ಗದಗದ ಡಾ.ಪಂಡಿತ ಪುಟ್ಟರಾಜ ಗವಾಯಿಗಳವರ 112 ನೇ ಜಯಂತಿ ಉತ್ಸವ ಪ್ರಯುಕ್ತ ಸನ್ 2025-26 ನೇ ಸಾಲಿನ ಅಶ್ವಿನಿ ಪ್ರಕಾಶನ ಗದಗ ಮತ್ತು ಡಾ.ವ್ಹಿ.ಬಿ.ಹಿರೇಮಠ ಮೆಮೋರಿಯಲ್ ಟ್ರಸ್ಟ ಗದಗ ದ ವತಿಯಿಂದ ರಾಜ್ಯ ಮಟ್ಟದ ಡಾ.ಪಂಡಿತ ಪುಟ್ಟರಾಜ ಗವಾಯಿಗಳವರ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಗೋಕಾಕದ ಸಾಹಿತಿಗಳಾದ ಶ್ರೀ ಹನುಮಂತರಾವ್ ಬಿ ನಾಗಪ್ಪಗೋಳ ಅವರಿಗೆ ಗದಗದಲ್ಲಿ ಪ್ರದಾನ ಮಾಡಲಾಯಿತು. ಟ್ರಸ್ಟನ ಅಧ್ಯಕ್ಷರಾದ ಶ್ರೀಮತಿ ಡಾ.ವ್ಹಿ.ವ್ಹಿ.ಹಿರೇಮಠ, ಮುಖ್ಯ ಅತಿಥಿಯಾಗಿ ಯುವ ಕಾಂಗ್ರೇಸ್ ಕಮಿಟಿಯ ಅಧ್ಯಕ್ಷರು ಕೃಷ್ಣೆಗೌಡ ಎಚ್ ಪಾಟೀಲ ಯುವ ಧುರೀಣರು, ಶಲವಡಿಯ ಶ್ರೀಗಳಾದ ಗುರುಶಾಂತೇಶ್ವರ ಮಹಾಸ್ವಾಮಿಗಳು ಹಾಗೂ ಟ್ರಸ್ಟ್ ನ ಸರ್ವ ಸದಸ್ಯರು ಗಣ್ಯಮಾನ್ಯರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















