ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಲಿಕೆ ಉತ್ತೇಜಿಸುವ ಕಾರ್ಯಕ್ರಮ : ಎ. ತಾಂಡವ ಕೃಷ್ಣ

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರಿನ ಶ್ರೀ ವೆಂಕಯ್ಯ ಮೆಮೋರಿಯಲ್ ಶಾಲೆಯಲ್ಲಿ ನರ್ಸರಿ ತರಗತಿಯಿಂದ 2 ನೇತರಗತಿ ವಿದ್ಯಾರ್ಥಿಗಳ ವರ್ಷವಿಡೀ ಕಲಿಕೆಯ ಫಲಕಗಳ ಜ್ಞಾನದ ಪ್ರದರ್ಶನ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜ್ಯೋತಿ ರವರು ಮಕ್ಕಳಲ್ಲಿ ಹಲವು ಪ್ರತಿಭೆಗಳು ಅಡಗಿಕೊಂಡಿದ್ದು,ಅವುಗಳನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು, ಪ್ರತಿಯೊಂದು ಮಗುವಿನಲ್ಲೂ ಇದೇ ರೀತಿ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಮಾತೇ ಇದೆಯಲ್ಲ. ಅದನ್ನು ಗುರುತಿಸಿ ಬೆಳೆಸುವ ಕೆಲಸವನ್ನು ಪೋಷಕರು ಅಥವಾ ಶಿಕ್ಷಕರು ಮಾಡಬೇಕಾಗುತ್ತದೆ ಎಂದರು.
ನಂತರ ಅಧ್ಯಕ್ಷತೆ ವಹಿಸಿದ ಶಾಲಾ ಸಂಸ್ಥಾಪಕ ಎ. ತಾಂಡವ ಕೃಷ್ಣ ಮಾತನಾಡಿ ಮಕ್ಕಳ ಭೌತಿಕ ಮಾನಸಿಕ ಜ್ಞಾನಾತ್ಮಕ ಮೌಲ್ಯಯುತ ಶಿಕ್ಷಣವನ್ನು ನಾವು ನೀಡುವುದರ ಮೂಲಕ ಮುಂದಿನ ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸಲು ಸಹಕರಿಸುತ್ತೇವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕಾರ್ಯಕ್ರಮ ಆಕರ್ಷಣೆಯಾಗಿದ್ದರು.

ಕಾರ್ಯದರ್ಶಿಗಳಾದ ಎ ಸುನಿತ, ಮುಖ್ಯಗುರುಗಳಾದ ಕೆ. ಎಚ್. ರಾಮು ಶಿಕ್ಷಕರಾದ ಬರ್ಮಾ, ವಿದ್ಯಾರ್ಥಿಗಳ ಪಾಲಕರಾದ ರಾಜಸಾಬ್. ಬಿ ಜಡಿ ಮೂರ್ತಿ, ವೀರೇಶ್, ಓರ್ವಾಯಿ. ಪಲ್ಲವಿ, ಶಾರದಾ, ನೀಲಮ್ಮ, ಲಕ್ಷ್ಮೀನಾರಾಯಣ, ವಿಜಯಲಕ್ಷ್ಮಿ, ಶಾಂಭವಿ, ಗೀತಾ, ಹಾಗೂ ರಾಯಮಣಿ ಎಲ್ಲಾ ಶಿಕ್ಷಕಿಯರು ಸೇರಿದಂತೆ ಪಾಲಕ- ಪೋಷಕರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!