ರಾಯಚೂರು/ಸಿಂಧನೂರು : ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರೇಟನೂರು ಗ್ರಾಮದಲ್ಲಿ ಶಾಲೆಯ ಎಸ್. ಡಿ. ಎಂ. ಸಿ. ಸಮಿತಿಯ ಸಮಕ್ಷಮದಲ್ಲಿ ಹಾಗೂ ಗ್ರಾ. ಪಂ.ಸದಸ್ಯರುಗಳ ಆಶಯದಂತೆ 77ನೇ ವರ್ಷದ ಗಣರಾಜ್ಯೋತ್ಸವವನ್ನು ಊರಿನ ಕಾರುಣ್ಯಾಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಇವರ ಅಮೃತ ಹಸ್ತದಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
ಈ ಸಮಯದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ.ಚನ್ನಬಸಯ್ಯಸ್ವಾಮಿ ಹಿರೇಮಠ ಮಾತನಾಡಿ ಈ ನಮ್ಮ ಶಾಲೆಯ ಮಕ್ಕಳು ಗಾಂಧೀಜಿ ಡಾ. ಬಿ.ಆರ್. ಅಂಬೇಡ್ಕರ್ ಸಂಗೊಳ್ಳಿ ರಾಯಣ್ಣ ಮತ್ತು ಇನ್ನಿತರ ಹಲವಾರು ಸ್ವಾತಂತ್ರ್ಯ ಹೋರಾಟಗಾರರುಗಳ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಹೆತ್ತವರು ಎದೆ ತಟ್ಟಿ ನನ್ನ ಮಕ್ಕಳು ಎನ್ನುವಾಗ ತಾವುಗಳು ಸಮಾಜಕ್ಕೆ ಸ್ಪೂರ್ತಿಯಾಗಬೇಕು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ನಮ್ಮ ಊರಿನ ಸೇವೆ ನಮ್ಮೆಲ್ಲರಿಗೆ ಹೆಮ್ಮೆಯಾಗಿರಬೇಕು. ನಮ್ಮ ಊರಿನ ಅನೇಕ ಅಧಿಕಾರಿಗಳು ಬೇರೆ ಬೇರೆ ಕಡೆ ಕಾರ್ಯ ನಿರ್ವಹಿಸಿದರು ಇಂತಹ ವಿನೂತನವಾದಂತ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುತ್ತಿರುವುದು ಸಂತೋಷದ ವಿಷಯ ತಾವೆಲ್ಲರೂ ತಂದೆ ತಾಯಿ ಗುರು ಗುರಿ ಕಾಯಕದ ಕಾರುಣ್ಯ ಮೂರ್ತಿಗಳಾಗಬೇಕು ಎನ್ನುವುದು ನನ್ನ ಆಸೆಯಾಗಿದೆ ಎಂದು ಮಾತನಾಡಿ ಹಲವಾರು ಸಂದೇಶಗಳ ಮೂಲಕ ದೇಶಾಭಿಮಾನದ ಚೈತನ್ಯವನ್ನು ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ರಾಮಣ್ಣ ಹುಲ್ಲೂರು ಗ್ರಾ.ಪಂ. ಸದಸ್ಯರು.ನಾಗರತ್ನ ಹಿರೇಮಠ ಎಸ್. ಡಿ. ಎಂ. ಸಿ. ಉಪಾಧ್ಯಕ್ಷರು ಹರೇಟನೂರು. ಹಾಗೂ ಶ್ರೀ ಮಠ ಸೇವಾ ಟ್ರಸ್ಟ್ (ರಿ.) ಹರೇಟನೂರು ಸದಸ್ಯರುಗಳಾದ ಶರಣಪ್ಪ ಕಟಾಲಿ. ಮಂಜುನಾಥಗೌಡ ಮಾಲಿ ಪಾಟೀಲ್. ಶಿಕ್ಷಣ ಪ್ರೇಮಿಗಳಾದ ದ್ಯಾವಣ್ಣ ಗೊಣ್ಣಿಗನೂರು ಸಾ. ಹರೇಟನೂರು. ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಕೋಟೆಪ್ಪ ಸಹ ಶಿಕ್ಷಕರಾದ ಶರಣಪ್ಪ ಅತಿಥಿ ಶಿಕ್ಷಕರಾದ ಸರಸ್ವತಿ ಹಳೆಯ ವಿದ್ಯಾರ್ಥಿಯಾದ ಬಸವಸ್ವಾಮಿ. ಸಹಾಯಕರಾದ ಮಾರೆಮ್ಮ ದೇವರಮನಿ. ಮತ್ತು ಅಡುಗೆ ಸಿಬ್ಬಂದಿಗಳು ಹಾಗೂ ಊರಿನ ಗುರಿ ಹಿರಿಯರು ಶಾಲಾ ಮಕ್ಕಳು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















