ಬಾಗಲಕೋಟೆ/ ಇಲಕಲ್ಲ : ತಾಲೂಕಿನ ದತ್ತು ಗ್ರಾಮ ಕಂದಗಲ್ಲ ದಲ್ಲಿ ಬಾಗಲಕೋಟ ವಿಶ್ವ ವಿದ್ಯಾಲಯ ಜಮಖಂಡಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲಕಲ್ಲ ಇವರಿಂದ ರಾಷ್ಟ್ರೀಯ ಸೇವಾ ಯೋಜನೆಯ 5 ನೆ ದಿನದ ವಿಶೇಷ ವಾರ್ಷಿಕ ಶಿಬಿರ ನಡೆಯಿತು.
ಶಿಬಿರದ ಧ್ವಜಾರೋಹಣವನ್ನು ಬೆಳಿಗ್ಗೆ ಮಾಜಿ ತಾಲೂಕ ಪoಚಾಯತ ಅಧ್ಯಕ್ಷರಾದ ಮಹಾಂತೇಶ ಕಡಿವಾಲ ನೆರವೇರಿಸಿದರು.
ಸಾಯಂಕಾಲ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಮೊಹಮ್ಮದ್ ಆರೀಫ ಸಹಾಯಕ ಪ್ರಾಧ್ಯಾಪಕರು ಕನ್ನಡ ವಿಭಾಗ ಇವರು ವಹಿಸಿದ್ದರು.
ವಿಶೇಷ ಉಪನ್ಯಾಸವನ್ನು ಶ್ರೀಶೈಲ್ ಎಸ್. ರೇಷ್ಮೆ -ವಕೀಲರು ಹುನಗುಂದ ಇವರು “ಕಾನೂನಿನ ಅರಿವು”ಬಗ್ಗೆ ತಿಳಿಸಿಕೊಟ್ಟರು.
ಎನ್ ಎಸ್ ಎಸ್ ಅಧಿಕಾರಿಗಳಾದ ಶ್ರೀದೇವಿ ಕಡಿವಾಲ ಗ್ರಂಥಾಪಾಲಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲಕಲ್, ವೀರೇಶ್ ಶಿಂಪಿ ಪತ್ರಕರ್ತರು. ಮಹಾಂತೇಶ್ ಗೋದಿ- ಕೆ ಬಿ ಎಸ್ ನಂಬರ್ 1 ಎಸ್ಡಿಎಂಸಿ ಅಧ್ಯಕ್ಷರು, ಗುರುಪಾದಪ್ಪ ಪುರದಣ್ಣವರ್ ಗ್ರಾಮದ ಹಿರಿಯರು ಅತಿಥಿಗಳಾಗಿ ಆಗಮಿಸಿದ್ದರು.
ಅಜೀಮ್ ಜಮಾದಾರ್ ಸಹಾಯಕ ಪ್ರಾಧ್ಯಾಪಕರು ವಾಣಿಜ್ಯಶಾಸ್ತ್ರ ವಿಭಾಗ ದೊಡ್ಡಬಸವ ಹಡಪದ ಉಪನ್ಯಾಸಕರು ಇಂಗ್ಲಿಷ್ ವಿಭಾಗ , ಮಹಾಂತೇಶ ಕುಂಬಾರ ಉಪನ್ಯಾಸಕರು ಇತಿಹಾಸ ವಿಭಾಗ
ಮಸನಪ್ಪ ಕೆಂಗಾರ ಅಟೆಂಡರ್ ಸೇರಿದಂತೆ ಎನ್ ಎಸ್ ಎಸ್ ಶಿಬಿರದ ಸೇವಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















