ಕೇಳೋ ಕೇಶವ ಕೇಳೋ ಮಾಧವ
ನನ್ನಂತರಂಗದ ರಾಗವ
ನೀನೆ ನುಡಿಸಿದ ಒಲವ ಮಧುರ
ಎದೆಗೊಳಲಿನ ನಾದವ
ಎಲ್ಲೇ ಹೋಗಲಿ ಎಲ್ಲೇ ಕೂರಲಿ
ನಿನ್ನ ಬಿಂಬವೆ ಕಂಡಿದೆ
ಕ್ಷಣದಿ ಸೆಳೆವ ನಿನ್ನ ಕಂಗಳು
ಯಾವ ಮೋಡಿಯ ಮಾಡಿದೆ
ನಿನ್ನ ಮಾಂತ್ರಿಕ ಬೆರಳ ಸ್ಪರ್ಶದಿ
ಯಾವ ಮಾಯೆ ಅಡಗಿದೆ
ಮುಕುಟವೇರಿ ನಲಿವ ಗರಿಯು
ಎನಿತು ಪುಣ್ಯವ ಮಾಡಿದೆ
ನಿನ್ನ ಹೆಸರಿಗೆ ಉಸಿರ ಬೆರೆಸಿ
ನಲಿವೆ ನಾನು ಪ್ರತಿಕ್ಷಣ
ನಾನೆ ಕೊಳಲು ನೀನೆ ಬೆರಳು
ಅಕ್ಷಯವೀ ಪ್ರೀತಿಯುಗ್ರಾಣ
✍️ ಮಧುಮಾಲತಿರುದ್ರೇಶ್, ಬೇಲೂರು




















