣ ರಾಜಪುರ, ಮೋಹನ ಕೊಡದೂರ, ಮಲ್ಲು ಹೂಗಾರ, ರೇವಣಸಿದ್ದ ಧರಿ, ರೇವಣಸಿದ್ದ ಚಿದರಿ, ಹನುಮಂತರಾವ್ ಪಾಟೀಲ್, ರೇವಣಸಿದ್ದ ತೆಗಲತಿಪ್ಪಿ, ಪ್ರಕಾಶ ಪೆಂಚನ್ನಲ್ಲಿ, ನಾಗರಾಜ್ ಕೇಶ್ವರ ಇನ್ನೂ ಅನೇಕರಿದ್ದರು.




















