ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪುರಸಭೆ ಕಸ ವಿಲೇವಾರಿ ಹೋಗುವ ರಸ್ತೆ ಬದಿಯಲ್ಲಿ ಅಸ್ವಚ್ಛತೆ

ಇಲಾಖೆಯ ಗಮನಕ್ಕೆ ಇದ್ದರೂ ಸಹ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಬಳ್ಳಾರಿ / ಕಂಪ್ಲಿ : 6ನೇ ವಾರ್ಡ್ ಕೊಟ್ಟಾಲ್ ರಸ್ತೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರದ ಕಾಲುವೆ ದುರಸ್ತಿ ಮತ್ತು ಕಸ ವಿಲೇವಾರಿ ಘಟಕಕ್ಕೆ ಹೋಗುವ ರಸ್ತೆಯಲ್ಲೇ ಪ್ರತಿ ದಿನ ಕಸವಿಲೇವಾರಿ ಆಟೋಗಳು ಚಲಿಸುತ್ತಿದ್ದು, ಆಟೋ ಚಾಲಕರು ಹಾಗೂ ಕಸವಿಲೇವಾರಿ ಮೇಲಾಧಿಕಾರಿಗಳು ಹಾಗೂ ಪುರಸಭೆ ಇಲಾಖೆಯವ ರಸ್ತೆ ದುರಸ್ತಿ ಬಗ್ಗೆ ಗಮನಕ್ಕೆ ಮೌಖಿಕ ಹಾಗೂ ದೂರಿನ ಮೂಲಕ ಮನವಿ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

ಕೊಟ್ಟಾಲ್ ರಸ್ತೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರದಲ್ಲಿರುವ ಹಾಗೂ ಕಸ ವಿಲೆವಾರಿ ಘಟಕದ ರಸ್ತೆಯಲ್ಲಿರುವ ಕಾಲುವೆಯ ತಡೆಗೋಡೆಗಳು ಸಂಪೂರ್ಣವಾಗಿ ಶಿಥಿಲಗೊಂಡು ಭೂ ಕುಸಿತ ಸರಿಪಡಿಸಲು, ಮತ್ತು ಅಯ್ಯಪ್ಪ ಸ್ವಾಮಿಯ ದೇವಾಲಯದಲ್ಲಿ ಕಸ ವಿಲೇವಾರಿಗೆ ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಮನವಿ ಕೊಟ್ಟರು ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕಾಲುವೆ ಸರಿಪಡಿಸಲು ದೂರಿನ ಮುಖಾಂತರ ಭೂ ಕುಸಿತ ಉಂಟಾದ ಸ್ಥಳದಲ್ಲಿ ಕಟ್ಟಿಗೆಗಳನ್ನು ನೆಟ್ಟು ಅದಕ್ಕೆ ಕೆಂಪು ರಿಬ್ಬನ್ನಿನ ಬಟ್ಟೆಯನ್ನು ಸುತ್ತಿ ಸಾಧನೆಗೈದಿದ್ದು ಬಿಟ್ಟರೆ ಮತ್ತೇನನ್ನು ಮಾಡಿಲ್ಲ..! ಮುಂಬರುವ ಮಳೆಗಾಲದಲ್ಲಿ ಕಾಲುವೆಗಳಿಗೆ ನೀರು ಹರಿದರೆ ಪುರಸಭೆಯ ಕಸ ವಿಲೇವಾರಿ ಘಟಕಕ್ಕೆ ಹೋಗಿ ಬರುವ ಟ್ರ್ಯಾಕ್ಟರ್, ಮ್ಯಾಕ್ಸಿ ಕ್ಯಾಬ್, ಗೂಡ್ಸ್, ವಾಹನ ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುವ ಭಕ್ತಾದಿಗಳ ವಾಹನಗಳು ತಿರುಗಾಡುತ್ತಿದ್ದು ಹಾಗೂ ಸಾಯಿಬಾಬ ಗುಡಿಯ ಪುರಸಭೆಯ ಉದ್ಯಾನದಲ್ಲಿ ಮಕ್ಕಳು ಆಟವಾಡುವ ಸಂದರ್ಭದಲ್ಲಿ ಇನ್ನಷ್ಟು ಅನಾಹುತಕ್ಕೆ ಕಾರಣವಾಗುತ್ತದೆ. ಹಾಗೆಯೇ ಇದರ ಪಕ್ಕದಲ್ಲಿ ಖಾಸಗಿ ಶಾಲೆಯು ಸಹ ಇದ್ದು ಶಾಲಾ ವಾಹನಗಳು ಸಂಚರಿಸುತ್ತಿರುತ್ತವೆ,
ಆದರೆ, ಇದಕ್ಕೂ ನಮಗೂ ಸಂಬಂಧವಿಲ್ಲವೆಂದು ಕೈಕಟ್ಟಿ ಕುಳಿತಿದ್ದಾರೆ, ಹಾಗೆಯೇ ಇದರ ಬಗ್ಗೆ ಗಮನ ಹರಿಸದೆ ಇರುವುದು ದುರ್ದೈವ ಆದ್ದರಿಂದ ತಾವುಗಳು ಸ್ಥಳ ಪರಿಶೀಲಿಸಿ , ವಿಶೇಷ ತುರ್ತು ಅನುದಾನದಲ್ಲಿ ದುರಸ್ತಿಗೊಳಿಸಲು ಆದೇಶಿಸಬೇಕೆಂದು ಸಮಾಜ ಸೇವಾ ವೇದಿಕೆಯ ರಾಜ್ಯಾಧ್ಯಕ್ಷರಾದ ಚೆನ್ನಯ್ಯ ವಸ್ತ್ರದ್ ರಾಜ್ಯ ಕಾರ್ಯಧ್ಯಕ್ಷರಾದ ಟಿ.ಎಚ್. ರಾಜಕುಮಾರ್ ಪ್ರಧಾನ ಕಾರ್ಯದರ್ಶಿಯಾದ ರಾಮಕೃಷ್ಣ ಸಂಘಟನಾ ಕಾರ್ಯದರ್ಶಿಯಾದ ಮನೋಜ್ ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಸಾರ್ವಜನಿಕರ ಹಾಗೂ ಅಯ್ಯಪ್ಪ ಸ್ವಾಮಿ ಭಕ್ತಾದಿಗಳ ಖಾಸಗಿ ಶಾಲೆಯ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಪರವಾಗಿ ದೂರಿನ ಮುಖಾಂತರ ಮನವಿಯನ್ನು ಮಾನ್ಯ ಆಡಳಿತ ಅಧಿಕಾರಿಗಳು ಮತ್ತು ಸಹಾಯಕ ಆಯುಕ್ತರು ಬಳ್ಳಾರಿ ಹಾಗೂ ಮಾನ್ಯ ಜಿಲ್ಲಾ ಅಧಿಕಾರಿಗಳು ಬಳ್ಳಾರಿ ಇವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!