ಲ್
ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇನ್ನ ಶಿಟೋರಿಯೋ ಕರಾಟೆ ಸಂಸ್ಥೆಯ ಸೆನ್ಸಸೈ ರಾಹುಲ್ ಪಂಚಬಾಯ ತಂಡದ ವಿದ್ಯಾರ್ಥಿಗಳು 18 ಪದಕಗಳನ್ನು ಗೆಲ್ಲುವುದರ ಜೊತೆಗೆ ಅಮೋಘವಾದ ಸಾಧನೆಯನ್ನು ಮಾಡಿದ್ದಾರೆ.
ದಿನಾಂಕ 21 ಹಾಗೂ 22 ಎರಡು ದಿನದ ಕರಾಟೆ ಪಂದ್ಯಾವಳಿಯಲ್ಲಿ ಕಲ್ಬುರ್ಗಿ ನಗರದ ಚಂದ್ರಶೇಖರ್ ಪಾಟೀಲ್ ಸ್ಟೇಡಿಯಂ ನಲ್ಲಿ ಕಲ್ಯಾಣ ಕರ್ನಾಟಕದ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಶಿಹಾನ ದಶರಥ ದುಮ್ಮನಸೂರ್ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದ ಕರಾಟೆ ಕ್ರೀಡಾಕೂಟ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು ಈ ಕರಾಟೆ ಕ್ರೀಡಾಕೂಟದಲ್ಲಿ ಜೇವರ್ಗಿ ತಾಲೂಕಿನ ನನಸೈ ರಾಹುಲ್ ಪಂಚಬಾಯ ತಂಡದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಒಟ್ಟು 10 ಬಂಗಾರದ ಪದಕ 4 ಬೆಳ್ಳಿ 4 ಕಂಚಿನ ಪದಕ ಸೇರಿ ಒಟ್ಟು 18 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ರಾಹುಲ್ ಪಂಚಬಾಯ ಅವರ ಸತತ ಪರಿಶ್ರಮ ಹಾಗೂ ಜೇವರ್ಗಿ ತಾಲೂಕ ಕರಾಟೆ ಸಂಸ್ಥೆಯ ಉಪಾಧ್ಯಕ್ಷರಾದ ಅಮರನಾಥ ಮಧುಕರ್ ಅವರ ಹಠಮಾರಿತನ ವಿದ್ಯಾರ್ಥಿಗಳಿಗೆ ನೈತಿಕ ಶಿಸ್ತನ್ನು ಕಲಿಸುವುದರ ಜೊತೆಗೆ ಉನ್ನತ ಮಟ್ಟದ ಸಾಧನೆಗೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಜೇವರ್ಗಿ ತಾಲೂಕಿನ ಖ್ಯಾತ ನ್ಯಾಯವಾದಿಗಳಾದ ರಾಮನಾಥ ಭಂಡಾರಿ ಅವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷವನ್ನು ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ ಇನ್ನು ಮುಂದೆ ಬರುವಂತಹ ದಿನಗಳಲ್ಲಿ ಜೇವರ್ಗಿ ತಾಲೂಕಿನ ವಿದ್ಯಾರ್ಥಿಗಳು ರಾಜ್ಯಮಟ್ಟದ್ದಲ್ಲಿ ರಾಷ್ಟ್ರ ಮಟ್ಟದ್ಧಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕೆಂದು ಶುಭ ಹಾರೈಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















