ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ 2026 ನೇ ಸಾಲಿನ 77ನೇ ಗಣರಾಜ್ಯೋತ್ಸವದ ಅಂಗವಾಗಿ ಬಾಗಲಕೋಟೆ ಜಿಲ್ಲಾ ಆಡಳಿತದ ವತಿಯಿಂದ, ಜರುಗಿದ ಕಾರ್ಯಕ್ರಮದಲ್ಲಿ ಹುನಗುಂದ ನಗರದ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ವಿನೋದ ಸಂದಿಮನಿ ಇವರನ್ನು ಉತ್ತಮ ಆಟಗಾರ ಎಂದು ಪರಿಗಣಿಸಿ ಕ್ರೀಡಾ ವಿಭಾಗದಲ್ಲಿ ಗಣರಾಜ್ಯೋತ್ಸವದ ಜಿಲ್ಲಾ ಪ್ರಶಸ್ತಿಯನ್ನು ನೀಡಿ ಗೌರವಿಸಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಸತ್ಕರಿಸಿದರು.
ಲೋಕಸಭಾ ಸದಸ್ಯರು ಪಿ ಸಿ ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ,ವಿಧಾನ ಪರಿಷತ ಸದಸ್ಯ ಪಿಎಚ್ ಪೂಜಾರ ಹಾಗೂ ಎಂಎಲ್ಸಿಗಳು ಮತ್ತು ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಹಲವಾರು ಪ್ರಮುಖ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- ಕರುನಾಡ ಕಂದ ಪತ್ರಿಕೆ




















