ಹುನಗುಂದ: ತಾಲೂಕಿನ ತಿಮ್ಮಾಪುರ ಗ್ರಾಮದ ರೆಡ್ಡಿ ಸಮಾಜದ ಹಿರಿಯರು ಸಂಗನಗೌಡ ಶಿವನಗೌಡ ರಂಗನಗೌಡ ಇವರು ದಿನಾಂಕ 05 03 2026 ರಂದು ಮುಂಜಾನೆ 5 ಗಂಟೆ 30 ನಿಮಿಷಕ್ಕೆ ಬಾಗಲಕೋಟೆಯಲ್ಲಿ ನಿಧನರಾದರು.
ಮೃತರು ಗ್ರಾಮದ ದಳಪತಿಗಳಾಗಿ ಸೇವೆ ಸಲ್ಲಿಸಿದ್ದಲ್ಲದೆ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು ಮರಣದ ಕಾಲಕ್ಕೆ ಅವರಿಗೆ 74 ವರ್ಷ ವಯಸ್ಸಾಗಿತ್ತು.
ಮೃತರು ರಂಗ ಕಲಾವಿದರಾಗಿ ಹಾಗೂ ಹುಟ್ಟು ಹೋರಾಟಗಾರರಾದ ಸಂಗನಗೌಡರು ಅನ್ಯಾಯದ ವಿರುದ್ಧ ನಿರಂತರ ಹೋರಾಟ ಮಾಡಿದ್ದಾರೆ.
ಮೃತರು ಪತ್ನಿ ಮಂಗಲಾ ಸೇರಿದಂತೆ ಎರಡು ಜನ ಪುತ್ರರು ಎರಡು ಜನ ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಗಂಡು ಮಕ್ಕಳಾದ ಹಿರಿಯ ಪುತ್ರ ಶಿವನಗೌಡ ಬಾಗಲಕೋಟೆಯ ಬಾಪೂಜಿ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಲಿಮಿಟೆಡ್ ನಿರ್ದೇಶಕರಾಗಿದ್ದಾರೆ, ಕಿರಿಯ ಪುತ್ರ ಗೌರಿಶಂಕರ ಅಮೆರಿಕದಲ್ಲಿ ಇಂಜಿನಿಯರ್ ಆಗಿದ್ದಾರೆ.
ಹಿರಿಯ ಮಗಳು ಬನು ಗೃಹಿಣಿಯಾಗಿದ್ದಾರೆ ಕಿರಿಯ ಮಗಳು ಶೈಲಾ ಪ್ರೌಢಶಾಲಾ ಶಿಕ್ಷಕಿಯಾಗಿದ್ದಾರೆ, ಮಾಜಿ ಸಚಿವ ಎಸ್ ಆರ್ ಪಾಟೀಲ್, ಮೃತರ ಅಳಿಯಂದಿರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ
ಮೃತರ ಅಂತ್ಯಕ್ರಿಯೆಯು ಸ್ವಗ್ರಾಮವಾದ ತಿಮ್ಮಾಪುರ ಗ್ರಾಮದಲ್ಲಿ 4:30 ಕ್ಕೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ
ಸಂತಾಪ : ಗ್ರಾಮ ಪಂಚಾಯತಿ ಸದಸ್ಯರು ಸಂತಾಪ ಸೂಚಿಸಿದ್ದಾರೆ.




















