ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಎಲೆರಾಂ ಪುರದ ಶ್ರೀ ಕುಂಚಟಿಗ ಮಹಾಸಂಸ್ಥಾನಕ್ಕೆ
ಕರ್ನಾಟಕ ರಕ್ಷಣಾ ಯುವ ವೇದಿಕೆ ರಾಜ್ಯಾಧ್ಯಕ್ಷರಾದ ಸುನಿಲ್ ರವರು ಇಂದು ಭೇಟಿ ನೀಡಿ ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಯವರ ಆಶೀರ್ವಾದ ಪಡೆದರು.
ಕುಂಚಿಟಿಗ ಸಮುದಾಯದ ಆಧ್ಯಾತ್ಮಿಕ ಕೇಂದ್ರವಾದ ಕುಂಚಿಟಿಗ ಮಠದಲ್ಲಿ ಹನುಮಂತನಾಥ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಿದ ಅವರು, ರಾಜ್ಯದಲ್ಲಿ ಕನ್ನಡ ಪರ ಹೋರಾಟಗಳು, ಯುವಜನ ಸಂಘಟನೆಗಳ ಬಲವರ್ಧನೆ ಮತ್ತು ಸಮಾಜಮುಖಿ ಕಾರ್ಯಗಳ ಬಗ್ಗೆ ಚರ್ಚಿಸಿದರು.
ಯುವಕರಲ್ಲಿ ಕನ್ನಡ ಪ್ರೇಮವನ್ನು ಬೆಳೆಸಿ ಯುವಕರನ್ನು ಕನ್ನಡ ಪರವಾಗಿ ಮುಂಚೂಣಿಗೆ ತರುವ ದೃಷ್ಟಿಯಲ್ಲಿ ರಾಜ್ಯಾಧ್ಯಕ್ಷರಾದ ಸುನಿಲ್ ಕರ್ನಾಟಕ ರಕ್ಷಣಾ ಯುವ ವೇದಿಕೆ ಎಂಬ ಸಂಘಟನೆಯನ್ನು ಪ್ರಾರಂಭ ಮಾಡಿ ರಾಜ್ಯಾದ್ಯಂತ ಹಾಗೂ ಜಿಲ್ಲಾ ಮಟ್ಟದಲ್ಲಿ ಕನ್ನಡ ನಾಡು ನುಡಿ ರಕ್ಷಣೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಯುವಕರು ದೇಶದ ಶಕ್ತಿಯಾಗಿ ಹೊರಬರಬೇಕು ಎಂಬ ಗುರಿ ಹಾಗೂ ಇಂತಹ ಕನ್ನಡಪರ ಸಂಘಟನೆಗಳಿಗೆ ಸಮಾಜದ ಪ್ರಮುಖ ಮುಖಂಡರ ಸಹಕಾರ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಬದುಕು ಸ್ವಾರ್ಥದ ಬದುಕಾಗಬಾರದು ಕನ್ನಡದ ನಾಡಿಗಾಗಿ ಸ್ವಾಭಿಮಾನದಿಂದ ಬದುಕು ನಡೆಸಿ ಎಂದು ಹನುಮಂತನಾಥ ಸ್ವಾಮಿಗಳು ನಾವು ನಿಸ್ವಾರ್ಥಿಗಳಾಗಬೇಕು ಸಮಾಜದ ಬಲಹೀನರ ಬಲವಾಗಿ ಕನ್ನಡ ನಾಡು ನುಡಿಗೆ ತನು ಮನವನ್ನು ಅರ್ಪಿಸಲು ಕನ್ನಡಿಗರು ಮುಂದಾಗಬೇಕು ಎಂದು ತಿಳಿಸಿದರು.
ರಾಜ್ಯಾಧ್ಯಕ್ಷರಾದ ಸುನಿಲ್ ರವರು ಮಾತನಾಡಿ ನಮ್ಮ ಕರ್ನಾಟಕ ಹಾಗೂ ಕನ್ನಡ ಭಾಷೆಗೆ ಸುಮಾರು 2500 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು ತಾಯಿ ಭಾಷೆಗೆ ಹೆಚ್ಚು ಒತ್ತನ್ನು ಸರ್ಕಾರ ನೀಡಬೇಕು. ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆಯ ಬಗ್ಗೆ ತೀಕ್ಷ್ಣವಾಗಿ ಗಮನಿಸಿ ಕಚೇರಿಗಳಲ್ಲಿ ಕನ್ನಡ ಬಳಕೆಗೆ ಆದ್ಯತೆಯನ್ನು ಕೊಡಬೇಕು.
