ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಡಗರ ಸಂಭ್ರಮದಿಂದ ಕುಡಹಳ್ಳಿ ಸರ್ಕಾರಿ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕುಡಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ಮಹತ್ವ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು.
ರಾಷ್ಟ್ರಿಯ ಹಬ್ಬಗಳ ಮಹತ್ವ, ಶಿಕ್ಷಕರ ಬೋಧನೆ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಕುರಿತು ಬಸವರಾಜ ಪಾಟೀಲ ಮುಕರಂಬಿ ಅವರು ಮಾತನಾಡಿ, ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಆಡಳಿತ ನಡೆಸಬೇಕಾದರೆ ಸಂವಿಧಾನವು ಮುಖ್ಯವಾಗಿರುತ್ತದೆ. ಸಂವಿಧಾನವನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಬರೆದಿದ್ದಾರೆ. ಇಂದು ನಮ್ಮ ದೇಶ ಅತ್ಯಂತ ಮಹತ್ವ ದಿನವಾಗಿದೆ. ಈ ದಿನದಂದು ಭಾರತವು ಗಣರಾಜ್ಯ ರಾಷ್ಟ್ರವಾಯಿತು. ನಮ್ಮ ದೇಶಕ್ಕೆ ಸಂವಿಧಾನವು 26 ಜನೆವರಿ 1950 ರಂದು ಜಾರಿಗೆ ಬಂದ ದಿನ ಇದಾಗಿದೆ. ಸಂವಿಧಾನವು ನಮಗೆ ಹಕ್ಕುಗಳ ಜೊತೆಗೆ ಕರ್ತವಗಳನ್ನು ಕಲಿಸುತ್ತದೆ . ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶ್ರೀಮಂತ ಕೆ ಗಂಜಿ ಮುಖ್ಯ ಗುರುಗಳು ಸರ್ಕಾರಿ ಹಿ. ಪ್ರಾ. ಶಾಲೆ ಕುಡ್ದಳ್ಳಿ ಮಾತನಾಡಿದರು.
ಮಕ್ಕಳ ಕಲಿಕೆ ಕಂಡು ಸಂತಸವನ್ನು ವ್ಯಕ್ತಪಡಿಸಿದರು. ಪ್ರತಿ ಮಗು ವೇದಿಕೆ ಬಂದು ಗಣರಾಜ್ಯೋತ್ಸವ ಕುರಿತು ಭಾಷಣವನ್ನು ಕೇಳಿ ಆನಂದಿಸಿದರು. ಮಕ್ಕಳಲ್ಲಿರುವ ಪ್ರತಿಭೆ ಹಾಗೂ ಧೈರ್ಯವನ್ನು ಕಂಡು ಮುಂದಿನ ದಿನಮಾನಗಳಲ್ಲಿ ಉನ್ನತ ಹುದ್ದೆಯ ಅಧಿಕಾರಿ ಅಗಲಿದ್ದಾರೆ.ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರ ಮುಖ್ಯವಾಗಿರುತ್ತದೆ ಮತ್ತು ಸಹಕಾರ ನೀಡಬೇಕೆಂದು ಹೇಳಿದರು. ಮಕ್ಕಳ ಪ್ರತಿಭೆಯನ್ನು ಕಂಡು ಈ ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿ ಈ ಸಂದರ್ಭದಲ್ಲಿ ಬಸವರಾಜ್ ಪಾಟೀಲ್ ಮುಕರಂಬಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮಂತ್ ಕೆ ಗಂಜಿ ಮುಖ್ಯ ಗುರುಗಳು ಸ. ಹಿ. ಪ್ರಾ. ಶಾ. ಕುಡ್ಹಳ್ಳಿ, ಶಂಕರ್ ಕಣ್ಣಿ ಸಹ ಶಿಕ್ಷಕರು, ಪ್ರಭಾಕರ್ , ರಮೇಶ್ ದೇವಾನಕರ್ ಎಸ್ ಡಿ ಎಂ ಸಿ ಅಧ್ಯಕ್ಷರು, ಪಲ್ಲವಿ ಅತಿಥಿ ಶಿಕ್ಷಕರು, ಬಸವರಾಜ್ ಪಾಟೀಲ್ ಮುಕರಂಬಿ, ಅಣ್ಣಾರವ್ ಶಿವುದೇ, ಅಶೋಕ ಗುತ್ತೇದಾರ, ಸಿದ್ದು ಹೂಗಾರ, ಹಣಮಂತ ನಿಡಗುಂದಿ,ಪಿತಾಮರಾವ್ ಶಿವುದೇ, ಬಸವರಾಜ ಭಕ್ತಂಪಳ್ಳಿ, ಧೂಳಪ್ಪ ನಾಟಿಕಾರ್, ಮಲ್ಲಪ್ಪ ಪೂಜಾರಿ, ಎಸ್‌ಡಿಎಂಸಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಮತ್ತು ಪಾಲಕರು ಉಪಸ್ಥಿತರಿದ್ದರು.

ವರದಿ ಚಂದ್ರಶೇಖರ್ ಆರ್. ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!