
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮದಲ್ಲಿ ಸುಮಾರು 8 ರಿಂದ 10 ಕಣಗಳಿಗೆ ಬೆಂಕಿ ಹತ್ತಿ ಉರಿದಿದೆ. ಇದಕ್ಕೆ ಮುಖ್ಯ ಕಾರಣ ಸ್ಥಳೀಯರು ಹೇಳುವಂತೆ ಜಾಲಿ ಮರದಲ್ಲಿ ಹೋಗಿರುವ ವಿದ್ಯುತ್ ತಂತಿಗಳಿಂದ ಶಾರ್ಟ್ ಸರ್ಕ್ಯೂಟ್ ಮೂಲಕ 10 ನಿಮಿಷದಲ್ಲಿ ಹತ್ತಿ ಉರಿದಿದೆ. ಕಣದಲ್ಲಿರುವ ಟ್ರ್ಯಾಕ್ಟರ್, ದನಗಳನ್ನು, ಕುರಿಗಳನ್ನು ಹಾಗೂ ಮೆಕ್ಕೆಜೋಳದ ರಾಶಿ ಗಳನ್ನು ಬೆಂಕಿಯಿಂದ ತಡೆಗಟ್ಟುವಲ್ಲಿ ಯುವಕರು ಮತ್ತು ಇಲ್ಲಿನ ಊರಿನ ಸಾರ್ವಜನಿಕರು ಮುಂದಾಗಿ ನಂತರ ಅಗ್ನಿಶಾಮಕ ದಳ ವಾಹನ ಕರೆಸಿ ನಂದಿಸಲು ಪ್ರಯತ್ನಿಸಲ್ಲಿದ್ದಾರೆ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರರು ಜಿ ಕೆ ಅಮರೇಶ್ ಮತ್ತು ಪೊಲೀಸ್ ಸಿಬ್ಬಂದಿ ವರ್ಗವು ಸೇರಿದಂತೆ ಹಲವು ಅಧಿಕಾರಿಗಳು ಸೇರಿದ್ದರು. ಕೊಟ್ರೇಶ್, ಶಿವಜ್ಜ, ಬಿ ಶಿವರಾಜ್ ಡಿಎಸ್ಎಸ್ ಕೊಟ್ಟೂರು ತಾಲೂಕು ಅಧ್ಯಕ್ಷರು ,ಮಂಜುನಾಥ್ ಚಲವಾದಿ, ಮಹಾಸಭಾ ತಾಲೂಕು ಅಧ್ಯಕ್ಷರು,ಶ್ರೀಧರ ಒಡೆಯರ್ ರೈತ ಸಂಘದ ಘಟಕದ ಅಧ್ಯಕ್ಷರು ಇನ್ನು ಹಲವರು ಸೇರಿ ಇದಕ್ಕೆ ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳು ರೈತರಿಗೆ ನಷ್ಟವಾಗಿರುವ ದವಸ ಧಾನ್ಯ ಮೇವುಗಳನ್ನು ಒದಗಿಸಬೇಕು ಒಟ್ಟಿನಲ್ಲಿ ಇದಕ್ಕೆ ಪರಿಹಾರ ಕೋರಿದರು.
ವರದಿ: R H ಕೊಟ್ರೇಶ, ಕರುನಾಡ ಕಂದ ಪತ್ರಿಕೆ ಕೊಟ್ಟೂರು ತಾಲೂಕು.




















