ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಧಿಕ ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರತಳಿ ಕರು ಪ್ರದರ್ಶನ

ಹಾಲು ಕರೆಯುವ ಸ್ಪರ್ಧೆ ಅರ್ಥಪೂರ್ಣವಾಗಿದ್ದು ಹೆಚ್ಚು ಹಾಲು ಕೊಡುವ ಹಸುವಿಗೆ ಬಹುಮಾನ ನೀಡುವ ಮೂಲಕ ರೈತರಿಗೆ ಉತ್ತೇಜನ ನೀಡಬೇಕು : ಶಾಸಕ ಎಂ.ಆರ್.ಮಂಜುನಾಥ್

ಹನೂರು ಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಚಾ.ನಗರ ಮತ್ತು ಚಾ.ನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಅಧಿಕ ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರತಳಿ ಕರು ಪ್ರದರ್ಶನ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಉಧ್ಘಟನೆ ನೆರವೇರಿಸಿ ಮಾತನಾಡಿದರು.

ಜಿಲ್ಲಾ ಕೇಂದ್ರದಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮ ಮಾಡಿದ್ದು ರೈತರ ಆರ್ಥಿಕತೆ ಹೆಚ್ಚಿಸುವ ಉದ್ದೇಶದಿಂದ ಚರ್ಚೆ ನಡೆದಿದೆ. ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಿ ರೈತರಿಗೆ ಉತ್ತೇಜನೆ ನೀಡಬೇಕಾಗಿದೆ. ಮಳೆ ಇಲ್ಲದೆ ಕೃಷಿಯಲ್ಲಿ ಹಿನ್ನಡೆಯಾದ ರೈತರಿಗೆ ಹೈನುಗಾರಿಕೆ ಕೈ ಹಿಡಿದಿದೆ. ಜೊತೆಗೆ ಮೇಕೆ ಕುರಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಸಾಕಾಣಿಕೆ ಮಾಡಲು ಪ್ರೋತ್ಸಾಹ ನೀಡಬೇಕಾಗಿದೆ. ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಇಲ್ಲದ ಯುವಕರ ತಂದೆ ತಾಯಿಗೆ ಹೊರೆಯಾಗದೆ ಹೈನುಗಾರಿಕೆ ಮಾಡಿದರೆ ಜೀವನಕ್ಕೆ ಅನುಕೂಲ ಆಗುತ್ತದೆ ಎಂದರು.

ತೋಮಿಯರ್ ಪಾಳ್ಯ ಗ್ರಾಮದ ಪತ್ತಿನಾಥನ್ ಮುದಲೖಮುತ್ತು ಎಂಬುವವರು ಹಸು 33.65 ಲೀಟರ್ ಹಾಲು ನೀಡುವ ಮೂಲಕ ಪ್ರಥಮ ಬಹುಮಾನ ಪಡೆದರೆ ಎರಡನೇ ಬಹುಮಾನವನ್ನು ನಂಜೇ ಒಡೆಯರ್ ದೊಡ್ಡಿ ಗ್ರಾಮದ ಶಿವಮೂರ್ತಿ ಗುರುಮಲ್ಲಪ್ಪ ಎಂಬುವರು 32.58 ಲೀಟರ್ ಹಾಲು ನೀಡಿ ಮೂರನೇ ಬಹುಮಾನವನ್ನು ಕೆ. ಗುಂಡಪುರ ಗ್ರಾಮದ ಆನಂದ್ ಕುಮಾರ್ ಕೃಷ್ಣೇಗೌಡ ಎಂಬುವರು 29.98 ಲೀಟರ್ ಹಾಲು ಹಾಕಿ ಪಡೆದಿರುತ್ತಾರೆ. ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ರೖತರಿಗೂ ಸಮಾಧಾನಕರ ಬಹುಮಾನವಾಗಿ ಹಾಲಿನ ಕ್ಯಾನ್ ನೀಡಲಾಯಿತು.

ಈ ವೇಳೆ ಜಿಲ್ಲಾ ಚಾಮುಲ್ ಒಕ್ಕೂಟದ ಅಧ್ಯಕ್ಷ ನಂಜುಂಡಸ್ವಾಮಿ ನಿರ್ದೇಶಕ ಮಹದೇವ ಸ್ವಾಮಿ ಶಾಹುಲ್ ಅಹಮದ್ ಪಶು ಪಾಲನಾ ಜಿಲ್ಲಾ ಉಪ ನಿರ್ದೆಶಕ ಮಂಜುನಾಥ್ ಕೊಳ್ಳೇಗಾಲ ಡಾ.ಮುತ್ತುರಾಜು ಡಾ. ಮಾದೇಶ್ ಡಾ.ಶಿವಕುಮಾರ್ ಡಾ.ಸಿದ್ದರಾಜು ಡಾ.ಶಿವಣ್ಣ ವಿಸ್ತರಣ ಅಧಿಕಾರಿ ವೆಂಕಟೇಶ್ ಧೀಪು ಹನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರೇವಣ್ಣ ಕಾರ್ಯದರ್ಶಿ ರವೀಂದ್ರ ನಾಯ್ಡು ಪಶು ಸಖಿಯರು ಮುಖಂಡರಾಧ ರಾಜುಗೌಡ ಪ್ರಕಾಶ್ ನಾಯ್ಡು ಹರೀಶ್ ರಾಜೇಶ್ ನಾಯ್ಡು ಸಿಬ್ಬಂದಿಗಳು ಇದ್ದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!