ತುಮಕೂರು ಆರ್ ಟಿ ಓ ಕಚೇರಿಗೆ ಜಂಟಿ ಸಾರಿಗೆ ಆಯುಕ್ತ ಶ್ರೀಮತಿ ಗಾಯಿತ್ರಿ ದೇವಿ ಭೇಟಿ.
ಸರ್ಕಾರದ ನಿಯಮಗಳನ್ನು ಪಾಲಿಸದ ಮತ್ತು ಸುರಕ್ಷತಾ ಸಾಧನಗಳನ್ನು ಅಳವಡಿಸದೆ ಇರುವ ವಾಹನಕ್ಕೆ ಎಫ್ ಸಿ ನವೀಕರಿಸಿರುವ ತುಮಕೂರು ಆರ್ ಟಿ ಓ.
ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಜಂಟಿ ಆಯುಕ್ತರಾದ ಶ್ರೀಮತಿ ಗಾಯಿತ್ರಿ ದೇವಿ ತುಮಕೂರು ಆರ್ ಟಿ ಓ ಕಚೇರಿಗೆ ಭೇಟಿ ನೀಡಿ ವಿವಿಧ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಜಂಟಿ ಸಾರಿಗೆ ಆಯುಕ್ತಾರಾದ ಶ್ರೀಮತಿ ಗಾಯತ್ರಿ ದೇವಿ ಮಾತನಾಡಿ ತುಮಕೂರು ಜಿಲ್ಲೆ ಶಿರಾ ನಗರದ ನಿವಾಸಿ ಸೈಯದ್ ಜಿಲಾನಿ ಅವರಿಗೆ ಸೇರಿದ ಕೆ ಎ 22 ಬಿ 5235 ವಾಹನ 22 ಜುಲೈ 2012 ಬೆಳಗಾವಿಯಲ್ಲಿ ನೋಂದಣಿಯಾಗಿದ್ದು ಪ್ರಸ್ತುತ ತುಮಕೂರು ಆರ್ ಟಿ ಓ ಕಚೇರಿಗೆ ಸ್ಥಳಾಂತರಗೊಂಡ 17.2.2026ರಂದು ಎಫ್ ಸಿ ನವಿಕರಣಗೊಂಡಿರುತ್ತದೆ.
ಎಫ್ ಸಿ ನವೀಕರಣದ ವೇಳೆ ವಾಹನ ತಪಾಸಣಾ ಅಧಿಕಾರಿ ಪ್ರವಾಸಿ ಸಾರಿಗೆ ವಾಹನದಲ್ಲಿ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ ಅಲ್ಲದೆ 15 ವರ್ಷ ತುಂಬಲು ಕೇವಲ ಆರು ತಿಂಗಳು ಇರುವಾಗ ಒಂದು ವರ್ಷಕ್ಕೆ ಎಫ್ ಸಿ ನವೀಕರಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಲಾಗಿದೆ.ಎಂದು ಸಾರ್ವಜನಿಕರು ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆಗೆ ಆಗಮಿಸಿದ್ದೇನೆ.
ಮೇಲ್ನೋಟಕ್ಕೆ ಆರ್ ಟಿ ಓ ಅಧಿಕಾರಿಯಿಂದ ಕಾನೂನು ಕರ್ತವ್ಯ ಲೋಪ ಆಗಿರೋದು ಕಂಡು ಬಂದರೆ ಅವರ ವಿರುದ್ಧ ಶಿಸ್ತು ಕ್ರಮ ಶಿಫಾರಸ್ಸು ಮಾಡಲಾಗುವುದು ಎಂದರು.
ಸುತ್ತೋಲೆ ಮಾನದಂಡಗಳನ್ನು ಉಲ್ಲಂಘಿಸಿ ವಾಹನದ ಎಫ್ ಸಿ ಮಾಡಿರುವ ಪ್ರಕರಣವು ಆರ್ ಟಿ ಓ ಕಚೇರಿಯಲ್ಲಿ ಸಾಕ್ಷಿಯಾಗಿದೆ.
ವರದಿ ಪ್ರಸನ್ನ ಕುಮಾರ್



















