ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

1750 ಅಡಿಗಳ ಉದ್ದದ ಬೃಹತ್ ತಿರಂಗಾ ಯಾತ್ರೆ, ಹೆಲ್ಪ್ ಸೊಸೈಟಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಯುವ ಶಾಸಕ ಎಚ್ ವಿ ವೆಂಕಟೇಶ್

ತುಮಕೂರು/ ಪಾವಗಡ : 77ನೇ ಗಣರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಹೆಲ್ಪ್ ಸೊಸೈಟಿ , ಸೇವಾ ಟ್ರಸ್ಟ್ ಮತ್ತು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಶ್ರೀಶಾಲಾ ಕಾನ್ವೆಂಟ್, ಅಕ್ಷಯ ಬ್ಲೂಜಂ ಶಾಲೆ ಸಹಯೋಗದಲ್ಲಿ 1,750 ಅಡಿಗಳ ಉದ್ದದ ತಿರಂಗಾ ಯಾತ್ರೆ ಅತ್ಯಂತ ವೈಭವದಿಂದ ನೆರವೇರಿತು,.
ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನ ಮುಂಭಾಗದಲ್ಲಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಡಾ. ಶಶಿಕಿರಣ್ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ದೇಶಪ್ರೇಮ ಮೂಡಿಸಿಕೊಳ್ಳಬೇಕು, ನಮ್ಮ ದೇಶವನ್ನು ಕಾವಲು ಕಾಯುವ ಸೈನಿಕರ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು, ಚಿತ್ರ ನಟರ ಫೋಟೋಗಳನ್ನು ಸ್ಟೇಟಸ್ ನಲ್ಲಿ ಹಾಕಿಕೊಳ್ಳದೆ ದೇಶಕ್ಕಾಗಿ ಹೋರಾಡಿದ ವೀರ ನಾಯಕರ ಫೋಟೋಗಳನ್ನು ಸ್ಟೇಟಸ್ ನಲ್ಲಿ ಹಾಕಿಕೊಂಡು ದೇಶ ಪ್ರೇಮವನ್ನು ಮೆರೆಯಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಂತರ ತಿರಂಗ ಯಾತ್ರೆ ಶಿರಾ ರಸ್ತೆ, ಬಳ್ಳಾರಿ ರಸ್ತೆ, ಶನಿಮಹಾತ್ಮ ಸರ್ಕಲ್ ಮುಖಾಂತರ ಪಟ್ಟಣದ ತಾಲೂಕು ಕ್ರೀಡಾಂಗಣಕ್ಕೆ ತಿರಂಗಾ ಯಾತ್ರೆ ಆಗಮಿಸಿದಾಗ, ಶಾಸಕರಾದ ಎಚ್. ವಿ. ವೆಂಕಟೇಶ್ ಮತ್ತು ತಹಶೀಲ್ದಾರ್ ವೈ. ರವಿ, ಇ.ಓ. ಮಧುಸೂದನ್ ಮತ್ತು ಬಿ.ಇ.ಓ. ರೇಣುಕಮ್ಮ ಮತ್ತಿತರ ಅಧಿಕಾರಿಗಳು ಬರಮಾಡಿಕೊಂಡು, ಸುಮಾರು 2 ಕಿ.ಮೀ. ಉದ್ದದವರೆಗೂ ಸಾಗಿದ ತಿರಂಗ ಯಾತ್ರೆಯನ್ನು ಮುಕ್ತಾಯಗೊಳಿಸಿದರು.
ಈ ವೇಳೆ ಮಾತನಾಡಿದ ಶಾಸಕ ಎಚ್ .ವಿ. ವೆಂಕಟೇಶ್, ಇಷ್ಟೊಂದು ಬೃಹತ್ ಪ್ರಮಾಣದ ತಿರಂಗಾ ಯಾತ್ರೆಯನ್ನು ಕೈಗೊಂಡು ಸಾರ್ವಜನಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸುತ್ತಿರುವ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ಮತ್ತು ತಿರಂಗಾ ಯಾತ್ರೆಯ ರೂವಾರಿಗಳಾದ ಲಕ್ಷ್ಮೀನಾರಾಯಣ ಗುಪ್ತ ಅವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು,
ಮತ್ತು ತಾಲೂಕು ಆಡಳಿತದ ವತಿಯಿಂದ ಲಕ್ಷ್ಮೀನಾರಾಯಣ ಗುಪ್ತ ಮತ್ತು ಮಾನಂ ಶಶಿಕಿರಣ್ ಅವರಿಗೆ ವೇದಿಕೆಯಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ವೇಳೆ ಮಾನಂ ಶಶಿಕಿರಣ್ ಸಂಧ್ಯಾ ಶಶಿಕಿರಣ್, ಶಿಕ್ಷಕಿ ಭವ್ಯ ,ಶಮಿ ವೃಕ್ಷ ಅಭಿವೃದ್ಧಿ ಸಮಿತಿಯ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸತ್ಯ ಲೋಕೇಶ್, ಪ್ರಾಂಶುಪಾಲರಾದ ನಾಗೇಂದ್ರ, ನಾಗರಾಜು, ಚಂದ್ರಶೇಖರ್ , ಉಪನ್ಯಾಸಕರಾದ ಮಲ್ಲಿಕಾರ್ಜುನ, ಶಿವಕುಮಾರ್, ಪಾಂಡುರಂಗ, ಜಗದೀಶ್, ರಾಜಗೋಪಾಲ್, ರವಿಕಾಂತ್, ಮುಖಂಡರಾದ ರೈತ ಮುಖಂಡ ಜಿ.ನರಸಿಂಹ ರೆಡ್ಡಿ, ಚೌದರಿ, ನರಸಿಂಹ ಮೂರ್ತಿ, ಪಾವಗಡ ಪೊಲೀಸ್ ಠಾಣಾ ಸಿಪಿಐ ಸುರೇಶ್, ಗ್ರಾಮಾಂತರ ಸಿ.ಪಿ.ಐ. ಗಿರೀಶ್, ವೀರಮ್ಮನಹಳ್ಳಿ ಲೋಕೇಶ್, ನರೇಶ್, ಮೆಡಿಕಲ್ ದೇವರಾಜ್, ನಲ್ಲಾನಿಸುರೇಂದ್ರ, ಬಿಜೆಪಿಯ ಯುವ ಅಧ್ಯಕ್ಷರಾದ ಅಶೋಕ್, ರವಿ, ನಾಯುಡು, ಬ್ರೈಟ್ ಫ್ಯೂಚರ್ ಕಂಪ್ಯೂಟರ್ ಸಿಇಒ ಶ್ರೀಧರ್ ಗುಪ್ತ, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್, ಗೋವಿಂದ, ರಘುಪತಿ ನಾಯ್ಡು, ಮಂಜುನಾಥ ಮತ್ತಿತರರು ಇದ್ದರು.

ವರದಿ ಪೃಥ್ವಿರಾಜು ಜಿ.ವಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!