ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ 6ನೇ ವಾರ್ಡಿನ ತರಕಾರಿ ಮಾರುಕಟ್ಟೆಯಲ್ಲಿ ಬರುವ ಚರಂಡಿಯನ್ನು ನೀರು ಹೋಗುವ ಮಾರ್ಗವಾಗಿ ಚರಂಡಿ ನಿರ್ಮಾಣ ಮಾಡುವಂತೆ ಗ್ರಾಮ ಪಂಚಾಯಿತಿ ಕರವಸಲಿಗಾರ ಗಾದಿಲಿಂಗಪ್ಪ ಅವರಿಗೆ 6ನೇ ವಾರ್ಡಿನ ನಿವಾಸಿಗಳು ಮನವಿ ಸಲ್ಲಿಸಿದರು.
ಈ ವೇಳೆ ವಾರ್ಡಿನ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಎಸ್. ರಾಮಪ್ಪ ಮಾತನಾಡಿ ಹೊಸದಾಗಿ ನಿರ್ಮಾಣವಾಗುತ್ತಿರುವ ತರಕಾರಿ ಮಾರುಕಟ್ಟೆಯ ನೀರನ್ನು ಮೊದಲಿನಂತೆ ರೆಡ್ಡಿ ಮತ್ತು ಕೊರವರು ಓಣಿಯ ಮನೆಯ ಹಿಂಭಾಗದಲ್ಲಿ ಚರಂಡಿ ನಿರ್ಮಾಣ ಮಾಡಿ ಮೊದಲಿನಂತೆ ನೀರನ್ನು ಸರಾಗವಾಗಿ ಹೋಗುವಂತೆ ನಿರ್ಮಿಸಿ ಕೊಡಬೇಕು ಯಾವುದೇ ಕಾರಣಕ್ಕೂ ಮನೆಯ ಮುಂಭಾಗದಿಂದ ಚರಂಡಿ ನೀರನ್ನು ಕಳಿಸಬಾರದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುರೇಶ್ ರೆಡ್ಡಿ, ಮಲ್ಲಿಕಾರ್ಜುನ ಸಿಬ್ಬಂದಿ ಈಶ್ವರ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















