ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹಾಶಕ್ತಿ ಮಾರಮ್ಮನ ಸನ್ನಿಧಾನದಲ್ಲಿ ಕೇತಗ್ರಸ್ತ ಚಂದ್ರಗ್ರಹಣ ಹುಣ್ಣಿಮೆಯ ಮಹಾಪೂಜೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಿಕ್ಕನಹಳ್ಳಿಯ ಗ್ರಾಮದಲ್ಲಿ ಕೇತಗ್ರಸ್ತ ಚಂದ್ರಗ್ರಹಣ ಮುಗಿದ ಮೇಲೆ ದೇವಸ್ಥಾನ ಶುದ್ಧೀಕರಣ ಮುಗಿಸಿ, ಮಹಾಶಕ್ತಿ ಮಾರಮ್ಮ ತಾಯಿಯ ಸನ್ನಿಧಾನದಲ್ಲಿ ವಿಶೇಷ ಹೂವಿನ ಅಲಂಕಾರದೊಂದಿಗೆ ಮಹಾಪೂಜೆ ನೆರವೇರಿಸಿದ ಪ್ರಧಾನ ಅರ್ಚಕರಾದ ರಾಜುಸ್ವಾಮಿ.

ಕನ್ನಡ ಚಲನಚಿತ್ರ ನಟ ಉಗ್ರಂ ಮಂಜು ಹಾಗೂ ಅವರ ಕುಟುಂಬ ಮಹಾಶಕ್ತಿ ಮಾರಮ್ಮ ದೇವಿಯ ಪೂಜೆಯಲ್ಲಿ ಭಾಗಿ ಮಹಾಶಕ್ತಿ ಮಾರಮ್ಮ ತಾಯಿ ಹಾಗೂ ಕ್ಷೇತ್ರದಲ್ಲಿ ನೆಲೆಸಿರುವ ಶಕ್ತಿ ದೇವತೆಗಳ ಆಶೀರ್ವಾದ ಪಡೆದ ಉಗ್ರಂ ಮಂಜು ಹಾಗೂ ಕುಟುಂಬಸ್ಥರು.

ಮಹಾಶಕ್ತಿ ಮಾರಮ್ಮನ ಸನ್ನಿಧಾನದಲ್ಲಿ ಹುಣ್ಣಿಮೆಯ ಪೂಜೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು.
ಕೊರಟಗೆರೆ ತಾಲೂಕಿನ ಬೈಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದ ಹೊರವಲಯದಲ್ಲಿ ನೆಲೆಸಿರುವ ಮಹಾಶಕ್ತಿ ಮಾರಮ್ಮ, ಆದಿಶಕ್ತಿ ಚೌಡೇಶ್ವರಿ, ಕಾಟೇರಿಯಮ್ಮ, ಅಘೋರ ರಣಭದ್ರಕಾಳಿ ನಾಲ್ಕು ದೇವತೆಗಳು ನೆಲೆಸಿರುವ ಇತಿಹಾಸ ಪ್ರಸಿದ್ಧವುಳ್ಳ ಪುಣ್ಯಕ್ಷೇತ್ರ ಇದಾಗಿದ್ದು..
ಈ ಕ್ಷೇತ್ರದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ, ಹಾಗೂ ಅಮಾವಾಸ್ಯೆ ಹುಣ್ಣಿಮೆ ಸೇರಿದಂತೆ ಹಬ್ಬದ ದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ ಈ ಪೂಜೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಮಹಾಶಕ್ತಿ ಮಾತೆಯಾರಲ್ಲಿ ಭಕ್ತಿ ಪೂರ್ವಕವಾಗಿ ಬೇಡಿಕೊಳ್ಳುತ್ತಾರೆ.
ಕ್ಷೇತ್ರದ ವಿಶೇಷವೇನೆಂದರೆ ಕಷ್ಟ ಎಂದು ನಂಬಿ ಬರುವ ಭಕ್ತಾದಿಗಳು ಒಳಿತನ್ನು ಕಂಡು ಈ ಕ್ಷೇತ್ರಕ್ಕೆ ತಿಂಗಳಿಗೆ ಒಂದು ಬಾರಿಯಾದರೂ ಬಂದು ಹೋಗುತ್ತಾರೆ ಇನ್ನು ತಾಯಿಯ ಸನ್ನಿಧಾನಕ್ಕೆ ಚಲನಚಿತ್ರ, ಕಿರುತೆರೆ, ನಟ ನಟಿಯರು ಬಂದು ತಾಯಿಯ ಕೃಪೆಗೆ ಪಾತ್ರರಾಗಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಿದ್ದಾರೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ರಾಜುಸ್ವಾಮಿ ತಿಳಿಸಿದರು.

ವರದಿ. ಪ್ರಸನ್ನ ಕುಮಾರ್ ಎಸ್, ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!