ಸಿರುಗುಪ್ಪ – ನಗರದ ನಗರಸಭೆಯಿಂದ 2021- 22 ನೇ ಸಾಲಿನ ನಗರೋತ್ಥಾನ ಹಂತ-4ರ ಯೋಜನೆಯಡಿ ಶೇ. 5 ರ ಅನುದಾನದಲ್ಲಿ ವಿಶೇಷ ಚೇತನ ವ್ಯಕ್ತಿಗಳಿಗೆ ವ್ಯಾಪಾರ ನಡೆಸುವುದಕ್ಕಾಗಿ ರೆಡಿಮೇಡ್ ಟಿನ್ ಶಿಡ್ ವಾಣಿಜ್ಯ ಮಳಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಅರ್ಹರು ಮಾ. 16 ರೊಳಗಾಗಿ ಅರ್ಜಿ ಸಲ್ಲಿಸಲು ಹಾಗೂ ಮಾಹಿತಿಗೆ ಸಿರುಗುಪ್ಪ ನಗರಸಭೆ ಕಚೇರಿಗೆ ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತ ಗಂಗಾಧರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