ಕರ್ನಾಟಕ ಯುವ ರಕ್ಷಣಾ ವೇದಿಕೆ ಕರ್ನಾಟಕದ ಜ್ವಾಲಾಂತ ಸಮಸ್ಯೆಗಳ ನಾಡು ನುಡಿ ರಕ್ಷಣೆಗೆ ರೈತರ ವಿಚಾರಧಾರೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಮಿಕರ ಹಾಗೂ ಶೋಷಿತ ಮಹಿಳೆಯರ ಪರವಾಗಿ ವಿದ್ಯಾರ್ಥಿಗಳ ಪರವಾಗಿ ಯೋಜನಾತ್ಮಕ ಸಂಘಟಿತ ಮತ್ತು ಅಸಂಘಟಿತ ಪರವಾಗಿ ನಿರಂತರವಾಗಿ ನಮ್ಮ ಸಂಘಟನೆ ಸಮಾಜ ಸೇವೆಯಲ್ಲಿ ನಿಮ್ಮ ಜೊತೆಯಲ್ಲಿರುತ್ತೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಸುನಿಲ್ ಕಾರ್ಮಿಕ ಘಟಕ ರಾಜ್ಯಾಧ್ಯಕ್ಷರಾದ ಕೃಷ್ಣ ಜಿಲ್ಲಾಧ್ಯಕ್ಷರಾದ ಉಮೇಶ್ ತುಮಕೂರು ಟೌನ್ ಅಧ್ಯಕ್ಷರಾದ ಆಟೋ ಚಾಲಕರ ತಾಲೂಕು ಅಧ್ಯಕ್ಷ ರಮೇಶ್ ಮಹಿಳಾ ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷರಾದ ರಾಧಾ ಕಾರ್ಮಿಕ ಘಟಕ ತಾಲೂಕು ಅಧ್ಯಕ್ಷರು ಮೆಡಿಕಲ್ ಹನುಮಂತ ರಾಜು ಸಂಘಟನೆಯ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.
” 2013ರಲ್ಲಿ ಕರ್ನಾಟಕ ರಕ್ಷಣಾ ಯುವ ವೇದಿಕೆ ಅಧಿಕೃತವಾಗಿ ಸರ್ಕಾರದ ಅಧಿನಿಯಮದ ಪ್ರಕಾರ ಸಂಘಟನೆ ಚಾಲ್ತಿಯಲ್ಲಿದ್ದು.ಹಲವಾರು ಸಾಮಾಜಿಕ ಕಾರ್ಯಗಳನ್ನು ನಾಡು ನುಡಿ ಜಲದ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು 26 ಜಿಲ್ಲೆಯ ಜಿಲ್ಲಾಧ್ಯಕ್ಷರು ಒಳಗೊಂಡಂತೆ ಅವರ ನಿರಂತರ ಶ್ರಮದಿಂದ ಜಿಲ್ಲಾ ಸಮಿತಿಗಳ ಜೊತೆ ತಾಲೂಕು ಸಮಿತಿಗಳ ರಚನೆಯಾಗಿದ್ದು. ಪ್ರಸ್ತುತ 28 ಜಿಲ್ಲೆಯಲ್ಲಿ ಸಂಘಟನೆ ಸಕ್ರಿಯವಾಗಿದೆ.
ಮೈಸೂರಿನಲ್ಲಿ 2025 ನೇ ಸಾಲಿನ ಸಮಾರಂಭದಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ ನಟ ನಟಿಯರು ಕಲಾವಿದರು ಶಿಕ್ಷಣ ಕ್ಷೇತ್ರಕ್ಕೆ ಸೇರಿಸಿ ಒಟ್ಟು 50 ಜನರಿಗೆ ಬೆಳ್ಳಿ ಪದಕ ಹಾಗೂ ನೆನಪಿನ ಕಾಣಿಕೆಯನ್ನು ನಡೆ ಅವರಿಗೆ ಸನ್ಮಾನ ಸಿಗುವುದು ನಮ್ಮ ಸಂಘಟನೆಯ ಹೆಮ್ಮೆ “.

- ಡಾಕ್ಟರ್ ಸುನಿಲ್
ಕರ್ನಾಟಕ ಯುವ ರಕ್ಷಣಾ ವೇದಿಕೆ, ರಾಜ್ಯಾಧ್ಯಕ್ಷರು.
ವರದಿ : ಪ್ರಸನ್ನಕುಮಾರ್. ಎಸ್., ಕೊರಟಗೆರೆ




















