ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಸವತತ್ವ ಪಾಲನೆಯಿಂದ ಸುಂದರ ಸಮಾಜ: ಡಾ. ಬಸವಲಿಂಗ ಪಟ್ಟದ್ದೇವರು.

ಚಿಟಗುಪ್ಪಾ : ಬಸವಣ್ಣನವರ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಕಾಯಕ, ದಾಸೋಹ, ಸಹೋದರತ್ವ, ಸಹಬಾಳ್ವೆ ಪಾಲನೆಯಿಂದ ಸುಂದರ ಸಮಾಜದ ನಿರ್ಮಾಣ ಸಾಧ್ಯ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ, ಅನುಭವ ಮಂಟಪ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು
ಅಭಿಪ್ರಾಯಪಟ್ಟರು.

ತಾಲೂಕಿನ ಕಂದಗೂಳ ಗ್ರಾಮದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ (ರಿ.) ಭಾಲ್ಕಿ ಅಡಿಯಲ್ಲಿ ನಡೆಯುತ್ತಿರುವ ಡಾ.ಚನ್ನಬಸವ ಪಟ್ಟದ್ದೇವರು ಪ್ರೌಢಶಾಲೆಯಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಹಾಗೂ ಶಾಲೆಯ ವಾರ್ಷಿಕೋತ್ಸವ ಮತ್ತು 10ನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಪೂಜ್ಯರು, ಶಿಕ್ಷಣವು ಕೇವಲ ಅಂಕಗಳಿಕೆಯಲ್ಲ, ಅದು ವ್ಯಕ್ತಿತ್ವ ವಿಕಸನ, ಜ್ಞಾನಾರ್ಜನೆ ಮತ್ತು ಸಮಾಜದ ಉನ್ನತಿಗೆ ಅಡಿಪಾಯ. ನೆಲ್ಸನ್ ಮಂಡೇಲಾ ಅವರ ಪ್ರಕಾರ ಶಿಕ್ಷಣವು ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತವಾಗಿದೆ. ಇದು ಜೀವನದ ಕಹಿ ಬೇರುಗಳನ್ನು ಸಿಹಿಯಾದ ಹಣ್ಣುಗಳಾಗಿ (ಜ್ಞಾನ) ಪರಿವರ್ತಿಸುವ ಪ್ರಕ್ರಿಯೆಯಾಗಿದ್ದು, ಮನುಷ್ಯನ ಆಲೋಚನಾ ಶಕ್ತಿಯನ್ನು ವಿಸ್ತರಿಸುತ್ತದೆ. ಅಂತಹ ಅಧ್ಯಯನದ ಜೊತೆಗೆ ಮಕ್ಕಳು ಸಂಸ್ಕಾರಯುತ ಶಿಕ್ಷಣ ಪಡೆಯುವುದು ತುಂಬಾ ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು ಶಾಲಾ ಆವರಣದಲ್ಲಿ ಶರಣ ಪ್ರಕಾಶ ಕುದರೆಯವರ ಅಂಗಹಸ್ತದಿಂದ ಅನಾವರಣ ಮಾಡಿದ್ದು ನಮಗೆ ಅತ್ಯಂತ ಸಂತೋಷ ತಂದಿದೆ. ಶತ, ಶತಮಾನಗಳಿಂದ ಜ್ಞಾನದ ಬೆಳಕು ಚಲ್ಲಿದ ಕಾಯಕಯೋಗಿ ಬಸವಣ್ಣನವರ, ಕಾಯಕದ ಮಹತ್ವವನ್ನು ವಿಶ್ವಕ್ಕೆ ಸಾರಿದವರು. ಸಮಾಜಕ್ಕೆ ನಿರಂತರ ಸ್ಪೂರ್ತಿಯಾಗಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯ, ಸಮ ಸಮಾಜದ ನಿರ್ಮಾಣ ಮಾಡಿದವರು. ಯುವ ಪೀಳಿಗೆಗೆ ಬಸವಣ್ಣನವರ ಸಿದ್ದಾಂತಗಳು ದಾರಿದೀಪವಾಗಲಿ ಎಂದು ಆಶೀರ್ವಚನ ನೀಡಿದರು.

