ಬಳ್ಳಾರಿ / ಕಂಪ್ಲಿ : ಪಟ್ಟಣದ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಸಂಜೆ ಗಣಿತ ವಿಷಯದ ಅನುಭವಿ ಶಿಕ್ಷಕರಾದ ಗೋಪಾಲಕೃಷ್ಣ ಆಚಾರಿ ಅವರಿಂದ ಮಕ್ಕಳಿಗೆ ಪರೀಕ್ಷೆಯನ್ನು ಎದುರಿಸಲು ಪ್ರರೇಣಾತ್ಮಕ (ಮೋಟಿವೇಶನ್) ತರಗತಿಯನ್ನು ಹಮ್ಮಿಕೊಳ್ಳಲಾಯಿತು.
ನಿವೃತ್ತ ಶಿಕ್ಷಕ ಶ್ರೀ ಗೋಪಾಲಕೃಷ್ಣ ಆಚಾರ್ಯ ಮಾತನಾಡಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯ ಭಯ ಆತಂಕವನ್ನು ಹೋಗಲಾಡಿಸುವ ಸಲುವಾಗಿ ಮಕ್ಕಳೊಂದಿಗೆ ಪರೀಕ್ಷೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪರೀಕ್ಷೆಯನ್ನು ಎದುರಿಸಬೇಕು, ಪುನರ್ಮನನ ಮಾಡಿಕೊಂಡ ನಂತರ, ಆ ವಿಷಯದಲ್ಲಿನ ಹಿಂದಿನ ಇತ್ತೀಚಿನ ಪ್ರಶ್ನೆ ಪತ್ರಿಕೆಗಳನ್ನು ನೋಡಿ ಯಾವ ರೀತಿಯ ಪ್ರಶ್ನೆಗಳನ್ನು ಸಂಬಂಧಿಸಿದ ಅಧ್ಯಾಯದಿಂದ ಕೇಳಲಾಗಿದೆ ಎಂಬುದನ್ನು ಗಮನಿಸಿ. ಪ್ರಶ್ನೆಗಳಿಗೆ ಮೀಸಲಿಟ್ಟಿರುವ ಅಂಕಗಳ ಆಧಾರದ ಮೇಲೆ ಹೇಗೆ ಮತ್ತು ಎಷ್ಟು ಉತ್ತರಿಸಬೇಕು ಎಂಬ ಸರಳ ಮಾರ್ಗದ ಟಿಪ್ಸ್ ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.
ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯ ಶಿಕ್ಷಕ ಹೆಚ್ ಮರಿಯಪ್ಪ ಮಾತನಾಡಿ ನನ್ನ ಹೊಸ ನೆಲ್ಲುಡಿಯ ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕರಾದ ಶ್ರೀ ಗೋಪಾಲಕೃಷ್ಣ ಆಚಾರಿ ಅವರು ನನಗೆ ಪ್ರಾಥಮಿಕ ಹಂತದಲ್ಲಿ ತೋರಿದ ಪರೀಕ್ಷೆಗೆ ಅನುಭವಗಳನ್ನು ಮತ್ತು ಸರಳ ಮಾರ್ಗವನ್ನು ಮಕ್ಕಳಿಗೆ ನೀಡಿದ ನನ್ನ ಗುರುಗಳಿಗೆ ಸದಾ ನಾನು ಚಿರಋಣಿ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಸಹ – ಶಿಕ್ಷಕರಾದ ಶುಭಾಷ್, ಮಹೇಶ್ ಕುಮಾರ್, ಅಪ್ರೋಜ್ ಸೇರಿದಂತೆ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















