ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಶ್ವಚೇತನ ಉತ್ಸವ ಇದು ಕಂದಗಲ್ ಉತ್ಸವ.

ಬಾಗಲಕೋಟೆ/ ಇಲಕಲ್ಲ :
“ನಾನು ಕಂದಗಲ್ ಉತ್ಸವವನ್ನು ಮಾಡಬೇಕೆಂದು ಯೋಚಿಸಿದ್ದೆ ಆದರೆ ಈ ವಿಶ್ವಚೇತನ ಉತ್ಸವನ್ನು ನೋಡಿ ಕಂದಗಲ್ ಉತ್ಸವವನ್ನು ನೋಡಿದಂತಾಗಿದೆ
ತಾಲೂಕಿನ ಕಂದಗಲ್ ವಿಶ್ವ ಚೇತನ ಶಾಲೆಯ 16ನೇ ವಾರ್ಷಿಕೋತ್ಸವ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ನಡೆಯುವ ಪ್ರತಿಷ್ಠಿತ ಟಿ ವಿ ಚಾನಲ್ ಗಳ ವೇದಿಕೆಯಂತೆ ಅತ್ಯಂತ ಅದ್ದೂರಿಯಾಗಿ ಕಾಣುತ್ತಿದ್ದು ಇಲ್ಲಿಯ ಶಿಕ್ಷಣವು ಕೂಡ ಮೌಲ್ಯಯುತವಾಗಿದ್ದು ಸ್ಥಳೀಯರು ಈ ಸಂಸ್ಥೆಯ ಉಪಯೋಗ ಪಡೆದುಕೊಳ್ಳಬೇಕು. ಈ ಕಾರ್ಯಕ್ರಮ ಸುವರ್ಣಾಕ್ಷರದಲ್ಲಿ ಬರೆದಿಡುವಂಥ ಕಾರ್ಯಕ್ರಮ ವಾಗಿದೆ ಎಂದು ದಿವ್ಯ ಸಾನಿಧ್ಯ ವಹಿಸಿದ್ದ ಸುವರ್ಣಗಿರಿ ಸಂಸ್ಥಾನಮಠದ ಪೂಜ್ಯಶ್ರೀ ಮ. ನಿ. ಪ್ರ. ಡಾ. ಚನ್ನಮಲ್ಲ ಮಹಾಸ್ವಾಮಿಗಳು ಸುವರ್ಣಗಿರಿ ಕಂದಗಲ್ಲ ರುದ್ರುಸ್ವಾಮಿ ಮಠದ ಶ್ರೀಗಳು ಹೇಳಿದರು.
ಶಿಕ್ಷಣದ ಮಹತ್ವ ಮತ್ತು ಅದರ ಮೌಲ್ಯದ ಕುರಿತಾಗಿ ಮನದಾಳದ ಮಾತುಗಳನ್ನು ಹಂಚಿಕೊಂಡ ಶ್ರೀಗಳು ಆತ್ಮವಿಶ್ವಾಸ ಮತ್ತು ಪರಿಶ್ರಮದ ಮೂಲಕ ಜೀವನದಲ್ಲಿ ಉನ್ನತ ಸಾಧನೆಗಳನ್ನು ಸಾಧಿಸಬಹುದು ಎಂದು ಆಶೀರ್ವಚನ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಸ್ಥಾಪಕರಾದ ಸಂಗಣ್ಣ ಹವಾಲ್ದಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಿ ಎಲ್ ಡಿ ಬ್ಯಾಂಕ್ ಹುನಗುಂದ ಮಾಜಿ ಅಧ್ಯಕ್ಷರಾದ ಶಿವಣ್ಣ ಗೊಂದಿ, ಹುನಗುಂದ ವಿಜಯ ಮಹಾಂತೇಶ್ ಬ್ಯಾಂಕ್ ನಿರ್ದೇಶಕರಾದ ಮಹಾಂತೇಶ್ ಅವಾರಿ, ಹುನಗುಂದ ಸಾಯಿ ಶಿಕ್ಷಣ ಸಂಸ್ಥೆಯ ಸಂಜೀವಕುಮಾರ್ ಜೋಶಿ, ಹುನಗುಂದ ತಾಲೂಕು ಕಾ ನಿ ಪ ಅಧ್ಯಕ್ಷ ಅಮರೇಶ್ ನಾಗೂರ ಇಲಕಲ್ಲ ತಾಲೂಕ್ ಕಾ ನಿ ಪ ಉಪಾಧ್ಯಕ್ಷ ಪತ್ರಕರ್ತ ವೀರೇಶ್ ಶಿಂಪಿ, ಬಸವೇಶ್ವರ ಬ್ಯಾಂಕ ಮು ಕಾರ್ಯ ನಿರ್ವಾಹಕ ಲಕ್ಷ್ಮಣ ಗಂಗಾಮತ, ಮೌನೇಶ ಬಡಿಗೇರ, ಶಂಕರಕಾಳಿಪ್ರಸಾದ, ವೈದ್ಯರಾದ ಈಶ್ವರ ಅರಮನಿ, ರಮೇಶ ದಾಸರ, ಸಂಸ್ಥೆಯ ಮು. ಗುರುಮಾತೆ ರೇಷ್ಮ ಗಾವಡಿ. ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಶಾಲೆಯ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪಾಲಕರು ಜೊತೆಗೆ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಹಾಜರಿದ್ದರು.
ಶಾಲೆಯ ಸಹ ಶಿಕ್ಷಕರಾದ ಕುಮಾರ್ ಪ್ರಸಾದ್ ನಾಯ್ಕ ಸ್ವಾಗತಿಸಿದರು, ಕುಮಾರಿ ನಂದಿನಿ ನಾಯ್ಕ ವಂದಿಸಿದರು, ಕುಮಾರಿ ಭವ್ಯಶ್ರೀ ಭಂಡಾರಿ ನಿರೂಪಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!