ಸಮ್ಮುಖ ವಹಿಸಿದ ಪೂಜ್ಯ ಗುರುಬಸವ ಪಟ್ಟದ್ದೇವರು, ಅಸಮಾನತೆ, ಕಂದಾಚಾರ, ಅಸ್ಪೃಶ್ಯತೆ, ಮೌಢ್ಯತೆ ಇದ್ದ 850 ವರ್ಷಗಳ ಹಿಂದೆ ಬಸವಣ್ಣ ನವರು ಶ್ರೇಣಿರಹಿತ ಸಮ ಸಮಾಜದ ಕನಸು ಕಂಡಿದ್ದರು. ಮಹಿಳೆಯರಿಗೂ ಸಮಾನ ಸ್ಥಾನಮಾನ ನೀಡಬೇಕೆಂದು ಪ್ರತಿಪಾದಿಸಿದ್ದರು. ಸಮ ಸಮಾಜದ ಅವರ ಕನಸನ್ನು ನನಸಾಗಿಸಬೇಕು.
ಅಜ್ಞಾನ ಮತ್ತು ಬಡತನದ ವಿರುದ್ಧ ಹೋರಾಡಲು ಶಿಕ್ಷಣವೇ ಪ್ರಮುಖ ಅಸ್ತ್ರ. ಅದನ್ನರಿತು ಪೂಜ್ಯರು ಜಿಲ್ಲೆಯ ಅನೇಕ ಗ್ರಾಮೀಣ ಭಾಗಗಳಲ್ಲಿ ಶಾಲೆಗಳು ಆರಂಭಿಸಿ, ಗುಣಾತ್ಮಕ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದು ಅವರ ಶಿಕ್ಷಣ ಪ್ರೀತಿಗೆ ಸಾಕ್ಷಿಯಾಗಿದೆ. ಪೂಜ್ಯರು ಸ್ಥಾಪಿಸಿದ ಸಂಸ್ಥೆ ಅಡಿಯಲ್ಲಿ ಇಂದು ಸುಮಾರು 20000 ಸಾವಿರ ಮಕ್ಕಳು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಮಾತನಾಡಿ, ‘ಬಸವಣ್ಣ ಅವರನ್ನು ಒಂದೇ ಸಮಾಜಕ್ಕೆ ಸೀಮಿತ ಮಾಡಬಾರದು. ಸರ್ವ ಸಮುದಾಯದ ನಾಯಕ. ಜ್ಞಾನಿಗಳು, ವಿಜ್ಞಾನಿಗಳು, ಚಿಂತಕರು, ಸಾಹಿತಿಗಳು ಪುಟಗಟ್ಟಲೆ ಹೇಳುವುದನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ನಾಲ್ಕೈದು ಸಾಲಿನಲ್ಲಿ ತಿಳಿಸಿದ ಮಹಾನ್ ಚೇತನರು ಬಸವಣ್ಣನವರು. ಅವರ ಆಶಯದಂತೆ ನಾವೆಲ್ಲರೂ ಸಾಗಬೇಕು. ಶಿಕ್ಷಣ ಪಡೆಯುವುದರ ಜೊತೆಗೆ ಮಕ್ಕಳು ಗುರು-ಹಿರಿಯರನ್ನು ಗೌರಸಬೇಕು ಎಂದು ನುಡಿದರು.

