ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೋಳಿ ಹುಣ್ಣಿಮೆ

ಈ ಹಬ್ಬವು ಹಳೆಯ ವೈಶಮ್ಯವನು ಮರೆತು
ಹೊಸ ಸಂಬಂಧ ಬೆಸೆಯುವ ಸುಗ್ಗಿಯ ಹಬ್ಬ.
ಉತ್ತರ ಕರ್ನಾಟಕದಲಿ ಇದನು ಮನ್ಮಥನ ರೂಪವನು ಮಾಡಿ ಸುಡುವ ಪದ್ಧತಿ ಅನ್ನುವರು ಕಾಮನ ಹಬ್ಬ,
ಹುಣ್ಣಿಮೆಯ ಹಿಂದಿನ ರಾತ್ರಿ ಒಣಗಿದ ಕಟ್ಟಿಗೆಗಳನ್ನು
ಒಟ್ಟಿಗೆ ಹಾಕಿ ಬೆಂತಿ ಹೊತ್ತಿಸಿ ಸಂಭ್ರಮಿಸುವ ಹಬ್ಬ,
ಮರುದಿನ ಎಲ್ಲರೂ ಪರಸ್ಪರ ಬಣ್ಣ ಗುಲಾಲುಗಳನ್ನು
ಎರಚುತ್ತಾ ಏಕತೆಯನು ಹಂಚುವ ಹಬ್ಬ
ಶಿವನು ಕಾಮದೇವನನ್ನು ತನ್ನ ಮೂರನೇ
ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದ ನೆನಪಿನ ಹಬ್ಬ,
ಕೆಟ್ಟದ್ದನ್ನು ಬೆಂಕಿಯಲ್ಲಿ ಸುಟ್ಟು ಭಗವಂತನ
ಭಕ್ತಿಗೆ ಜಯ ಸಿಗುವ ಸಾರುವ ಹಬ್ಬ,
ಜಾತಿ ಮತ, ಬಡವ ಬಲ್ಲಿದ ಬೇಧ ವಿಲ್ಲದೆ ಎಲ್ಲರೂ
ಒಂದಾಗಿ ಬಣ್ಣಗಳೊಂದಿಗೆ ಸಂಭ್ರಮಿಸುವ ಹಬ್ಬ.
ಕೃಷ್ಣ ಮತ್ತು ರಾಧೆಯ ದಿವ್ಯ ಪ್ರೇಮ ಪ್ರಸಂಗದ
ಸಂಕೇತವಾಗಿಯೂ ಬಣ್ಣದ ಓಕಳಿಯನ್ನು ಆಡಿ ಕುಣಿವ ಹಬ್ಬ.
ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು, ಕಾಮನ ಹಬ್ಬ
ಬಂದರೆ ನಿದ್ದೆ ಮಾಡದ ಕುಣಿದು ಕುಪ್ಪಳಿಸಿ
ಜಗತ್ತನ್ನೇ ಮರೆಸುವ ದೊಡ್ಡ ಈ ಹೋಳಿ ಹಬ್ಬ.

  • ರವಿ ಎಸ್ ಹಿರೇಮನಿ, ಕುಕನೂರು ಕೊಪ್ಪಳ ಜಿಲ್ಲೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!