ಬೆಂಗಳೂರು: ಐಡಿಬಿಐ ಬ್ಯಾಂಕ್ ಮೈಕೋ ಲೇಔಟ್ ಶಾಖೆಯು ತನ್ನ ಕೋರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (CSR) ಚಟುವಟಿಕೆಗಳ ಆಡಿಯಲ್ಲಿ ಬೆಂಗಳೂರಿನ ಯಳ್ಳುಂಕುಂಟೆ ಹಿರಿಯ ಪ್ರಾಥಮಿಕ ಶಾಲೆಗೆ ನೀರು ಶುದ್ಧೀಕರಣ ಯಂತ್ರ (ವಾಟರ್ ಪ್ಯೂರಿಫೈಯರ್) ಹಾಗೂ ಅಡುಗೆ ಪಾತ್ರೆಗಳನ್ನು ದೇಣಿಗೆಯಾಗಿ ನೀಡಿತು.
ಈ ಸಂದರ್ಭದಲ್ಲಿ ಐಡಿಬಿಐ ಬ್ಯಾಂಕಿನ ಅಧಿಕಾರಿಗಳಾದ ಶ್ರೀ ಎಂ ಮಹೇಶ್ವರನ್ ಮತ್ತು ಶ್ರೀಮತಿ ಪ್ರಾಗ್ಯ ತ್ರಿಪಾಠಿಯವರು ಈ ವಸ್ತುಗಳನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ ಶ್ರೀನಾಥ್ ರವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಹೆಚ್ ಎಸ್ ಆರ್ ಸಿಟಿಜ಼ನ್ ಫೋರಂ ನ ಅಧ್ಯಕ್ಷರಾದ ಶ್ರೀ ಬಿ.ಎನ್.ಎಸ್. ರತ್ನಾಕರ್ ಮತ್ತು ಬ್ಯಾಂಕರ್ಸ್ ಕನ್ನಡಿಗರ ಬಳಗದ ಅಧ್ಯಕ್ಷ ಶ್ರೀ ಎಂ ವೆಂಕಟೇಶ ಶೇಷಾದ್ರಿಯವರೂ ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು.




