ಸಮಾರಂಭವನ್ನು ಉದ್ಘಾಟನೆ ಮಾಡುವುದರ ಜೊತೆಗೆ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಮಾಡಿರುವ ಬಸವಕಲ್ಯಾಣದ ಸಹಾಯಕ ಆಯುಕ್ತರಾದ ಶರಣ ಪ್ರಕಾಶ ಕುದುರೆಯವರು, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಗ್ರಾಮೀಣ ಭಾಗದಲ್ಲಿ ಅನೇಕ ಕಡೆ ಶಾಲೆಗಳನ್ನು ಪ್ರಾರಂಭಿಸಿ ಬಡ ಹಾಗೂ ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗಗಳಲ್ಲಿ ಪೂಜ್ಯರು ಹಗಲಿರುಳು ದುಡಿಯುತ್ತಿದ್ದಾರೆ. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಧಾರ್ಮಿಕ ಸಂಸ್ಕಾರ ಕಲಿಯಬೇಕೆಂಬ ಸದುದ್ದೇಶದಿಂದ ಪೂಜ್ಯರು ಶಾಲಾ ಆವರಣದಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪಿಸಿದ್ದು. ಅದರ ಅನಾವರಣಕ್ಕೆ ನನ್ನ ಆಹ್ವಾನಿಸಿದ್ದು, ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಬಸವಣ್ಣನವರ ಮೂರ್ತಿ ಸ್ಥಾಪನೆ ಆಗಿರುವುದು ಅರ್ಥಪೂರ್ಣವಾಗಿದೆ. ಬಸವಣ್ಣನವರ ಆದರ್ಶಗಳನ್ನು ಸರ್ವರೂ ಅಳವಡಿಸಿಕೊಳ್ಳಬೇಕು ಎಂದರು.

ವೇದಿಕೆ ಮೇಲೆ ಪೂಜ್ಯ ಶ್ರೀ ಮೈತ್ರಾದೇವಿತಾಯಿ, ಪೂಜ್ಯ ಶ್ರೀ ಡಾ.ಮಹಾದೇವಮ್ಮತಾಯಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ, ಸಾಹಿತಿ ಸಂಗಮೇಶ ಎನ್ ಜವಾದಿ ಉಪಸ್ಥಿತರಿದ್ದರು.ಅಧ್ಯಕ್ಷತೆ ಸ್ಥಾನಿಕ ಕಮೀಟಿ ಅಧ್ಯಕ್ಷರಾದ ಮಾಣಿಕರಾವ ಹೌಶೆಟ್ಟಿ ವಹಿಸಿಕೊಂಡಿದ್ದರು.

ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ವಿರೇಶಪ್ಪ ಎಂ.. ಮೋಹನರಡ್ಡಿ, ಅಮೃತಪ್ಪ ದೇವಣಿ, ಗೌರಮ್ಮ ಪೋಲಿಸ್ ಪಾಟೀಲ, ಶಿವಶರಣಪ್ಪ ಪಾಟೀಲ, ಶಂಭುಲಿಂಗ ಪೊಲೀಸ್ ಪಾಟೀಲ, ಪಾಂಡುರಂಗ ಹಿರೇಬೈ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಬಂಡೆಪ್ಪ ಮೂಲಗೆ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ರೇಖಾ ಪಿ.ಎಂ. ಮಾತನಾಡಿ ಶಾಲೆಯ ಕುರಿತು ವರದಿ ವಾಚನ ಮಾಡಿದರು. ದಿಲೀಪಕುಮಾರ ಚವ್ಹಾಣ ನಿರೂಪಸಿದರು. ಮಹಾದೇವ ಎ.ಶಟಗಾರ ಶರಣು ಸಮರ್ಪಣೆ ಮಾಡಿದರು. ಪ್ರತಿಭಾವಂತ ವಿದ್ಯಾರ್ಥಿಯಾದ ಕು.ನಾಗರಾಜ ಕಲ್ಲಪ 10ನೇ ತರಗತಿ ವಿದ್ಯಾರ್ಥಿಗೆ ಗೌರವಿಸಲಾಯಿತು. ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ಹಾಗೂ ಉಭಯ ಪೂಜ್ಯರ ಕುರಿತು ಕು.ಪೂರ್ಣಿಮಾ ಗಿರೀಶ, ಕು.ತನುಶ್ರೀ ರಾಜರೆಡ್ಡಿ, ಕು.ಕೀರ್ತನಾ ಚಂದ್ರಶೇಖರ ಅವರು ಭಾಷಣ ಮಾಡಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ಜರುಗಿದವು. ಶಾಲಾ ಸಿಬ್ಬಂದಿಯವರು ಹಾಗೂ ಪಾಲಕರು ಹಾಜರಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!